10,00,000 ದಾಟಿದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ, ಬೆಂಗಳೂರಿಗೆ ಬಂತು 4ನೇ ರೈಲು

ಬೆಂಗಳೂರು, ಆಗಸ್ಟ್ 13: ಬೆಂಗಳೂರು ನಮ್ಮ ಮೆಟ್ರೋ ರೈಲಿನ ಹೊಸ ಮಾರ್ಗವೊಂದು ತೆರೆಯುತ್ತಿದ್ದಂತೆ ಒಟ್ಟು ಪ್ರಯಾಣಿಕರ ಸಂಖ್ಯೆ 10,00,000 ದಾಟಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಮೊದಲ ದಿನ ಸೋಮವಾರ (ಆಗಸ್ಟ್ 10) ಹಳದಿ ಮಾರ್ಗದಲ್ಲಿ ಎಷ್ಟು ಜನ ಸಂಚರಿಸಿದ್ದಾರೆ. ಮೂರು ಮಾರ್ಗಗಳಲ್ಲಿ ಎಷ್ಟು ಜನ ಪ್ರಯಾಣಿಸಿದ್ದಾರೆ ಎಂಬ ಅಂಕಿ ಸಂಖ್ಯೆ ಇಲ್ಲಿದೆ.

ಆರ್‌.ವಿ.ರಸ್ತೆ-ಬೊಮ್ಮಸಂದ್ರವರೆಗಿನ ಸುಮಾರು 19 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯ ಐಟಿ ಕಾರಿಡಾರ್‌ ಅನ್ನು ಸಂಪರ್ಕಿಸುತ್ತದೆ. ನೇರಳೆ ಮಾರ್ಗದ ರೈಲು ಬಿಟ್ಟರೆ, ಐಟಿ ಕಾರಿಡಾರ್ ಪ್ರದೇಶ ಸಂಪರ್ಕಿಸಿದ ಎರಡನೇ ಮೆಟ್ರೋ ಮಾರ್ಗ ಇದಾಗಿದೆ. ಸೋಮವಾರ ಒಂದೇ ದಿನಕ್ಕೆ ಹಳದಿ ಮಾರ್ಗದಲ್ಲಿ ಬರೋಬ್ಬರಿ 52,215 ಜನರು ಓಡಾಡಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ಅಧೀಕೃತ ಮಾಹಿತಿ ನೀಡಿದ್ದಾರೆ.

Bengaluru Metro Crosses 1 Million Daily Passengers 4th Yellow Line Train Arrives

ಇದೇ ರೀತಿ ನಮ್ಮ ಮೆಟ್ರೋ ಚಲಘಟ್ಟ-ವೈಟ್‌ಫಿಲ್ಡ್ ನೇರಳೆ ಮಾರ್ಗ -1 ರಲ್ಲಿ ಆಗಸ್ಟ್ 10ರಂದು 4,51,816 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಇನ್ನೂ ಎರಡನೇ ಮಾರ್ಗ ಹಸಿರು ಲೈನ್‌ನಲ್ಲಿ 2,91,677 ಮಂದಿ ಸಂಚರಿಸಿದ್ದಾರೆ. ಪ್ರಮುಖ ಮಾರ್ಗಗಳಲ್ಲಿ ಬದಲಾವಣೆಗೆ ಸಹಕಾರಿಯಾದ ಮೆಜೆಸ್ಟಿಕ್ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಬರೋಬ್ಬರಿ 2,52,323 ಪ್ರಯಾಣಿಕರು ಬೋರ್ಡಿಂಗ್ ಆಗಿದ್ದಾರೆ. ಇದೆಲ್ಲ ಒಟ್ಟುಗೂಡಿಸಿದರೆ ನಮ್ಮ ಮೆಟ್ರೋ ರೈಲಿನಲ್ಲಿ ಒಂದೇ ದಿನ 10,48,031 ಪ್ರಯಾಣಿಕರ ಸಂಚಾರ ದಾಖಲಾಗಿದೆ.

ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ಲಕ್ಷಗಳ ಸಂಖ್ಯೆಯಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿತ್ತು. ಅದಾದ ಬಳಿಕ ಅಷ್ಟಾಗಿ ಏರಿಕೆ ಆಗಿರಲಿಲ್ಲ. ಈವರೆಗೆ 9.20 ಲಕ್ಷ ಪ್ರಯಾಣಿಕರೇ ಒಂದು ದಿನ ಹೆಚ್ಚಿನ ಪ್ರಯಾಣಿಕರ ಸಂಖ್ಯೆಯಾಗಿತ್ತು. ಇದೀಗ ಹೊಸ ಮಾರ್ಗ ತೆರೆದ ಮೊದಲ ದಿನವೇ ಮೆಟ್ರೋ ಅವಲಂಬನೆ ಹೆಚ್ಚಾಗಿದ್ದು ಗೊತ್ತಾಗಿದೆ.

ಹಳದಿ ಮಾರ್ಗದ 4ನೇ ರೈಲು ಆಗಮನ

ಪಶ್ಚಿಮ ಬಂಗಾಳದ ಟಿಟಾಗಢನಿಂದ ಲಾರಿ ಮೂಲಕ ಹೊರಟಿದ್ದ ಹಳದಿ ಮಾರ್ಗ ಡ್ರೈವರ್‌ಲೆಸ್ ಮೆಟ್ರೋ ರೈಲು ಸೆಟ್ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಆಗಮಿಸಿವೆ. ನಾಲ್ಕನೇ ರೈಲು ಇದಾಗಿದ್ದು. ಈ ನಾಲ್ಕನೇ ರೈಲಿನ ಇನ್ನೂ ಕೆಲವು ಬೋಗಿಗಳು ನಾಳೆ ನಾಡಿದ್ದರಲ್ಲಿ ಬರಲಿವೆ. ಅದಾದ ಬಳಿಕ ತಿಂಗಳಾಂತ್ಯದವರೆಗೆ ವಿವಿಧ ಪರೀಕ್ಷೆಗಳು, ತಪಾಸಣೆಗಳು ಜರುಗಲಿವೆ. ನಂತರವೇ ಹೆಚ್ಚುವರಿ ರೈಲು ಸೇವೆ ಹಳದಿ ಮಾರ್ಗದಲ್ಲಿ ಲಭ್ಯವಾಗಲಿದೆ. ಮುಂದಿನ ಅಕ್ಟೋಬರ್ ತಿಂಗಳಿನಿಂದ ಪ್ರತಿ ತಿಂಗಳು ಎರಡು ರೈಲು ಸೆಟ್‌ಗಳು ಟಿಟಾಗಢ್‌ನಿಂದ ಬೆಂಗಳೂರಿಗೆ ಬರಲಿವೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+