Metro Yellow Line: ನಮ್ಮ ಮೆಟ್ರೋ ಯೆಲ್ಲೋಲೈನ್: ಬೆಂಗಳೂರು ಟ್ರಾಫಿಕ್ ಜಾಮ್ ಇಳಿಕೆ; ತಮಿಳುನಾಡಿಗೂ ಬಂಪರ್!

Namma Metro Yellow Line: ನಮ್ಮ ಮೆಟ್ರೋ ಯೋಜನೆ ಅಭಿವೃದ್ಧಿಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಭರ್ಜರಿ ಇಳಿಕೆಯಾಗಿದೆ. ಇದಲ್ಲದೇ ಪರೋಕ್ಷವಾಗಿ ತಮಿಳುನಾಡಿಗೂ ಲಾಭವಾಗಿದೆ ಎನ್ನುವ ವಿಷಯ ಇದೀಗ ಬಹಿರಂಗವಾಗಿದೆ. ತಮಿಳುನಾಡಿನ ಹೊಸೂರಿಗೆ ನಮ್ಮ ಮೆಟ್ರೋ ವಿಸ್ತರಣೆ ಮಾಡಬೇಕು ಎಂದು ಈ ಹಿಂದೆ ತಮಿಳುನಾಡು ಸರ್ಕಾರ ಮನವಿ ಮಾಡಿತ್ತು. ಆದರೆ, ಇದಕ್ಕೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾದ ಮೇಲೆ ಈ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಇದೀಗ ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಿಂದ ತಮಿಳುನಾಡಿಗೆ ಪರೋಕ್ಷವಾಗಿ ಲಾಭವಾಗಿದೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

ನಮ್ಮ ಮೆಟ್ರೋ ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಮುಕ್ತಿ

ಬೆಂಗಳೂರಿನ ನಮ್ಮ ಮೆಟ್ರೋ ಯೆಲ್ಲೋ ಲೈನ್ ಯೋಜನೆಯಿಂದಾಗಿ ಹೊಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಭರ್ಜರಿ ಇಳಿಕೆಯಾಗಿದೆ. ಮೊದಲೇ ಈ ಭಾಗದಲ್ಲಿ ಮೆಟ್ರೋ ಬಂದರೆ ಟ್ರಾಫಿಕ್ ಜಾಮ್ ಇಳಿಕೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ಇದೀಗ ಟ್ರಾಫಿಕ್ ಜಾಮ್ ಇಳಿಕೆಯಾಗಿದೆ. ಹಳದಿ ಮಾರ್ಗ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಇಳಿಕೆ ಕಂಡಿದೆ. ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆ ಪ್ರಮಾಣವು ಶೇ 10 ರಷ್ಟು ಇಳಿಕೆ ಆಗಿದೆ.

Bengaluru Metro Yellow Line Cuts Traffic Jams Boosts Connectivity Towards Tamil Nadu Hosur

ಬೆಂಗಳೂರಿನಲ್ಲಿ ಎಷ್ಟು ಟ್ರಾಫಿಕ್ ಜಾಮ್ ಇಳಿಕೆಯಾಗಿದೆ ?

ಯೆಲ್ಲೋ ಲೈನ್ ಮೆಟ್ರೋ ಸಂಚಾರ ಪ್ರಾರಂಭವಾದ ಮೇಲೆ ಎಷ್ಟು ಟ್ರಾಫಿಕ್ ಜಾಮ್ ಇಳಿಕೆಯಾಗಿದೆ ಎಂದು ನೋಡಲಾಗಿದ್ದು, ಇದರಲ್ಲಿ ಭಾರೀ ವ್ಯತ್ಯಾಸವಾಗಿರುವುದು ಕಂಡು ಬಂದಿದೆ. ಹೊಸೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ಈ ಹಿಂದಿನ ಸೋಮವಾರಗಳಿಗೆ ಹೋಲಿಕೆ ಮಾಡಿದರೆ ಬರೋಬ್ಬರಿ ಸರಾಸರಿ 11.5 ಕಿ.ಮೀನಷ್ಟು ಕಡಿಮೆಯಾಗಿದೆ. ಈ ಸಂಬಂಧ The Indian Express ವರದಿ ಮಾಡಿದೆ. ಇನ್ನು ಪೀಕ್ ಅವರ್ ಇನ್ನಷ್ಟು ಟ್ರಾಫಿಕ್ ಜಾಮ್ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಪೀಕ್ ಅವರ್‌ಗಳಲ್ಲಿ ವಿಪರೀತ ಟ್ರಾಫಿಕ್ ಜಾಮ್‌ ಸಮಸ್ಯೆ ಇರುತ್ತದೆ. ಸಂಜೆ 4 ರಿಂದ ರಾತ್ರಿ 9 ರವರೆಗೆ ಟ್ರಾಫಿಕ್ ಜಾಮ್ ಪ್ರಮಾಣವು ಶೇ 32 ರಷ್ಟು ಕಡಿಮೆಯಾಗಿದೆ. ಕೆಲಸಕ್ಕೆ ಹೋಗುವವರು ಮೆಟ್ರೋ ಪ್ರಯಾಣ ಆಯ್ಕೆ ಮಾಡಿಕೊಂಡಿರುವುದು ಈ ಬದಲಾವಣೆಗೆ ಕಾರಣವಾಗಿದೆ. ಒಟ್ಟಾರೆಯಾಗಿ ಈ ಮಾರ್ಗದಲ್ಲಿ ಶೇ 10 ರಷ್ಟು ಸಚಾರ ದಟ್ಟಣೆ ಕಡಿಮೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಯೆಲ್ಲೋ ಮೆಟ್ರೋ ರೈಲು ಹೇಗೆ ಸಹಕಾರಿಯಾಗಿದೆ ?

ಬೆಂಗಳೂರಿನ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುವ 19 ಕಿ.ಮೀ. ಉದ್ದ ಯೆಲ್ಲೋ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ವಿಪರೀತವಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಆಗುವ ಪ್ರದೇಶಗಳಲ್ಲಿ ನಮ್ಮ ಮೆಟ್ರೋ ಯೆಲ್ಲೋ ಲೈನ್ ಸಂಚರಿಸುತ್ತಿದೆ. ಬೆಂಗಳೂರಿನ ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗೆ ಈ ಮೆಟ್ರೋ ರೈಲು ಸಂಚರಿಸುತ್ತದೆ. ಮುಖ್ಯವಾಗಿ ಇದು ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯನ್ನು ಕವರ್ ಮಾಡುತ್ತದೆ. ಅಲ್ಲದೇ ನಮ್ಮ ಮೆಟ್ರೋ ಜಾಲವನ್ನು ಒಟ್ಟಾರೆಯಾಗಿ 96 ಕಿ.ಮೀ.ಗೆ ವಿಸ್ತರಿಸುತ್ತದೆ. ಬೆಂಗಳೂರಿನಲ್ಲಿ ವಿಪರೀತ ಟ್ರಾಫಿಕ್ ಜಾಮ್ ಸಮಸ್ಯೆ ಆಗುವ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೊದಲ ಸ್ಥಾನದಲ್ಲಿ ಇದೆ.

ತಮಿಳುನಾಡು ಹಾಗೂ ಹೊಸೂರಿಗೆ ಹೇಗೆ ಲಾಭವಾಗಿದೆ ?

ಇನ್ನು ನಮ್ಮ ಮೆಟ್ರೋ ಯೆಲ್ಲೋಲೈನ್ ಪರೋಕ್ಷವಾಗಿ ತಮಿಳುನಾಡು ಹಾಗೂ ತಮಿಳುನಾಡಿನ ಹೊಸೂರು ಭಾಗದವರಿಗೂ ಅನುಕೂಲವಾಗಿದೆ. ಕರ್ನಾಟಕದ ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶಕ್ಕೆ ಕೇವಲ 19 ಕಿ.ಮೀ ದೂರವಿದೆ. ಇಲ್ಲಿಂದ ಅಂದಾಜು 30 ನಿಮಿಷದಲ್ಲಿ ತಲುಪಬಹುದಾಗಿದೆ. ಹೊಸೂರು ಕೈಗಾರಿಕೆಗೆ ಹೆಸರುವಾಸಿಯಾಗಿದೆ. ಅಲ್ಲದೇ ಇಲ್ಲಿಂದಲೂ ಸಾವಿರಾರು ಜನ ಬೆಂಗಳೂರಿಗೆ ಬರುವುದು ಹಾಗೂ ಬೆಂಗಳೂರಿನಲ್ಲಿ ಉದ್ಯೋಗ ಕಂಡಿಕೊಂಡಿರುವುದು ಇದೆ. ಬೆಂಗಳೂರು - ಹೊಸೂರು ಮಾರ್ಗವಾಗಿ ಕೈಗಾರಿಕೆಗೆ ಸಂಬಂಧಿಸಿದ ಸರಕು - ಸಾಗಾಣಿಕೆ ಹೆಚ್ಚಾಗಿದೆ. ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಿಂದ ಈ ಭಾಗದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿದ್ದು ಪರೋಕ್ಷವಾಗಿ ಈ ಯೆಲ್ಲೋ ಮೆಟ್ರೋ ಲೈನ್‌ನಿಂದ ತಮಿಳುನಾಡಿಗೂ ಲಾಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+