30 ಸಾವಿರಕ್ಕೆ ಹೆಂಡತಿಯನ್ನೇ ಮಾರಿದ್ದ ಪತಿರಾಯ ಅಂದರ್
ಬೆಂಗಳೂರು, ಜೂ.26: ಹಣಕ್ಕೋಸ್ಕರ ವೇಶ್ಯಾವಾಟಿಕೆ ಅಡ್ಡೆಗೆ ಹೆಂಡತಿಯನ್ನೇ ಮಾರಿ, ತಾನು ಪ್ರತಿನಿತ್ಯ ಅಲ್ಲಿಗೆ ತೆರಳುತ್ತಿದ್ದ ಪತಿರಾಯ ಸೇರಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಂಥ ಪ್ರಕರಣ ನಡೆದಿರುವುದು ದೂರದ ಕೀನ್ಯಾ ಅಥವಾ ಆಫ್ರಿಕಾದಲ್ಲಿ ಅಲ್ಲ. ನಮ್ಮದೇ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ!
ವೇಶ್ಯಾವಾಟಿಕೆಗೋಸ್ಕರ ಹೆಂಡತಿಯನ್ನು 30 ಸಾವಿರ ರು. ಗೆ ಮಾರಿದ್ದ 'ಪತಿರಾಯ' ಸೇರಿದಂತೆ 7 ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಣಪತಿ ನಗರದ 2ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಮನೆ ಮೇಲೆ ದಾಳಿ ಮಾಡಿ ನರಸಿಂಹ, ಕೃಷ್ಣ, ಸುರೇಶ್, ಕೃಷ್ಣ, ಸುನಿಲ್, ಶಿವಲಿಂಗಯ್ಯ, ಲಿಂಗರಾಜು ಎಂಬುವರನ್ನು ಬಂಧಿಸಲಾಗಿದೆ.[ಗೋವಾ:ವೇಶ್ಯಾವಾಟಿಕೆ ಜಾಲದಲ್ಲಿ ತೆಲುಗು ನಟಿ ಯಾರು?]

ಈ ವೇಳೆ ಆರೋಪಿ ನರಸಿಂಹ ತನ್ನ ಪತ್ನಿಯನ್ನು ಕೃಷ್ಣ ಎಂಬಾತನಿಗೆ 30 ಸಾವಿರಕ್ಕೆ ವರ್ಷದ ಹಿಂದೆ ಮಾರಾಟ ಮಾಡಿದ್ದ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ವೇಶ್ಯಾವಾಟಿಕೆ ಅಡ್ಡೆಯಿಂದ ಬಂಗಾಳದ ಮೂಲದ ಯುವತಿಯನ್ನು ರಕ್ಷಣೆ ಮಾಡಲಾಗಿದೆ.
ಬಲವಂತವಾಗಿ ವೇಶ್ಯಾವಾಟಿಕೆಯಲ್ಲಿ ದೂಡಿದ್ದರ ಪರಿಣಾಮ ಸಂತ್ರಸ್ತ ಮಹಿಳೆಗೆ ಏಡ್ಸ್ ಅಂಟಿಕೊಂಡಿತ್ತು. ನಂತರ ಈಕೆಯೊಂದಿಗೆ ಸಂಪರ್ಕ ಬೆಳೆಸಿದ ಅನೇಕರಿಗೆ ರೋಗ ರವಾನೆಯಾದ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.[ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಕ್ಕಿಬಿದ್ದ ನಟಿ ಮಣಿಗಳು ಯಾರು]
ಆರೋಪಿಗಳೆಲ್ಲ ವಿವಾಹಿತರು
ಇಲ್ಲಿ ಬಂಧಿತರಾಗಿರುವ ಎಲ್ಲ ಆರೋಪಿಗಳು ವಿವಾಹಿತರು. ಲೈಂಗಿಕ ವಾಂಛೆ ತೀರಿಸಿಕೊಳ್ಳಲು ಪ್ರಮುಖ ಆರೋಪಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕೃಷ್ಣನೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಆರೋಪಿಗಳಿಂದ 9 ಮೊಬೈಲ್, 1,100 ನಗದು ವಶಪಡಿಸಿಕೊಳ್ಳಲಾಗಿದೆ.[ಹುಡುಗಿಯರ ಕೊಡಿಸುತ್ತೇವೆ ಎಂದು ನಂಬಿಸಿ ದೋಚಿದರು]












Click it and Unblock the Notifications