ವಿಮಾನ ಸಂಸ್ಥೆಯಿಂದ ಲೂಟಿ: ಶೇಮ್‌ ಶೇಮ್‌ ಎಂದ ಸದಾನಂದ ಗೌಡ

ಬೆಂಗಳೂರು, ಆಗಸ್ಟ್ 17: ಕೇರಳ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಹ ಬಂದೊದಗಿದೆ, ಈ ಸಂದರ್ಭದಲ್ಲಿ ವಿಮಾನ ಪ್ರಯಾಣ ದರವನ್ನು ಕಡಿಮೆ ಮಾಡಿ ಜನರಿಗೆ ಅನುಕೂಲ ಒದಗಿಸುವ ಬದಲು ಖಾಸಗಿ ವಿಮಾನಗಳು ಲಾಬಿಯಲ್ಲಿ ತೊಡಗಿವೆ ಇದರ ವಿರುದ್ಧ ಕೇಂದ್ರ ಸಚಿವ ಡಿವಿ ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಬೆಂಗಳೂರು-ಮಂಗಳೂರು ನಡುವೆ ವಿಮಾನ ಪ್ರಯಾಣ ದರ 4 ಸಾವಿರಕ್ಕೂ ಕಡಿಮೆ ಇದೆ ಆದರೆ ಪ್ರವಾಹದ ಬಳಿಕ ಖಾಸಗಿ ವಿಮಾನಗಳು ದರವನ್ನು 18ಸಾವಿರಕ್ಕೇರಿಸಿ ಸುಲಿಗೆ ಮಾಡುತ್ತಿವೆ ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru-Mangaluru airfare up to 18K

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್‌ ಸಿನ್ಹಾ ಅವರನ್ನು ಒತ್ತಾಯಿಸಿದ್ದು, ಶೀಘ್ರವೇ ಹೆಚ್ಚುವರಿ ವಿಮಾನದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ. ಮಂಗಳೂರು ಮತ್ತು ಕೇರಳವನ್ನು ಸಂಪರ್ಕಿಸುವ ಎಲ್ಲಾ ಮಾರ್ಗಗಳು ಕಡಿತಗೊಂಡಿವೆ.

ರೈಲುಗಳು ಕೂಡ ಸಂಚರಿಸುತ್ತಿಲ್ಲ ಹೀಗಿರುವಾಗ ವಿಮಾನ ಅಥವಾ ಹೆಲಿಕ್ಯಾಪ್ಟರ್‌ ವ್ಯವಸ್ಥೆ ಮಾಡುವುದು ಸೂಕ್ತವಾದದ್ದು, ಹಾಗೆಯೇ ಮಂಗಳೂರು-ಬೆಂಗಳೂರು, ಮಂಗಳೂರು-ಮುಂಬೈಗೆ ವಿಮಾನ ವ್ಯವಸ್ಥೆ ಕಲ್ಪಿಸಬೇಕಿದೆ ಎಂದಿದ್ದಾರೆ.

ಬೆಂಗಳೂರಿನಿಂದ ತಿರುವನಂತಪುರಂ ಮಾರ್ಗದ ವಿಮಾನ ದರ ಕೂಡ ಶೀಘ್ರ ಹೆಚ್ಚಳವಾಗುವ ಸಾಧ್ಯತೆ ಇದೆ, ಕೊಚ್ಚಿನ್‌ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಕಾರ್ಯಾಚರಣೆ ಆಗಸ್ಟ್ 26ರ ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಿರುವುದರಿಂದ ಆ ಮಾರ್ಗದಲ್ಲಿ ಕೂಡ ದರ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರು ತಿರುವನಂತಪುರಂ ಹಾಗೂ ಮಂಗಳೂರು 15ರಿಂದ 35 ಸಾವಿರ ರೂ.ವರೆಗಿದೆ.ಸಿವಿಲ್‌ ಏವಿಯೇಷನ್‌ನ ಡೈರೆಕ್ಟರ್‌ ಜನರಲ್‌ ಈ ಮಾರ್ಗದಲ್ಲಿ ವಿಮಾನ ದರವನ್ನು ಏರಿಸದಂತೆ ನಿರ್ದೇಶನ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+