Namma Metro: ಹಳದಿ ಮಾರ್ಗದ 5ನೇ ರೈಲಿನ ಬೋಗಿ ಆಗಮನ, ಸಂಚಾರದ ಅಪ್ಡೇಟ್ಸ್

ಬೆಂಗಳೂರು, ಸೆಪ್ಟಂಬರ್ 30: ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣೀಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಶೀಘ್ರವೇ ಗುಡ್‌ನ್ಯೂಸ್ ನೀಡಲಿದೆ. ಐದನೇ ಡ್ರೈವರ್‌ಲೆಸ್ ಮೆಟ್ರೋ ರೈಲಿನ ಆರು ಬೋಗಿಗಳ ಪೈಕಿ ಮೂರು ಬೋಗಿಗಳು ಸೋಮವಾರ ಬೆಳಗ್ಗೆ ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿವೆ. ಅಕ್ಟೋಬರ್ ಮಧ್ಯಂತರಕ್ಕೆ ಐದು ರೈಲುಗಳು ಹೊಸ ಮಾರ್ಗದಲ್ಲಿ ಸಂಚರಿಸುವುದು ಬಹುತೇಕ ದೃಢವಾಗಿದೆ.

ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಕೋಚ್ ಫ್ಯಾಕ್ಟರಿಯಿಂದ ಸಿದ್ದಗೊಂಡ ಬೋಗಿಗಳು ಎರಡು ವಾರಗಳ ಹಿಂದಷ್ಟ ಬಹುಚಕ್ರಗಳ ಲಾರಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದವು. ಇದೀಗ ಅದರದಲ್ಲಿ ಮೂರು ಬೋಗಿಗಳು ಬೆಂಗಳೂರಿಗೆ ಬಂದಿವೆ. ಬಾಕಿ ಮೂರು ರೈಲುಗಳು ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿಗೆ ಬರಲಿವೆ.

Bengaluru Metro Yellow line s 5th Train 3 Coaches Arraived October Mid Commercial run expect

ಎಲ್ಲ ಬೋಗಿಗಳು ಬರುತ್ತಿದ್ದಂತೆ ಅವುಗಳನ್ನು ಲಾರಿಯಿಂದ ಇಳಿಸಿ, ಜೋಡಿಸಿ ನಂತರ ಟ್ರ್ಯಾಕ್‌ ಮೇಲೆ ಜೋಡಿಸಲಾಗುತ್ತದೆ. ಬಳಿಕ ತೂಕ, ಸಂಚಾರ, ಸಿಗ್ನಲ್ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಆ ಪರೀಕ್ಷೆಗಳು ಪೂರ್ಣಗೊಳ್ಳುತ್ತಿದ್ದಂತೆ ಹಾಲು ನಾಲ್ಕು ರೈಲುಗಳ ಜೊತೆಗೆ ಮತ್ತೊಂದು ರೈಲು ಆರ್‌.ವಿ.ರಸ್ತೆಯಿಂದ-ಬೊಮ್ಮಸಂದ್ರವರೆಗೆ 19ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿದೆ.

ಪ್ರಯಾಣಿಕರಿಗೆ ಆಗುವ ಅನುಕೂಲವೇನು?

ಆಗಸ್ಟ್ 10ರಂದು ಪ್ರಧಾನಿ ಮೋದಿಯವರು ಹಳದಿ ಮಾರ್ಗ ಉದ್ಘಾಟಿಸಿದ ಮೇಲೆ ಕೇವಲ ಮೂರು ರೈಲುಗಳು ಮಾತ್ರ ಸಂಚಾರ ಮಾಡುತ್ತಿದ್ದವು. ಆಗ ಒಂದು ರೈಲಿಗಾಗಿ ಪ್ರಯಾಣಿಕರು ಬರೋಬ್ಬರಿ 25 ನಿಮಿಷ ಕಾಯಬೇಕಿತ್ತು. ನಂತರ ಇತ್ತೀಚೆಗೆ ನಾಲ್ಕನೇ ರೈಲು ಸೇವೆಗೆ ನಿಯೋಜಿಸಲಾಯಿತು. ಆಲ್ಲಿಂದ ರೈಲಿನ ಆವರ್ತನ 19 ನಿಮಿಷಕ್ಕೆ ಇಳಿಯಿತು. ಇದೀಗ ಐದನೇ ರೈಲು ಸೇವೆಗೆ ನಿಯೋಜನೆಗೊಂಡರೆ ಪ್ರಯಾಣಿಕರು ರೈಲಿಗೆ ಕಾಯುವ ಸಮಯ 15-16 ನಿಮಿಷಕ್ಕೆ ತಗ್ಗುವ ಸಾಧ್ಯತೆ ಇದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.

ಕೇಂದ್ರ ಸೂಚನೆ ಪಾಲಿಸದ BMRCL

ಹೆಬ್ಬಾಳ-ಸರ್ಜಾಪುರವರೆಗೆ 37 ಕಿಲೋ ಮೀಟರ್ ಮಾರ್ಗದ ಯೋಜನೆ ಪ್ರಸ್ತಾವನೆಗೆ ಕಳೆದ ವರ್ಷ 2024 ಡಿಸೆಂಬರ್ ನಲ್ಲಿ ಕರ್ನಾಟಕ ಸರ್ಕಾರ ಅನುಮೋದನೆ ನೀಡಿತ್ತು. ಒಟ್ಟು 28,000 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯ ಒಪ್ಪಿಗೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿತ್ತು. ಆದರೆ ಪ್ರತಿ ಕಿಲೋ ಮೀಟರ್‌ಗೆ ಮೆಟ್ರೋ ಲೈನ್ ನಿರ್ಮಾಣಕ್ಕೆ 776 ಕೋಟಿ ರೂಪಾಯಿ ವೆಚ್ಚ ಅಗುವುದನ್ನು ಗಮನಸಿದಿ ಕೇಂದ್ರ ಸರ್ಕಾರ ಈ ಅಂದಾಜು ವೆಚ್ಚವನ್ನು ಪುನರ್ ಪರಿಶೀಲಿಸುವಂತೆ ಸೂಚಿಸಿತ್ತು. ಈ ಸೂಚನೆ ನೀಡಿ ನಾಲ್ಕು ತಿಂಗಳಾದರೂ ಸಹಿತ ಬಿಎಂಆರ್‌ಸಿಎಲ್ ಅಧಿಕಾರಿಗಳು ಅಂದಾಜು ವೆಚ್ಚ ಪರಿಶೀಲಿಸಲು ಮುಂದಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಮೂರು ಕಾರಿಡಾರ್‌ಗಳಲ್ಲಿ ನಿರ್ಮಾಣವಾಗಲಿರುವ ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಕೇವಲ 100 ದಿನಗಳಲ್ಲಿ ಅನುಮೋದನೆ ನೀಡಿದೆ. ಒಂದು ವರ್ಷವಾದರೂ ಈ ಬಗ್ಗೆ ಟೆಂಟರ್ ಕರೆಯದೇ ಮೆಟ್ರೋ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಹೀಗೆ ಮುಂದುವರಿದರೆ ಯೋಜನೆ ಅಂದಾಜು ವೆಚ್ಚ ಹೆಚ್ಚಾಗಲಿದೆ. 2040ರಲ್ಲಿ ಪೂರ್ಣಗೊಳ್ಳಬೇಕಾದ ಈ ಯೋಜನೆ ವಿಳಂಬಗೊಳ್ಳುವ ಜೊತೆಗೆ ಪ್ರಯಾಣಿಕರ ಮೇಲೆ ಆರ್ಥಿಕ ಹೊರೆ ಹೇರಬೇಕಾದ ಸ್ಥಿತಿ ಉಂಟಾಗಬಹುದೆಂದು ಹಲವು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+