Namma Metro: ನೀಲಿ ಮಾರ್ಗ ಕಾರ್ಯಾಚರಣೆಗೆ ಗಡುವು, ಹಳದಿ ಮಾರ್ಗಕ್ಕೆ ಬಂತು 15ನೇ ರೈಲು

ಬೆಂಗಳೂರು: ನಗರದ ಹೊರ ವರ್ತುಲ ರಸ್ತೆ, ಪ್ರಮುಖ ಜಂಕ್ಷನ್ ಹಾಗೂ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬಲ್ಲ ಬೆಂಗಳೂರಿನ ಮೆಟ್ರೋ ನೀಲಿ ಮಾರ್ಗಕ್ಕೆ (ಸಿಲ್ಕ್ ಬೋರ್ಡ್-ಕೆ.ಆರ್.ಪುರಂ-ವಿಮಾನ ನಿಲ್ದಾಣ) ಸಂಬಂಧಿಸಿದಂತೆ BMRCL ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಖಡಕ್ ಎಚ್ಚರಿಕೆ ನೀಡಿದ್ದು, ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಗಡುವು ವಿಧಿಸಿದ್ದಾರೆ.

ಗೋಲ್ಡ್‌ಮನ್ ಸ್ಯಾಕ್ಸ್, ಹೆಲಿಯೊಸ್ ಬಿಸಿನೆಸ್ ಪಾರ್ಕ್, ಕಾಡುಬೀಸನಹಳ್ಳಿಯಲ್ಲಿ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘ (ORRCA), ಐಟಿ ಪಾರ್ಕ್ ಮಾಲೀಕರು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಜತೆ ಸಚಿವರು ಸಮಾಲೋಚನಾ ಸಭೆ ನಡೆಸಿ ಮಾತನಾಡಿದರು.

Bengaluru Metro Blue Line

ಬೆಂಗಳೂರು ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ 59 ಕಿಲೋ ಮೀಟರ್ ನೀಲಿ ಮಾರ್ಗ ನಿರ್ಮಾಣವಾಗುತ್ತಿದೆ. 2ಎ ಹಂತ (ಸಿಲ್ಕ್‌ಬೋರ್ಡ್-ಕೆ.ಆರ್. ಪುರಂವರೆಗಿನ ಮಾರ್ಗ) ದಲ್ಲಿ ಇದೇ ಅಕ್ಟೋಬರ್ ನಲ್ಲೇ 2027ರೊಳಗೆ ವಾಣಿಜ್ಯ ಕಾರ್ಯಾಚರಣೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಮೊದಲ ಹಂತವನ್ನು ಇದೇ 2026ರ ಡಿಸೆಂಬರ್ ಒಳಗೆ ಕಾರ್ಯಾಚರಣೆ ಆರಂಭಿಸುವಂತೆ, ನಂತರ 2027ರಲ್ಲಿ ಪೂರ್ಣ ಕಾಮಗಾರಿ ಮುಗಿಸಿ ಸಂಪೂರ್ಣ ಮಾರ್ಗ ತೆರೆಯುವಂತೆ ಸಚಿವರು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಗೆ ನಿರ್ದೇಶಿಸಿದರು. ಸಿಲ್ಕ್‌ ಬೋರ್ಡ್‌ನಿಂದ ಆಗರ, ಕಾಡುಬೀಸನಹಳ್ಳಿ, ಮಾರತ್ತಹಳ್ಳಿ, ಹೆಣ್ಣೂರು, ಹೆಬ್ಬಾಳ ಮಾರ್ಗದ ಲಕ್ಷಾಂತರ ಪ್ರಯಾಣಿಕರಿಗೆ ನೀಲಿ ಮಾರ್ಗ ಅನುಕೂಲವಾಗಲಿದೆ. 2024ರಲ್ಲೇ ಪೂರ್ಣಗೊಳ್ಳಬೇಕಾದ ಯೋಜನೆಗೆ 2026 ಮಾರ್ಚ್‌ನಲ್ಲಿ ಮೊದಲ ಮಾರ್ಗವನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಇದೀಗ ಆ ಗಡುವು ಮೀರಲಾಗಿದೆ.

ಹಳದಿ ಮಾರ್ಗ: 15ನೇ ರೈಲು ಆಗಮನ, 13ನೇ ರೈಲು ಸೇವೆ?

ಆರ್‍‌.ವಿ.ರಸ್ತೆ-ಬೊಮ್ಮಸಂದ್ರ ವರೆಗಿನ 19 ಕಿಲೋ ಮೀಟರ್ ಹಳದಿ ಮಾರ್ಗಕ್ಕಾಗಿ ಹೊಸ ಮೆಟ್ರೋ ರೈಲುಗಳು ಆಗಮಿಸಿವೆ. ಆದಷ್ಟು ಶೀಘ್ರವೇ 13ನೇ ರೈಲು ಸೇವೆಗೆ ಇಳಿಯಲಿದ್ದು, ಇದರಿಂದ ರೈಲುಗಳ ಆವರ್ತನ ಸಮಯದಲ್ಲಿ ಇಳಿಕೆ ಆಗಲಿದೆ. ಈಗಾಗಲೇ 14 ರೈಲುಗಳು ಆಗಮಿಸಿದ್ದು, ಇಂದು ಸೋಮವಾರ ಜೂನ್ 27ರಂದು 15ನೇ ರೈಲು ನಗರದ ಹೆಬ್ಬಗೋಡಿ ಡಿಪೋಗೆ ಆಗಮಿಸಿದೆ. ಈ ಮೂಲಕ ಹಳದಿ ಮಾರ್ಗದ ಉದ್ದೇಶಿತ ಎಲ್ಲ ರೈಲುಗಳು ಬೆಂಗಳೂರಿಗೆ ಬಂದಂತಾಗಿದೆ.

ಹೊಸ ರೈಲುಗಳು ಎರಡರಿಂದ ಮೂರು ವಾರ ಶಾಸನಬದ್ಧ ತಪಾಸಣೆ, ಪ್ರಾಯೋಗಿಕ ಸಂಚಾರ, ತಾಂತ್ರಿಕ ಪರೀಕ್ಷೆಗಳಿಗೆ ಒಳಗಾಗಬೇಕು. ಬಳಿಕವೇ ಅನುಮೋದನೆ ಪಡೆದು ವಾಣಿಜ್ಯ ಸೇವೆ ನಿಯೋಜನೆಗೊಳ್ಳುತ್ತವೆ. ಸದ್ಯ 13ನೇ ರೈಲು ಪ್ರಾಯೋಗಿಕ ಸಂಚಾರ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ತಿಂಗಳಲ್ಲಿ ಸೇವೆಗೆ ನಿಯೋಜನೆ ಮಾಡಲು ಬಿಎಂಆರ್‌ಸಿಎಲ್ ಪ್ಲ್ಯಾನ್ ಮಾಡಿಕೊಂಡಿದೆ.

15ನೇ ರೈಲು, ಆಗಸ್ಟ್‌ನಲ್ಲಿ ಗುಡ್‌ನ್ಯೂಸ್ ನಿರೀಕ್ಷೆ

ಇನ್ನೂ 15ನೇ ರೈಲು ಟಿಟಾಗರ್‌ನಿಂದ ಆಗಮಿಸಿದ್ದು, ಹಳಿ ಮೇಲೆ ಜೋಡಿಸಿ, ಈ ರೈಲನ್ನು ತಪಾಸಣೆ, ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಳೆದ ವರ್ಷ 2025ರ ಆಗಸ್ಟ್ 10ರಂದು ಪ್ರಧಾನಿ ಮೋದಿಯವರು ಈ ಹಳದಿ ಮಾರ್ಗ ಉದ್ಘಾಟಿಸಿದ್ದರು. ಮುಂದಿನ ತಿಂಗಳಿಗೆ ಒಂದು ವರ್ಷವಾಗಲಿದ್ದು, ಇದೇ ವೇಳೆ ಅಧಿಕಾರಿಗಳು ಮೆಟ್ರೋ ಅಧಿಕಾರಿಗಳಿಗೆ ಇನ್ನೊಂದು ಗುಡ್‌ನ್ಯೂಸ್ ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+