ಬೆಂಗಳೂರಲ್ಲಿ ಎಲೆಕ್ಟ್ರಿಕ್ ವಾಹನಗಳು: ಹೊಸ ಅಂಕಿ ಅಂಶ ಹೇಳುವುದೇನು?

ಬೆಂಗಳೂರು, ನವೆಂಬರ್ 17: ಉದ್ಯಾನ ನಗರಿ ಬೆಂಗಳೂರಿನಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನಗಳಿಗೆ ತಕ್ಕಂತೆ ಚಾರ್ಜಿಂಗ್ ಸೌಲಭ್ಯಗಳು ಇಲ್ಲ. ಅವುಗಳನ್ನು ಒದಗಿಸಲು ಸಹ ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇಂತಹ ಸಮಯದಲ್ಲಿ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಎಷ್ಟಾಗಬಹುದು? ಎಂದು ಸಮೀಕ್ಷೆಯ ವರದಿಯೊಂದು ಅಂದಾಜಿಸಿದೆ. ಮೂಲ ಸೌಲಭ್ಯಗಳು ಎಷ್ಟು ಬೇಕು? ಎಂದು ಹೇಳಿದೆ.

ಸಿಎಸ್‌ಇಟಿಪಿ ನಡೆಸಿದ ಅಧ್ಯಯನ ವರದಿಯ ಪ್ರಕಾರ 2030ರ ಹೊತ್ತಿಗೆ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ 23 ಲಕ್ಷ ಆಗಲಿದೆ. ಇದನ್ನು ನಿರ್ವಹಣೆ ಮಾಡಲು 400 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳು, 141 ಎಕರೆ ಭೂಮಿಯ ಅಗತ್ಯವಿದೆ ಎಂದು ಅಧ್ಯಯನ ವರದಿ ಅಂದಾಜಿಸಿದೆ.

Bengaluru May Get 23 Lakh Electric Vehicle By 2030

ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಾಹನಗಳ ನಿರ್ವಹಣೆಯಲ್ಲಿ ಬ್ಯಾಟರಿ ಬದಲಾವಣೆ, ಬ್ಯಾಟಿ ಚಾರ್ಜ್ ಮಾಡುವುದೇ ದೊಡ್ಡ ಕೆಲಸವಾಗಿದೆ ಎಂದು ಹೇಳಿದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ ನಗರದ ವಿದ್ಯುತ್ ಬಳಕೆಯ ಪ್ರಮಾಣ ಸಹ ಏರಿಕೆಯಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚಾರ್ಜಿಂಗ್ ಸ್ಟೇಷನ್ ತೆರೆಯಬೇಕು: ಈಗಿನ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಗೆ ಹೋಲಿಕೆ ಮಾಡಿದರೆ 2030ರಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 23 ಲಕ್ಷ ಎಲೆಕ್ಟ್ರಿಕ್ ವಾಹನಗಳು ಇರಲಿವೆ. ಇವುಗಳ ನಿರ್ವಹಣೆಗೆ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಮಾಡುವುದು ಮುಖ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಆರ್‌ಟಿಒ ಕಛೇರಿ, ಐಟಿ ಪಾರ್ಕ್, ಮೆಟ್ರೋ ನಿಲ್ದಾಣ, ಪೆಟ್ರೋಲ್ ಬಂಕ್, ಶಾಪಿಂಗ್ ಮಾಲ್ ಹೀಗೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸ್ಥಾಪನೆಯಾಗಬೇಕು. ಇದಕ್ಕಾಗಿ ಸುಮಾರು 141 ಎಕರೆ ಭೂಮಿ ಬೇಕು ಎಂದು ಸಹ ಅಂದಾಜಿಸಲಾಗಿದೆ.

ನಗರದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಬೇಡಿಕೆ 2030ರ ವೇಳೆಗೆ ಸುಮಾರು ಶೇ 25 ರಿಂದ 30ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಮನೆಯಲ್ಲಿಯೇ ಚಾರ್ಜಿಂಗ್ ಮಾಡುವ ಪ್ರಕ್ರಿಯೆಗಿಂತ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಸ್ಟೇಷನ್ ನಿರ್ಮಾಣ ಮಾಡುವುದು ಅಗತ್ಯ ಎಂದು ವರದಿ ಹೇಳಿದೆ.

ನಗರದಲ್ಲಿ ಸುಮಾರು 36,000 ಸಾರ್ವಜನಿಕ ಚಾರ್ಜಿಂಗ್ ಗನ್‌ಗಳು ಅಗತ್ಯವಾಗುತ್ತವೆ. ನಗರದ ಒಟ್ಟು ವಿದ್ಯುತ್ ಬಳಕೆ ಪ್ರಮಾಣ ಶೇ 7 ರಿಂದ 9ಕ್ಕೆ ಏರಿಕೆಯಾಗಲಿದೆ. ಸದ್ಯ ಇವಿ ಚಾರ್ಜಿಂಗ್‌ ವಿದ್ಯುತ್ ಬಳಕೆ 0.096 ಗಿಗಾವ್ಯಾಟ್‌ ಇದ್ದು, 2030ಕ್ಕೆ1.2 ಗಿಗಾವ್ಯಾಟ್ ಆಗಲಿದೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಇರುವ ನಗರದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಈಗಾಗಲೇ ಹೊಸ ಹೊಸ ಇವಿ ವಾಹನ ಚಾರ್ಜಿಂಗ್ ಸ್ಟೇಷನ್ ನಿರ್ಮಾಣವನ್ನು ಮಾಡಲಾಗುತ್ತಿದೆ. ಆದರೆ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಸಾರ್ವಜನಿಕ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಬೇಕಿದೆ ಎಂದು ವರದಿ ತಿಳಿಸಿದೆ.

ಅಂಕಿ ಅಂಶಗಳ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ 2017-2018ರಲ್ಲಿ ನೋಂದಣಿಯಾದ ಎಲೆಕ್ಟ್ರಿಕ್ ವಾಹನಗಳು 1992. ಆದರೆ 2023ರಲ್ಲಿ ಈ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 2018-19ರಲ್ಲಿ 5542, 2019-20ರಲ್ಲಿ 6674, 2020-21ರಲ್ಲಿ 11,593 ವಾಹನಗಳ ನೋಂದಣಿಯಾಗಿದೆ. 2021-22ರಲ್ಲಿ 44,217, 2022-23ರಲ್ಲಿ 1,10,492, 2023-24ರಲ್ಲಿ 1,03,009 ವಾಹನಗಳ ನೋಂದಣಿಯಾಗಿದೆ.

ಬೆಂಗಳೂರು ನಗರದಲ್ಲಿ ಬೈಕ್, ಆಟೋ, ಕಾರುಗಳು ಮಾತ್ರವಲ್ಲ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳು ಸಹ ಸಂಚಾರನ್ನು ನಡೆಸುತ್ತಿವೆ. ಬೆಸ್ಕಾಂ ನಗರದ ವಿವಿಧ ಸಾರ್ವಜನಿಕ ಸ್ಥಳದಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪನೆ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+