Bengaluru Power Cut: ಬೆಳಕಿನ ಹಬ್ಬದಂದೇ ಆವರಿಸಿದ ಕತ್ತಲು, ಮೂರು ದಿನ ವಿದ್ಯುತ್ ಕಡಿತ, ಎಲ್ಲೆಲ್ಲಿ ತಿಳಿಯಿರಿ
ಬೆಂಗಳೂರು, ನವೆಂಬರ್ 14: ಬೆಳಕಿನ ಹಬ್ಬ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಕತ್ತಲೆ ಆವರಿಸಲಿದೆ. ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಈ ವಾರ ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಅನೇಕ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಸೇರಿದಂತೆ ವಿದ್ಯುತ್ ಸರಬರಾಜು ಕಂಪನಿಗಳು ಬೆಂಗಳೂರಿನಲ್ಲಿ ನಿರ್ವಹಣಾ ಯೋಜನೆ ನಡೆಸಲಿವೆ. ಆದ್ದರಿಂದ ವಿದ್ಯುತ್ ಕಡಿತಗೊಳ್ಳಲಿದೆ. ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುವ ಪ್ರದೇಶ, ದಿನಾಂಕಗಳು, ಸಮಯದ ಮಾಹಿತಿ ತಿಳಿಯಲು ಮುಂದೆ ಓದಿರಿ.

ಬುಧವಾರ ನ.15ರಂದು ವಿದ್ಯುತ್ ವ್ಯತ್ಯಯ ಸ್ಥಳಗಳು
ಬೋಳಮಾರನಹಳ್ಳಿ, ತೋಟಗೆರೆ, ಕುಕ್ಕನಹಳ್ಳಿ, ಗೊಲ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿ, ಗೋಪಾಲಪುರ ಗ್ರಾ.ಪಂ.ವ್ಯಾಪ್ತಿ, ಮೈಲನಹಳ್ಳಿ, ವಜ್ರಕಟ್ಟೆಪಾಳ್ಯ, ಕನ್ನೇಗೌಡನಹಳ್ಳಿ, ಹ್ಯಾದಾಳು, ಜೋಸ್ಕೋ, ಕೆಜಿ ಶ್ರೀನಿವಾಸಪುರ, ಇಸ್ಲಾಂಪುರ, ಅರ್ಜುನಬೆಟ್ಟಹಳ್ಳಿ, ಗುತ್ತೇಪಾಳ್ಯ, ಮಾಚೋನಾಯಕನಹಳ್ಳಿ, ಮುನೇಶ್ವರ ಬಡಾವಣೆ, ಜಯನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು.
ಶ್ರೀರಾಂಪುರ ಮತ್ತು ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ, ಬಸವನಶಿವಕೆರೆ, ಹಿರೇಕಬ್ಬಿಗೆರೆ, ಹಿರೇಗುಂಟನೂರು, ಗುಂಡಿಮಡು, ಅಗ್ರಹಾರ, ಆರ್ ನುಲೇನೂರು, ಗೌಡಹಳ್ಳಿ, ಗೊಲ್ಲರಹಳ್ಳಿ, ತಾಳ್ಯ, ವೆಂಕಟೇಶಪುರ, ಕುಣಗಲಿ, ಬಸಾಪುರ, ಮಲ್ಲಾಡಿಹಳ್ಳಿ, ಹುಲಿಕೆರೆ, ತಾಳ್ಯ, ಬೊಮ್ಮನಹಳ್ಳಿ, ವೆಂಕಟೇಶಪುರ, ಬಿ.ರಾಮೇಗೌಡನಪಾಳ್ಯ, ತಿಮ್ಮೇಗೌಡನಪಾಳ್ಯ, ರಾಯಾಪುರ, ಆರ್‌ಎಂ ಪಾಳ್ಯ, ಡಿಎಸ್ ಪಾಳ್ಯ ಮತ್ತು ಲಿಂಗಾಪುರ ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ಕಡಿತಗೊಳ್ಳಲಿವೆ.

ಗುರುವಾರ ನ16ರ ವಿದ್ಯುತ್ ಕಡಿತ ಪ್ರದೇಶಗಳು
ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಕೋಡಿಹಳ್ಳಿ, ಮಧುರೆ, ಹೊನ್ನಾವರ, ಕಾಡನೂರು, ಮಡುಗೊಂಡನಹಳ್ಳಿ, ಇಸ್ತೂರು, ಗಂಡರಗೌಳಿಪುರ, ಸಿಂಪಾಡಿಪುರ, ಹೊನ್ನದೇವಪುರ, ಬೀರಯ್ಯನಪಾಳ್ಯ, ಹೊಸಪಾಳ್ಯ, ಮಲ್ಲುಹಳ್ಳಿ, ಮಲ್ಲಪಾಡಿಗಟ್ಟ, ತಿಮ್ಮಸಂದ್ರ, ಒಡ್ಡಗೆರೆ, ಪುರುಷನಹಳ್ಳಿ, ಆಲೇನಹಳ್ಳಿ, ಐಯ್ಯನಹಳ್ಳಿ, ವನಹಳ್ಳಿ ಗ್ರಾಮಪಂಚಾಯತ್, ಹರೇಬೋಮನಹಳ್ಳಿ ಗ್ರಾಮಪಂಚಾಯತ್, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರಗಳಲ್ಲಿ.
ಶಾಮನೂರು, ಜೆಹೆಚ್ ಪಟೇಲ್ ಬಡವಣೆ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕೋಳಿ ಚನ್ನಪ್ಪ, ಜರಿಕಟ್ಟೆ ಮತ್ತು ಮೂಡಹದಡಿ, ಹಳೇ ಕುಂದವಾಡ ಹಾಗೂ ಹೊಸ ಕುಂದವಾಡ, ಹೆಗ್ಗೆರೆ, ಯೆಮ್ಮೆಹಟ್ಟಿ, ಹಂಪನೂರು, ದೊಡ್ಡಿಗನಾಳ್, ಬಸವನಶಿವಕೆರೆ, ಹಿರೇಕಬ್ಬಿಗೆರೆ, ಕೊಳಲ್, ಕೊಳಲ ಗೊಲ್ಲರಹಟ್ಟಿ, ಒಬಲಾಪುರ, ಮದಕರಿಪುರ, ಹಿರೇಗುಂಟನೂರು, ಗುಂಡಿಮಡು, ಮಲ್ಲಾಡಿಹಳ್ಳಿ, ಆರ್ ನುಲೇನೂರು ತಾಳ್ಯ, ವೆಂಕಟೇಶಪುರ, ಅಗ್ರಹಾರ, ಕುಣಗಲಿ, ಬಸಾಪುರ, ಹುಲಿಕೆರೆ, ರಾಮೇಗೌಡನಪಾಳ್ಯ, ತೀಯಮ್ಮನಗೌಡನಪಾಳ್ಯ, ಸಿರಿವಾರ, ಗೋವಿಂದರಾಜಪುರ, ಆರ್ ಎಂ ಹಳ್ಳಿ, ಲಿಂಗಾಪುರ, ಬೊಮ್ಮನಹಳ್ಳಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇಂದಿನ ವಿದ್ಯುತ್ ಸ್ಥಗಿತದ ಪ್ರದೇಶಗಳು
ಇಂದು ಮಂಗಳವಾರ (ನ.14) ಸಹ ವಿವಿಧೆಡೆ ಈಗಾಗಲೇ ವಿದ್ಯುತ್ ಕಡಿತಗೊಂಡಿದೆ. ಆ ಸ್ಥಗಳನ್ನು ನೋಡುವುದಾದರೆ, ಕಂಚಿಗಾನಹಳ್ಳಿ, ಮಹದೇವಪುರ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಶಿವಕುಮಾರ ಬಡವಣೆ, ಗೊಪ್ಪೇನಹಳ್ಳಿ, ಪೆನ್ನಸಮುದ್ರ, ಮಾಳಹಾಳ, ಮಲಹಾಳ ಗೊಲ್ಲರಹಟ್ಟಿ, ಬೆಟ್ಟಕಡೂರು, ಅಗ್ರಹಾರ, ಕುಣಗಲಿ, ಬಸಾಪುರ, ತಾಳ್ಯ, ಮಲ್ಲಾಡಿಹಳ್ಳಿ, ಆರ್ ನುಲೇನೂರು, ತಾಳ್ಯ, ವೆಂಕಟೇಶಪುರ, ಲಿಂಗಾಪುರ, ಹುಲಿಕೇರೇಶಪುರ, ಬೊಮ್ಮನಹಳ್ಳಿ, ಎಮ್ಮೆಗೌಡನಪಾಳ್ಯ, ಆರ್ಎಂ ಹಳ್ಳಿ, ಡಿಎಸ್ ಪಾಳ್ಯ, ವಡೇರಾಪುರ, ಬಳ್ಳಗೆರೆ ಕಾವಲ್, ಎಸ್‌ಕೆ ಪಾಳ್ಯ, ರಸ್ತೆಪಾಳ್ಯ, ಬೇಗೂರು, ಯಲದಹಳ್ಳಿ, ದಾಸರಹಳ್ಳಿ ಮತ್ತು ಹನುಮಂತನಗರಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ












Click it and Unblock the Notifications