Bengaluru Metro: ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಪೊಲೀಸರಿಗಾಗಿ ಸಮುದಾಯ ಭವನ ನಿರ್ಮಿಸಿದ ಬಿಎಂಆರ್‌ಸಿಎಲ್
ಬೆಂಗಳೂರು, ಜುಲೈ 18: ಕೆಆರ್ ಪುರಂ-ಸೆಂಟ್ರಲ್ ಸಿಲ್ಕ್ ಬೋರ್ಡ್ ಲೈನ್‌ನ ಸಂಬಂಧಿತ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಕಟ್ಟಡವನ್ನು ಸ್ವಾಧೀನಪಡಿಸಿಕೊಂಡ ನಂತರ, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಹೊಚ್ಚ ಹೊಸ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸುತ್ತಿದೆ.
"ಪೊಲೀಸ್ ಸಮುದಾಯ ಭವನದ ಶೇಕಡಾ 80 ರಷ್ಟು ಪೂರ್ಣಗೊಂಡಿದೆ ಮತ್ತು ಪೂರ್ಣಗಳಿಸಲು ಕೆಲಸಗಳು ತ್ವರಿತವಾಗಿ ನಡೆಯುತ್ತಿವೆ. ಕೊರೊನಾ ಸಾಂಕ್ರಾಮಿಕ ಮತ್ತು ಭಾರಿ ಮಳೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳುವುದು 1.5 ವರ್ಷ ತಡವಾಗಿದೆ ಎಂದು ಹಿರಿಯ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮುಂದಿನ ಎರಡು ತಿಂಗಳೊಳಗೆ ಅದನ್ನು ಪೂರ್ಣಗೊಳ್ಳಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ನೆಲಮಹಡಿ ಸೇರಿ ಒಂದು ಮಹಡಿ ಹೊಂದಿರುವ ಭವನಕ್ಕೆ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಇದು ಬಸ್ ನಿಲ್ದಾಣದ ಪಕ್ಕದ ಜಂಕ್ಷನ್‌ನಲ್ಲಿದೆ. ಕೆಲವು ವರ್ಷಗಳ ಹಿಂದೆ ನಾವು ಕೆಎಸ್‌ಆರ್‌ಪಿ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಾಗ, ಅವರು ಶೇ 25 ರಷ್ಟು ನಿರ್ಮಾಣವನ್ನು ಪೂರ್ಣಗೊಳಿಸಿದ್ದರು. ನಾವು ಅದನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದೇವೆ ಎಂದು ತಿಳಿದಿದ್ದರಿಂದ ಅವರು ತಮ್ಮ ಕೆಲಸವನ್ನು ನಿಲ್ಲಿಸಬೇಕಾಯಿತು," ಎಂದ ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ.
ಅಕ್ಟೋಬರ್ ವೇಳೆಗೆ ಕಟ್ಟಡ ಸಿದ್ಧ
ನಂತರ ಹಳೆಯ ಕಟ್ಟಡವನ್ನು ಬಿಎಂಆರ್‌ಸಿಎಲ್ ನೆಲಸಮಗೊಳಿಸಬೇಕಿತ್ತು. ಹೊಸ ಕಟ್ಟಡವು ಫ್ಲೈಓವರ್‌ಗೆ ಸಮೀಪದಲ್ಲಿದೆ ಎಂದು ಅವರು ಹೇಳಿದರು. ರೈಲ್-ಕಮ್ ರೋಡ್ ಮೇಲ್ಸೇತುವೆಯು ಜಯದೇವ ಮೆಟ್ರೋ ನಿಲ್ದಾಣದಿಂದ ಸಿಲ್ಕ್ ಬೋರ್ಡ್ ಫ್ಲೈಓವರ್‌ಗೆ ಸಂಪರ್ಕ ಕಲ್ಪಿಸುತ್ತದೆ, ಇದನ್ನು ಬಿಎಂಆರ್‌ಸಿಎಲ್ ನಿರ್ಮಿಸುತ್ತಿದೆ ಆದರೆ ಬಿಬಿಎಂಪಿ ಅಥವಾ ಬಿಡಿಎ ಹಣವನ್ನು ನೀಡಲಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಸಮುದಾಯ ಭವನಕ್ಕೆ ನವೆಂಬರ್ 27, 2020 ರಂದು ಅಡಿಪಾಯ ಹಾಕಲಾಯಿತು. "ಇದು ಜೂನ್ 2022 ರ ವೇಳೆಗೆ ಮುಗಿಯಬೇಕಾಗಿತ್ತು, ಆದರೆ ಸಾಂಕ್ರಾಮಿಕ ಮತ್ತು ಭಾರೀ ಮಳೆಯಿಂದಾಗಿ, ಅದು ಸಂಪೂರ್ಣವಾಗಿ ವಿಳಂಬವಾಯಿತು. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ ಕಟ್ಟಡ ಸಿದ್ಧವಾಗಲಿದೆ" ಎಂದು ಹೇಳಲಾಗಿದೆ.
ವೆಂಕಟರಾಮನ್ ಅಸೋಸಿಯೇಟ್ಸ್ ಬಿಎಂಆರ್‌ಸಿಎಲ್‌ಗಾಗಿ ಕಟ್ಟಡವನ್ನು ವಿನ್ಯಾಸಗೊಳಿಸಿದೆ ಎಂದು ಅವರು ಹೇಳಿದರು. ಕಟ್ಟಡವನ್ನು ಮದುವೆ ಮಂಟಪವಾಗಿ ಅಥವಾ ಸಮ್ಮೇಳನಗಳು ಅಥವಾ ಸಭೆಗಳನ್ನು ನಡೆಸಲು ಬಳಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. "ನೆಲ ಮಹಡಿಯಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳವಿದೆ," ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications