ಬೆಂಗಳೂರಲ್ಲಿ ಹೆಚ್ಚಿದ ಗರಿಷ್ಠ ತಾಪಮಾನ, ಎಷ್ಟಿದೆ, ಎಷ್ಟು ಹೆಚ್ಚಳವಾಗಬಹುದು?

ಬೆಂಗಳೂರು, ಫೆಬ್ರವರಿ 19: ಬೇಸಿಗೆಗೂ ಮುನ್ನವೇ ನಗರದಲ್ಲಿ ವಿಪರೀತ ಸೆಕೆ ಆರಂಭವಾಗಿದ್ದು, ಮಾರ್ಚ್ ಆರಂಭದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿಗೆ ತಲುಪುವ ಸಾಧ್ಯದೆ ಇದೆ.

ಬೆಂಗಳೂರಲ್ಲಿ ಗರಿಷ್ಠ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗರದಲ್ಲಿ ಮಂಗಳವಾರ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ತಲುಪಿ ಸೆಕೆ ಹೆಚ್ಚಳವಾಗಿದೆ.

ಬೇಸಿಗೆ ಆರಂಭವಾಗುವ ಮುನ್ನವೇ ವಿಪರೀತ ಸೆಕೆ ಕಾಣಿಸಿಕೊಂಡಿದೆ. ಭಾನುವಾರ 32 ಡಿಗ್ರಿ ಇತ್ತು ಒಂದೇ ದಿನದಲ್ಲಿ 34 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು.

ಇದರಿಂದಾಗಿ ಸೆಕೆ ಅಧಿಕವಾಗಿದ್ದು, ವಿಪರೀತ ಬಿಸಿಲು ಕೂಡ ಇದೆ. ವಾಹನ ಸವಾರರು, ಬಸ್ಸಿನಲ್ಲಿ ಪ್ರಯಾಣಿಸುವವರು ಬೆವರು ಹರಿಸುತ್ತಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಜೆ 6 ಗಂಟೆಯವರೆಗೂ ಅಧಿಕ ತಾಪಮಾನವಿರುತ್ತದೆ. ಬಿಸಿಲು ಕಡಿಮೆಯಾದ ಬಳಿಕ ಸೆಕೆ ಇಳಿಯಲು ಕನಿಷ್ಠ 2 ತಾಸುಗಳು ಬೇಕಾಗುತ್ತದೆ.

2018ರಲ್ಲಿ ಫೆಬ್ರವರಿ 28ಕ್ಕೆ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದೇ ತಿಂಗಳ ಹೆಚ್ಚಿನ ತಾಪಮಾನವಾಗಿತ್ತು. ಈ ಬಾರಿ ಅದನ್ನೂ ಮೀರಿಸುವಂತೆ ಈಗಲೇ 34 ಡಿಗ್ರಿ ದಾಟಿದೆ. ಮಾರ್ಚ್ ಮೊದಲ ವಾರದಲ್ಲಿ ಸೆಕೆ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿ ಕನಿಷ್ಠ 19.2 ಡಿಗ್ರಿ ಸೆಲ್ಸಿಯಸ್, ಗರಿಷ್ಠ 34 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ ಕನಿಷ್ಠ 17.9 ಡಿಗ್ರಿ ಸೆಲ್ಸಿಯಸ್, ಗರಿಷ್ಠ 33.5 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಕನಿಷ್ಠ 19.4 ಡಿಗ್ರಿ ಸೆಲ್ಸಿಯಸ್, ಗರಿಷ್ಠ 33.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೆಂಗಳೂರಿನ ತಾಪಮಾನ ಈಗೆಷ್ಟಿದೆ?

ಕಳೆದ ವರ್ಷ ಫೆಬ್ರವರಿಯಲ್ಲಿ ಎಷ್ಟಿತ್ತು?

ಕಳೆದ ವರ್ಷ ಫೆಬ್ರವರಿಯಲ್ಲಿ ಎಷ್ಟಿತ್ತು?

2018ರಲ್ಲಿ ಫೆಬ್ರವರಿ 28ಕ್ಕೆ 33 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಅದೇ ತಿಂಗಳ ಹೆಚ್ಚಿನ ತಾಪಮಾನವಾಗಿತ್ತು. ಈ ಬಾರಿ ಅದನ್ನೂ ಮೀರಿಸುವಂತೆ ಈಗಲೇ 34 ಡಿಗ್ರಿ ದಾಟಿದೆ. ಮಾರ್ಚ್ ಮೊದಲ ವಾರದಲ್ಲಿ ಸೆಕೆ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ.

ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ

ಗರಿಷ್ಠ ತಾಪಮಾನ ಹೆಚ್ಚಾಗುವ ಸಾಧ್ಯತೆ

ಗರಿಷ್ಠ ತಾಪಮಾನ ಇದೀಗ 34 ಡಿಗ್ರಿ ಸೆಲ್ಸಿಯಸ್‌ನಲ್ಲಿಷ್ಟು ಮಾರ್ಚ್ 1ರೊಳಗೆ 40 ಡಿಗ್ರಿವರೆಗೂ ತಲುಪುವ ಸಾಧ್ಯತೆ ಇದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬೇಸಿಗೆಯ ತಾಪಮಾನವನ್ನು ಈಗ ನಾವು ಕಾಣುತ್ತಿದ್ದೇವೆ.

ಸಂಜೆ 6 ವರೆಗೂ ಇರುವ ಸೆಕೆ

ಸಂಜೆ 6 ವರೆಗೂ ಇರುವ ಸೆಕೆ

ಸೂರ್ಯನ ಕಿರಣಗಳು ಭೂಮಿಗೆ ಬೀಳುವುದು ನಿಲ್ಲಿಸಿದರೂ ಕೂಡ ತಾಪಮಾನ ಅಷ್ಟೇ ಇರುತ್ತದೆ. ಸಂಜೆ 6-6.30ವರೆಗೂ ಸೆಕೆ ಇರಲಿದೆ. ಆಮೇಲೆ ಸ್ವಲ್ಪ ತಾಪಮಾನದಲ್ಲಿ ತಂಪು ಕಾಣಿಸಿಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+