ಬೆಂಗಳೂರು ದೇಶದ ಪ್ರಮುಖ ನಗರಗಳಿಗೆ ಸದಾ ಮಾದರಿ: ಜಿಬಿಎ ಕಮೀಷನರ್ ಮಹೇಶ್ವರ್ ರಾವ್
ಬೆಂಗಳೂರು ದೇಶದ ಇನ್ನುಳಿದ ಪ್ರಮುಖ ನಗರಗಳಿಗೆ ಮಾದರಿಯಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ. ಬೆಂಗಳೂರು ದೇಶದ ಇತರ ನಗರಗಳಿಗೆ ಸದಾ ಮಾದರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು, ದೇಶದ ಇತರ ನಗರಗಳಿಗೆ ಸದಾ ಮಾದರಿ ಯಾಕೆ ಎಂದು ವಿವರಿಸಿರುವ ಅವರು, ಬೆಂಗಳೂರು, ದೇಶದ ಇತರ ನಗರಗಳಿಗೆ ಸದಾ ಮಾದರಿಯಾಗಿದೆ. ನಗರವನ್ನು ಮತ್ತಷ್ಟು ಮಾದರಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಟೆಂಡರ್ ಶ್ಯೂರ್ ಯೋಜನೆಗಳನ್ನು ವಿಶೇಷವಾಗಿ ಪ್ರಶಂಸಿದ್ದಾರೆ.

ಇಂಜಿನಿಯರ್ಗಳು ತಮ್ಮ ವೃತ್ತಿಯ ಮೇಲಿನ ನಿಷ್ಠೆ ಮತ್ತು ಅಭಿರುಚಿಯನ್ನು ಬೆಳೆಸಿಕೊಂಡು, ಸೂಕ್ಷ್ಮವಾದ ವಿಚಾರಗಳ ಮೇಲಿನ ಗಮನ ಮತ್ತು ಸಮರ್ಪಕ ಕಾರ್ಯಪದ್ಧತಿ ಅನುಸರಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಫಲಿತಾಂಶಗಳನ್ನು ಸಾಧಿಸಬಹುದೆಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ಅಭಿಯಂತರರು ಮತ್ತು ಗುತ್ತಿಗೆದಾರರಿಗಾಗಿ, ಡ.ಬ್ಲ್ಯೂ.ಆರ್.ಐ ಸಹಯೋಗದೊಂದಿಗೆ, ಯೋಜನೆಗಳ ಪರಿಣಾಮಕಾರಿ ಜಾರಿಗೆ ಹಾಗೂ ತಾಂತ್ರಿಕ ಸಾಮರ್ಥ್ಯ ಹೆಚ್ಚಿಸಲು, ಆಡಳಿತ ಸಂಶೋಧನಾ ಸಂಸ್ಥೆ(ARI)ಯಲ್ಲಿ ಎರಡು ದಿನಗಳ(ನವೆಂಬರ್ 20 ಹಾಗೂ 21) ಕಾಲ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಾಗಾರದ ಕುರಿತು ಅಭಿಯಂತರರನ್ನುದ್ದೇಶಿಸಿ ಮಾತನಾಡಿ ಅಗತ್ಯ ಸೂಚನೆಗಳನ್ನು ನೀಡಿದರು.
ಸಾರ್ವಜನಿಕ ಸಾರಿಗೆಯನ್ನು ಬಳಸಿ ಸಂಪೂರ್ಣ ನಗರ ಸಂಪರ್ಕ:
ಬೆಂಗಳೂರಿನ ಸಾರ್ವಜನಿಕರು ಪಾದಚಾರಿ ಮಾರ್ಗ ಬಳಸಿ ನಡೆದು ಪ್ರಯಾಣಿಸಲು ನಿರ್ಧರಿಸಿದಲ್ಲಿ, ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಸಂಪೂರ್ಣ ನಗರವನ್ನು ಸಂಪರ್ಕಿಸಲು ಸಾಧ್ಯವಾಗಬೇಕು. ಇದನ್ನು ನಮ್ಮ ಎಲ್ಲಾ ಯೋಜನೆಗಳಿಗೆ ಮೂಲಭೂತ ಮಾನದಂಡವಾಗಿ ಪರಿಗಣಿಸಬೇಕೆಂದು ತಿಳಿಸಿದ್ದಾರೆ. ಕಾರ್ಯಕ್ರಮದ ಭಾಗವಾಗಿ 'ನಮ್ಮ ರಸ್ತೆ ಕೈಪಿಡಿ' ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ನಂತರ ಕಾರ್ಯಾಗಾರದ ಪಾಲುದಾರರು ಕೆಳಗಿನ ವಿಷಯಗಳ ಕುರಿತು ಸವಿಸ್ತಾರವಾದ ಪ್ರಾತ್ಯಕ್ಷಿಕೆಗಳು ಹಾಗೂ ವಿಚಾರ ವಿನಿಮಯ ನಡೆಸಲಾಯಿತು.
1. ಆರ್ಎಫ್ಪಿ ಮತ್ತು ಟೆಂಡರ್ಗಳ ಸಿದ್ಧತೆ
2. ರಸ್ತೆಗಳ ನಿರ್ಮಾಣ
3. ಸಮರ್ಪಕ ಪಾದಚಾರಿ ಮಾರ್ಗಗಳ ನಿರ್ಮಾಣ
4. ಕಾರ್ಯಾಚರಣೆ ಮತ್ತು ನಿರ್ವಹಣೆ
5. ಉಪಯುಕ್ತ ಸೌಲಭ್ಯಗಳ ನಿರ್ವಹಣೆ
6. ರಸ್ತೆ ಸುರಕ್ಷತೆ / ಸುರಕ್ಷಿತ ಬೀದಿಗಳು
7. ದಿವ್ಯಾಂಗರಿಗಾಗಿ ಸಮವೇಶಿತ ಬೀದಿಗಳು
8. ವಾರ್ಡ್ ರಸ್ತೆಗಳ ವಿನ್ಯಾಸ
9. ನೆರೆ ಮತ್ತು ತಾಪಮಾನ ಏರಿಕೆ ನಿರ್ವಹಣೆ
10. CSR ಉಪಕ್ರಮಗಳು, ನಗರ ವಿನ್ಯಾಸ ವಿಭಾಗ, 'ಫಿಕ್ಸ್ ಮೈ ಪಾತ್ಹೋಲ್' ಉಪಕ್ರಮ, GIS ಮತ್ತು ಇಂಜಿನಿಯರ್ಗಳ ಪ್ರತಿಕ್ರಿಯೆಗಳ ಕುರಿತು ಚರ್ಚಿಸಲಾಯಿತು.
ಕಾರ್ಯಾಗಾರದಲ್ಲಿ ಜಿಬಿಎ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ನಗರ ಪಾಲಿಕೆಗಳ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಡಬ್ಲ್ಯೂಆರ್ಐ, ಸೆನ್ಸಿಂಗ್ ಲೋಕಲ್, ಇನ್ಫ್ರಾ ಸಪೋರ್ಟ್, ಗುತ್ತಿಗೆದಾರರು ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಂಬಂಧಿತ ಅಧಿಕಾರಿಗಳು ಪಾಲ್ಗೊಂಡಿದ್ದರು.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ












Click it and Unblock the Notifications