Namma Metro ನಿಲ್ದಾಣಗಳಿಗೆ ತಮಿಳು ನಾಯಕ, ಜಯಲಲಿತಾ MGR, ಕರುಣಾನಿಧಿ ಹೆಸರು: ಹೊಸೂರು ವಿಸ್ತರಣೆಗೆ ವಿರೋಧ

ಬೆಂಗಳೂರು: ರಾಜಧಾನಿ ಬೆಂಗಳೂರು ನಮ್ಮ ಮೆಟ್ರೋ ಬೊಮ್ಮಸಂದ್ರದಿಂದ ಹೊಸೂರುವರೆಗೆ ವಿಸ್ತರಣೆಗೆ ವ್ಯಾಪಕ್ತ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಕುರಿತಂತೆ ಆರ್ಥಿಕ, ಆಡಳಿತಾತ್ಮಕ, ತಾಂತ್ರಿಕ ಸಂಭವನೀಯ ಸಮಸ್ಯೆಗಳನ್ನು ಬಿಚ್ಚಿಡಲಾಗಿದೆ. ಕನ್ನಡಪರ ಸಂಘಟನೆಗಳಂತೂ ಅಂತಾರಾಜ್ಯವರೆಗೆ ಮೆಟ್ರೋ ಮಾರ್ಗ ನಿರ್ಮಿಸಿದರೆ ಬೆಂಗಳೂರು ಸಣ್ಣ ತಮಿಳುನಾಡು ಆಗಿ ಪರಿವರ್ತನೆ ಆಗುತ್ತದೆ ಎಂದು ಆಕ್ಷೇಪಗಳು ತಿವ್ರಗೊಂಡಿವೆ.

ನಮ್ಮ ಮೆಟ್ರೋ ಹಳದಿ ಮಾರ್ಗ ಆರ್.ವಿ.ರಸ್ತೆ (ಹಸಿರು ಮಾರ್ಗ) ಯಿಂದ ಬೊಮ್ಮಸಂದ್ರವರೆಗೆ ಸುಮಾರು 20 ಕಿ ಮೀ ಉದ್ದವಿದೆ. ತಮಿಳುನಾಡಿನ ಹೊಸೂರಿನಿಂದ ಅತ್ತಿಬೆಲೆ ಗಡಿ, ಚಂದಾಪುರ ಮೂಲಕ ಬೊಮ್ಮಸಂದ್ರ ಮೆಟ್ರೋ ನಿರ್ಮಿಸಲು ತಮಿಳುನಾಡು ಇನ್ನಿಲ್ಲದ ಆಸಕ್ತಿ ತೋರಿಸುತ್ತಿದೆ. ಕಾವೇರಿ ನೀರು, ಭಾಷೆ ವಿಚಾರದಲ್ಲಿ ಸದಾ ಖ್ಯಾತೆ ತೆಗೆಯುವ ತಮಿಳುನಾಡು, ನಮ್ಮ ರಾಜ್ಯದೊಂದಿಗೆ ಸಂಬಂಧ ಹೊಂದಲು ಬಯುತ್ತಿರುವುದರ ಹಿಂದೆ ಸ್ವಾರ್ಥ ಅಡಗಿದೆ ಎಂದು ಕನ್ನಡ ಪರ ಚಳವಳಿಗಾರರಾದ ವಾಟಾಳ್ ನಾಗರಾಜ್ ಮತ್ತು ಕರವೇ ಪ್ರವೀಣ್ ಶೆಟ್ಟಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Bengaluru Metro Extension to Hosur

ನಮ್ಮ ಮೆಟ್ರೋಗೆ ಜಯಲಲಿತಾ, ಕರುಣಾನಿಧಿ, ಎಂಜಿಆರ್ ಹೆಸರು!

ಹೊಸೂರುವರೆಗೆ ನಮ್ಮ ಮೆಟ್ರೋ ವಿಸ್ತರಣೆಗೆ ಅವಕಾಶ ನೀಡಬಾರದು. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಅನುಮೋದನೆ ಕೊಡದಂತೆ ಹೋರಾಟಗಾರರು ಒತ್ತಾಯಿಸಿದ್ದಾರೆ. ಇದೇ ವಿಚಾರವಾಗಿ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಒಂದು ವೇಳೆ ಬೊಮ್ಮಸಂದ್ರ-ಹೊಸೂರು ಯೋಜನೆಗೆ ಅವಕಾಶ ನೀಡಿದ್ದೇ ಆದಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಕರುಣಾನಿಧಿ, ಜಯಲಲಿತಾ ಮತ್ತು ಎಂಜಿ ಆರ್ ಅವರು ಹೆಸರು ಇಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಯೋಜನೆ ವಿಚಾರದಲ್ಲಿ ಜಾತಿ, ದ್ವೇಷದ ಪ್ರಶ್ನೆ ಬರುವುದಿಲ್ಲ. ಬದಲಾಗಿ ನಾಡಿನ ಜನರ ಹಿತಾಸಕ್ತಿ, ಕನ್ನಡಿಗರು, ಉದ್ಯೋಗ, ಬಂಡವಾಳ ವಿಚಾರಗಳು ಬರುತ್ತವೆ. ಮುಖ್ಯವಾಗಿ ಕರ್ನಾಟಕ ರಾಜ್ಯದ ಹಿತಾಸಕ್ತಿ ಕಾರಣಕ್ಕಾಗಿ ಅನುಮೋದನೆ ನೀಡಬಾರದು ಎಂದು ಚಳವಳಿಗಾರರು ಕೋರಿದ್ದಾರೆ. ಇದೇ ವಿಚಾರ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಮೇಲಿಂದ ಮೇಲೆ ಚರ್ಚೆಯು ಆಗುತ್ತಿದೆ.

ಸಿಎಂ ವಿಜಯ್ ಮನವಿ: ಪದೇ ಪದೇ ಚರ್ಚೆ

ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಅವರು, ಬೆಂಗಳೂರಿನ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರುವರೆಗೆ ಮೆಟ್ರೋ ವಿಸ್ತರಣೆಗೆ ಅವಕಾಶ ನೀಡಬೇಕು. ಇದರಿಂದ ಎರಡು ರಾಜ್ಯಗಳ ಬಾಂಧವ್ಯ, ಉದ್ಯೋಗ, ಸಾರಿಗೆ ಸುಧಾರಣೆಗೆ ಅನುಕೂಲವಾಗುತ್ತದೆ ಎಂದು ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿಯವರು ಹಾಗೂ ಹಣಕಾಸು ಇಲಾಖೆಗೆ ಕೋರಿದ್ದರು.

ಇದರ ಬೆನ್ನಲ್ಲೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಕರ್ನಾಟದ ಬೆಂಗಳೂರಿನಲ್ಲಿ ಆಗುವ ಹೂಡುಕೆ ಉದ್ಯೋಗ ಕ್ರಾಂತಿ, ಮಾನವ ಸಂಪನ್ಮೂಲಗಳು ಸಂಪೂರ್ಣವಾಗಿ ಹೊಸೂರು/ತಮಿಳುನಾಡು ಪಾಲಾಗುತ್ತದೆ. ಆದ್ದರಿಂದ ಯೋಜನೆಗೆ ಅನುಮತಿ ನೀಡದಂತೆ ಅವರು ಪ್ರತಿಕ್ರಿಯಿಸಿದ್ದರು.

ಹೊಸೂರಲ್ಲಿ ತಮಿಳುನಾಡು ಮೆಗಾ ಪ್ಲ್ಯಾನ್

ಹೊಸೂರಲ್ಲಿ ತಮಿಳುನಾಡು ಸರ್ಕಾರ 500 ಎಕ್ರೆ ಜಾಗ ಕಾಯ್ದಿರಿಸಿದೆ. ಅಲ್ಲಿ ಐಟಿ ಬಿಟಿ ಕಂಪನಿಗಳ ಕಾರಿಡಾರ್ ನಿರ್ಮಾಣ, ಹೊಸ ಕೈಗಾರಿಕೆಗಳಿಗೆ ಪ್ಲ್ಯಾನ್ ಮಾಡಿದೆ. ಹೊಸೂರು ತನಕೆ ಮಟ್ರೋ ವಿಸ್ತರಣೆ ಆದರೆ ಕೈಗಾರಿಕೆ, ಐಟಿ ಕಂಪನಿಗಳ ಸೆಳೆತ ಇನ್ನಿತರ ಪ್ರಯೋಜನಗಳು ಬೆಂಗಳೂರಿನಿಂದ ಕೈತಪ್ಪಿ ಆ ರಾಜ್ಯದ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿಂದೆ ಕಾರ್ಯಸಾಧ್ಯತಾ ವರದಿಯಲ್ಲಿ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೆ ಕರ್ನಾಟಕ ಸರ್ಕಾರ, ಅಲ್ಲಿಂದ ಮುಂದೆ ತಮಿಳು ಸರ್ಕಾರ ಮೆಟ್ರೋ ನಿರ್ಮಿಸುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ ವಿದ್ಯುತ್ ಸರಬರಾಜು ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ಮಾತುಕತೆ ಅಲ್ಲಿಗೆ ನಿಂತಿತ್ತು. ಇದೀಗ ಸಿಎಂ ವಿಜಯ್ ಮನವಿ ಬಳಿಕ ಆಗಾಗ ಚರ್ಚೆ ಆಗುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+