Bengaluru Rain:ಅವಾಂತರ ಸೃಷ್ಟಿದ ಮುಂಗಾರು: ರಾತ್ರಿಯಿಡೀ ಸುರಿದ ಮಳೆ ನೀರು ಮನೆಗೆ, ಮರಗಳು ಧರೆಗೆ- ನಿದ್ದೆಗೆಟ್ಟ ಉದ್ಯಾನನಗರಿ ಜನ
ಬೆಂಗಳೂರು ಜೂನ್ 2: ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅರ್ಭಟ ಶುರು ಮಾಡಿದೆ. ಶನಿವಾರ ತಡ ರಾತ್ರಿವರೆಗೂ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ಥವ್ಯಸ್ಥಗೊಂಡಿದೆ.
ನಗರದ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳಿಂದ ಮಳೆ ಕೊಂಚ ವಿರಾಮ ಪಡೆದುಕೊಂಡಿತ್ತು. ಆದರೆ ಶನಿವಾರ ಯಾವುದೇ ಮುನ್ಸೂಚನೆ ನೀಡದೇ ಮಳೆರಾಯ ಅಬ್ಬರಿಸಿದ್ದಾನೆ.

ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಎರಡು ಗಂಟೆಯ ನಂತರ ಶುರುವಾದ ಮಳೆ ತಡರಾತ್ರಿಯವರೆಗೂ ಬಿಟ್ಟು ಬಿಡದಂತೆ ಸುರಿದಿದೆ. ನಗರದ ಹೊರ ವಲಯದಲ್ಲಿ ಮಧ್ಯಾಹ್ನ ಧಾರಾಕಾರ ಮಳೆ ಸುರಿದ ಪರಿಣಾಮ ದಾಸರಹಳ್ಳಿ, ಸರ್ಜಾಪುರ, ಇಂದಿರಾನಗರ, ನಾಗಾವರ ಸೇರಿದಂತೆ ವಿವಿಧ ಕಡೆ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ಶೇಖರಣೆಯಾಗಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ವಾಹನ ಸವಾರರು ಫ್ಲೇಓವರ್ ಕೆಳ ಭಾಗದಲ್ಲಿ ನಿಂತುಕೊಂಡು ಮಳೆಯಿಂದ ರಕ್ಷಣೆ ಪಡೆಯುವಂತಹ ದೃಶ್ಯಗಳು ಕಂಡು ಬಂದವು.
ಮಳೆ ನೀರು ಮನೆಗೆ, ಮರಗಳು ಧರೆಗೆ:
ಬೊಮ್ಮನಹಳ್ಳಿಯ ಸಾರಕ್ಕಿ ಸಿಗ್ನಲ್ ಬಳಿಯ ರಾಮಕೃಷ್ಣ ನಗರದಲ್ಲಿ ಮಳೆ ನೀರು ಮಳೆಗಳಿಗೆ ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡಿ ನಿದ್ದೆ ಮಾಡದೆ ಜನ ಜಾಗರಣೆ ಮಾಡುವಂತಾಗಿದೆ. ಇದರಿಂದ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮನೆಗಳು ಮಾತ್ರವಲ್ಲದೆ ರಸ್ತೆಗಳಲ್ಲಿ ಮಳೆ ನೀರು ತುಂಬಿ ಉಕ್ಕಿ ಹರಿದಿದೆ. ಕೆಲ ರಸ್ತೆಗಳು ಅಕ್ಷರಶ: ನದಿಗಳಂತಾದ ದೃಶ್ಯಗಳು ಕಂಡು ಬಂದಿವೆ. ಫ್ಲೈಓವರ್ ಹಾಗೂ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಶೇಖರಣೆಯಾಗಿ ಕೆಲ ಹೊತ್ತು ವಾಹನ ಸಂಚಾರ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.
ಇನ್ನೂ ಮಳೆ ಅರ್ಭಟಕ್ಕೆ ಎಲ್ಲೆಡೆ ಮರಗಳು ಧರೆಗೆ ಉರುಳಿ ಬಿದ್ದಿವೆ. ಅಧಿಕ ಗಾಳಿ ಬೀಸಿದ ಪರಿಣಾಮ ಸುಲ್ತಾನ್ ಪಾಳ್ಯ, ಯಲಹಂಕ, ಯಶವಂತಪುರ ಸೇರಿದಂತೆ ಹಲವು ಕಡೆ ಸುರಿದ ಭಾರೀ ಮಳೆಗೆ ಮರ ಗಿಡ ರೆಂಬೆ ಕೊಂಬೆಗಳು ಧರಗೆ ಉರುಳಿ ಬಿದ್ದಿವೆ. ನಾಗಾವರ ಮುಖ್ಯರಸ್ತೆಯಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ನಗರದಲ್ಲಿ ಮಳೆಯ ಅರ್ಭಟಕ್ಕೆ ಪಶ್ಚಿಮ ವಲಯದಲ್ಲಿ 2, ದಕ್ಷಿಣ ವಲಯದಲ್ಲಿ 1 ಪೂರ್ವ ವಲಯದಲ್ಲಿ 2, ಆರ್.ಆರ್ ನಗರ 2, ಮಹದೇವಪುರ 1, ದಾಸರಹಳ್ಳಿ 1 ಸೇರಿದಂತೆ ಒಟ್ಟು 9 ಮರಗಳು ಕಳೆದ ದಿನ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಉರುಳಿ ಬಿದ್ದಿವೆ.
ಮುಂದಿನ ಐದು ದಿನ ಮಳೆ:
ಕೇರಳದಲ್ಲಿ ಮುಂಗಾರು ಪ್ರವೇಶ ಕಂಡಿದ್ದು, ಭಾರೀ ಮಳೆಯಾಗುತ್ತಿದೆ. ಜೂನ್ 2ರಿಂದ ಅಂದರೆ ಇಂದಿನಿಂದ ಬೆಂಗಳೂರಲ್ಲೂ ಕೂಡ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿಗೆ ಮುಂದಿನ 5 ದಿನಗಳ ಮಳೆಯ ಅಲರ್ಟ್ ನೀಡಲಾಗಿದೆ.
ಕಳೆದ ಒಂದು ವಾರದಿಂದ ಬೆಂಗಳೂರಲ್ಲಿ ಪೂರ್ವ ಮುಂಗಾರು ತಗ್ಗಿದ್ದು, ಸರಾಸರಿ 30 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇದು ಮುಂಗಾರು ಪ್ರವೇಶದ ಮುನ್ಸೂಚನೆಯಾಗಿದೆ. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಜೊತೆಗೆ ಮಳೆಯಾಗಲಿದೆ. ಈ ಹಿನ್ನೆಲೆ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿನ್ನೆ ಸುರಿದ ಮಳೆಗೆ ಸಿಲಿಕಾನ್ ಸಿಟಿ ತಂಪು ತಂಪು ಆಗಿದ್ದು, ಬೆಂಗಳೂರು ನಗರದಲ್ಲಿ ನಿನ್ನೆ 29.6 MM ಮಳೆ ದಾಖಲಾಗಿದೆ. HAL ಏಪೋರ್ಟ್ನಲ್ಲಿ 50.5MM ಮಳೆಯಾಗಿದ್ದು, ಬೆಂಗಳೂರು ಅರ್ಬನ್ 31.5 MM ಮಳೆಯಾಗಿದೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
IMD Weather Forecast: ದೇಶದ ಈ ಭಾಗಗಳಲ್ಲಿ ಮಾರ್ಚ್ ಅಂತ್ಯದಲ್ಲಿ ಭಾರೀ ಮಳೆ ಮುನ್ಸೂಚನೆ: ಐಎಂಡಿ ಎಚ್ಚರಿಕೆ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ












Click it and Unblock the Notifications