Namma Metro Good News: ಗುಲಾಬಿ ಮಾರ್ಗ ಕಾರ್ಯಾರಂಭಕ್ಕೆ ಜ.11ರಿಂದ ರೋಲಿಂಗ್ ಸ್ಟಾಕ್ ಪರೀಕ್ಷೆ
ಬೆಂಗಳೂರು: ಅಷ್ಟ ದಿಕ್ಕುಗಳಿಗೂ ಜಾಲ ವಿಸ್ತರಣೆ ಮಾಡುತ್ತಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಒಂದೊಂದೇ ಹೊಸ ಮಾರ್ಗವನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲು ಸಜ್ಜಾಗಿದೆ. ಇದರ ಭಾಗವಾಗಿ 21.5 ಕಿಲೋ ಮೀಟರ್ ಉದ್ದದ ಗುಲಾಬಿ ಮಾರ್ಗ (Namma Metro Pink Line) ತೆರೆಯಲು ನಾಳೆ ಜನವರಿ 11ರ ಭಾನುವಾರದಿಂದ ರೋಲಿಂಗ್ ಸ್ಟಾಕ್ ಪರೀಕ್ಷೆಗಳನ್ನು ಅಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದು ನಿಗಮ ಅಧಿಕೃತ ಮಾಹಿತಿ ನೀಡಿದೆ.
ಕಾಳೆನ ಅಗ್ರಹಾರದಿಂದ ತಾವರೆಕೆರೆಯವರೆಗೆ ಇರುವ ಗುಲಾಬಿ ಮಾರ್ಗದಲ್ಲಿ (ಸುಮಾರು 7.5 ಕಿಮೀ ಉದ್ದ) ರೋಲಿಂಗ್ ಸ್ಟಾಕ್ ಪರೀಕ್ಷೆಗಳನ್ನು ದಿನಾಂಕ 11ನೇ ಜನವರಿ 2026 ರಿಂದ ಆರಂಭಿಸಿ ಏಪ್ರಿಲ್ 2026ರ ಮಧ್ಯಭಾಗದೊಳಗೆ ನಿಗಮವು ಪೂರ್ಣಗೊಳಿಸುವ ಯೋಜನೆ ಹೊಂದಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಈ ಮುಖ್ಯ ಪರೀಕ್ಷೆಗಳು (Main Line Testing) ವಾಣಿಜ್ಯ ಸಂಚಾರ ಮಾಡುವ ಮೊದಲು ಕೈಗೊಳ್ಳಲಾಗುವ ಅತ್ಯಂತ ಮಹತ್ವದ ಚಟುವಟಿಕೆ ಇದಾಗಿದೆ. ನೈಜ ಕ್ಷೇತ್ರ ಪರಿಸ್ಥಿತಿಗಳಲ್ಲಿ ರೈಲುಗಳ ಕಾರ್ಯಕ್ಷಮತೆ ಹಾಗೂ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಮಗ್ರ ಪರಿಶೀಲನೆಗಳು ಈ ಪರೀಕ್ಷೆಯಲ್ಲಿ ಒಳಗೊಂಡಿರುತ್ತವೆ. ಅದಾದ ಬಳಿಕ ರೈಲ್ವೆ ಮಂಡಳಿ ಹಾಗೂ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಶಾಸನಬದ್ಧ ಅನುಮೋದನೆಗಳನ್ನು ಪಡೆಯಲಾಗುತ್ತದೆ.
ಈ ಮೇಲ್ಕಂಡ ಪ್ರೊಟೋಟೈಪ್ ಮೆಟ್ರೋ ರೈಲು ಪರೀಕ್ಷಾ ಅವಧಿಯಲ್ಲಿ ಅವಧಿಯಲ್ಲಿ ಟ್ರಾಕ್ಷನ್ ಮತ್ತು ಬ್ರೇಕ್, ಆಸಿಲೇಷನ್ (Oscillation), ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳೊಂದಿಗೆ ಏಕೀಕರಣ (Integration) ಸೇರಿದಂತೆ ಹಲವು ಪರೀಕ್ಷೆಗಳು ನಡೆಸಲಾಗುತ್ತದೆ. ಇದು ಗುಲಾಬಿ ಮಾರ್ಗದಲ್ಲಿನ ಯೋಜನೆ ಕಾರ್ಯಾಚರಣೆಯ ಅಂತಿಮ ಹಂತವಾಗಿದೆ. ಈ ಮೂಲಕ ಬಿಎಂಆರ್‌ಸಿಎಲ್ ಮತ್ತೊಂದು ಮಹತ್ವದ ಮೈಲಿಗಲು ತಲುಪುವ ಸೂಚನೆ ಇದಾಗಿದೆ. ಸಾರ್ವಜನಿಕ ಸೇವೆಗೆ ಸದರಿ ಮಾರ್ಗ ತೆರೆಯುವ ಮೊದಲು ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಬಿಎಂಆರ್‌ಸಿಎಲ್ ಸದಾ ಬದ್ಧವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಣಿಜ್ಯ ಕಾರ್ಯಾಚರಣೆ ಮೇನಲ್ಲಿ ಆರಂಭ
ನಾಗವಾರದಿಂದ-ಕಾಳೇನ ಅಗ್ರಹಾರವರೆಗಿನ ಸುಮಾರು 21.5ಕಿಲೋ ಮೀಟರ್ ಉದ್ದದ ಗುಲಾಬಿ ಮಾರ್ಗವನ್ನು ಇದೇ ವರ್ಷ ಎರಡು ಹಂತಗಳಲ್ಲಿ ತೆರೆಯಲು ಬಿಎಂಆರ್‌ಸಿಎಲ್ ಸಿದ್ಧವಾಗಿದೆ. ಮೊದಲ ಹಂತದಲ್ಲಿ ಈ ಮೇಲಿನ ಪರೀಕ್ಷಾ ಮಾರ್ಗವಾದ ಕಾಳೆನ ಅಗ್ರಹಾರದಿಂದ ತಾವರೆಕೆರೆ (7.5km) ಮಾರ್ಗವನ್ನು ಇದೇ ಮೇ ತಿಂಗಳಲ್ಲಿ ಸೇವೆಗೆ ಮುಕ್ತಗೊಳ್ಳಲಿದೆ.
ಈ ಮಾರ್ಗದಲ್ಲಿ ಎತ್ತರಿಸಿದ ಆರು ನಿಲ್ದಾಣಗಳು ಬರುತ್ತವೆ.
ಕಾಳೇನ ಅಗ್ರಹಾರ-ನಾಗವಾರ ಲೈನ್ ವರ್ಷಾಂತ್ಯಕ್ಕೆ ಮುಕ್ತ ಉಳಿದಂತೆ ಕಾಳೇನ ಅಗ್ರಹಾರದಿಂದ ನಾಗವಾರವರೆಗೆ (13.5km) ಸುರಂಗ ಮಾರ್ಗ ಬರುತ್ತದೆ. ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿವೆ. ಅಂತಿಮ ಕೆಲವು ಕೆಲಸಗಳು ಬಾಕಿ ಇವೆ. ಅದಾಗುತ್ತಿದ್ದಂತೆ ಆ ಮಾರ್ಗದಲ್ಲೂ ಸಂಪೂರ್ಣ ಪರೀಕ್ಷೆಗಳು ನಡೆಯಲಿವೆ. ಅದಕ್ಕಾಗಿ ಚೀನಾದೊಂದಿಗಿನ ಒಪ್ಪಂದಂತೆ ರೈಲುಗಳು ಬರಬೇಕಿದೆ. ಈ ಮಾರ್ಗವನ್ನು ಎರಡನೇ ಹಂತದಲ್ಲಿ ಇದೇ ವರ್ಷ 2026 ಡಿಸೆಂಬರ್ ಹೊತ್ತಿಗೆ ತೆರೆಯಲು ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.
-
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications