Get Updates
Get notified of breaking news, exclusive insights, and must-see stories!

Forest land scam: ಬೆಂಗಳೂರಿನ ಈ ಭಾಗದಲ್ಲಿ 450 ಎಕರೆಯಷ್ಟು ಅರಣ್ಯ ಭೂಮಿ ಅಕ್ರಮ ಮಂಜೂರು!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ದಂಧೆ, ಅಕ್ರಮ, ಭೂಮಿ ಒತ್ತುವರಿ ಹೊಸದೇನಲ್ಲ. ಸರ್ಕಾರ ಕೂಡ ಒತ್ತುವರಿ, ಕಬಳಿಕೆಗಳ ವಿರುದ್ಧ ಆಗಾಗ ಬಿಸಿ ಮುಟ್ಟಿಸುತ್ತಲೇ ಇದ್ದಾರೆ. ಆದರೆ ಬೆಂಗಳೂರಿನ ಈ ಭಾಗದಲ್ಲಿ ಬರೋಬ್ಬರಿ 450 ಎಕರೆಯಷ್ಟು ಅರಣ್ಯ ಪ್ರದೇಶದ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಅರಣ್ಯ ಭೂಮಿಯನ್ನು ಅಕ್ರಮವಾಗಿ ನೀಡಿದ ಬಗ್ಗೆ ವಿಶೇಷ ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಬೆಂಗಳೂರು ನಗರ ವಿಭಾಗದ ಅಧಿಕಾರಿಗಳು ಇಂತ 273 ಭೂಮಿ ಅಕ್ರಮವಾಗಿ ಮಂಜೂರಾಗಿರುವುದನ್ನು ಗುರುತಿಸಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ರಾಜ್ಯ ಸರ್ಕಾರವು ಅಧಿಸೂಚಿತ ಕಾಡುಗಳ ರೂಪಾಂತರ ಮತ್ತು ಅರಣ್ಯ ಭೂಮಿಯನ್ನು ಅಕ್ರಮವಾಗಿ ನೀಡಿದ ಬಗ್ಗೆ ವಿಶೇಷ ತನಿಖೆಗೆ ಆದೇಶಿಸಿದ ಒಂದು ತಿಂಗಳ ನಂತರ ಈ ಅಕ್ರಮ ಬೆಳಕಿಗೆ ಬಂದಿದೆ. ಬೆಂಗಳೂರು ನಗರ ವಿಭಾಗದ ಅಧಿಕಾರಿಗಳು 273 ಅಂತಹ ಅನುದಾನಗಳನ್ನು ಗುರುತಿಸಿದ್ದಾರೆ, ಇದರಿಂದಾಗಿ ಬೆಂಗಳೂರು ನಗರಕ್ಕೆ ಸುಮಾರು 450 ಎಕರೆಯಷ್ಟು ಅರಣ್ಯ ನಷ್ಟವಾಗಿದೆ ಎಂಬ ಶಾಕಿಂಗ್‌ ವಿಚಾರ ತಿಳಿದುಬಂದಿದೆ.

Bengaluru Land Scam 450 Acres Of Forest Property Illegally Allotted

ಸುಪ್ರೀಂಕೋರ್ಟ್ ಆದೇಶದ ಬಳಿಕ ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ನಿಯಂತ್ರಣದಲ್ಲಿ ಉಳಿದಿರುವ ಅರಣ್ಯ ಭೂಮಿಯನ್ನು ಮತ್ತು ಅರಣ್ಯವೆಂದು ಅಧಿಸೂಚನೆ ಹೊರಡಿಸಿದ ನಂತರವೂ ಕೆಲ ಭೂಮಿ ಮಂಜೂರಾಗಿತ್ತು. ಈ ರೀತಿ ಮಂಜೂರು ಮಾಡಲಾದ ಭೂಮಿಯನ್ನು ಗುರುತಿಸಲು ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡವು ಅಕ್ರಮ ಭೂಮಿ ಮಂಜೂರಾತಿಗಳನ್ನು ಪತ್ತೆ ಹಚ್ಚಿದೆ. ಈ ಸಂಬಂಧ ಬೆಂಗಳೂರು ನಗರ ವಿಭಾಗದ ಅಧಿಕಾರಿಗಳು ಈಗ ಅಂತಹ ಭೂಮಿ ಮಂಜೂರಾತಿಗಳ ಕ್ರೋಢೀಕೃತ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಈ ಸಂಬಂಧ ಮತ್ತಷ್ಟು ವಿವರವಾದ ವಿಚಾರಣೆಗಾಗಿ ಈ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಎಸ್‌ಐಟಿ ಮುಂದೆ ಇಡಲಾಗುತ್ತದೆ ಎಂದು ಹೇಳಿದೆ.

ಎಲ್ಲೆಲ್ಲಿ ಅಕ್ರಮ?

ಅಧಿಕಾರಿಗಳು ಗುರುತಿಸಿರುವ ಸುಮಾರು 240 ಮಂಜೂರಾತಿಗಳು ಬೆಂಗಳೂರಿನ ಕಗ್ಗಲಿಪುರ ಭಾಗದ ಅರಣ್ಯಕ್ಕೆ ಸೇರಿದ್ದಾಗಿದೆ. ಅಲ್ಲದೆ ಸುಂಕದಕಟ್ಟೆ, ನೆಟ್ಟಿಗೆರೆ, ಚಿನ್ನಕುರುಚಿ, ಭೂತನಹಳ್ಳಿ, ತುರಹಳ್ಳಿ ಅರಣ್ಯ ಸೇರಿ ಹಲವು ಭಾಗಗಳಲ್ಲಿ ಅರಣ್ಯ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ಆನೇಕಲ್ ಸಮೀಪದಲ್ಲೂ ಇದೇ ರೀತಿಯ 20 ಅರಣ್ಯ ಭೂಮಿ ಅಕ್ರಮ ಪತ್ತೆಯಾಗಿದ್ದು, ಇನ್ನೂ ಕೆಲವು ಬೆಂಗಳೂರು ಉತ್ತರ ಭಾಗದ ಕೊತ್ತನೂರು ಪ್ರದೇಶದಲ್ಲಿದೆ ಎಂದು ಹೇಳಿದ್ದಾರೆ. ಅಕ್ರಮ ಮಂಜೂರಾತಿ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಅರಣ್ಯಗಳಲ್ಲಿ ಮಂಜೂರಾದ ಭೂಮಿಯ ವಿವರಗಳನ್ನು ಪಟ್ಟಿ ಮಾಡಿದ್ದು, ಸಮಿತಿಯು ಅವುಗಳನ್ನು ಪರಿಶೀಲನೆ ಮಾಡುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಏನು ಹೇಳುತ್ತೆ?

ಕರ್ನಾಟಕ ಅರಣ್ಯ ಕಾಯ್ದೆಯಡಿ ಸರ್ಕಾರವು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಅರಣ್ಯಗಳು ಸೆಕ್ಷನ್ 4 ಅರಣ್ಯಗಳು. ಹಾಗಾಗಿ ಈ ಪ್ರದೇಶವನ್ನ ಅರಣ್ಯವೆಂದು ಘೋಷಿಸಲಾಗುತ್ತೆ. ಇಂತಹ ಭೂಮಿ ಸಾಗುವಳಿ ಮಾಡುವ ವ್ಯಕ್ತಿಗಳು ಪರಿಹಾರಕ್ಕೆ ಅರ್ಹರು. ಹಕ್ಕುಗಳನ್ನು ಇತ್ಯರ್ಥಪಡಿಸಿದ ನಂತರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತೆ. ಪ್ರಾಥಮಿಕ ಅಧಿಸೂಚನೆಯ ನಂತರ ನೀಡಲಾಗುವ ಯಾವುದೇ ಭೂ ಮಂಜೂರಾತಿ ಕಾನೂನುಬಾಹಿರ ಎಂದು ಹೇಳಲಾಗುತ್ತದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಹಸಿರು ಪ್ರದೇಶಗಳನ್ನು ನಿರಂತರವಾಗಿ ನಾಶಪಡಿಸುತ್ತಿದೆ ಎಂದು ವರದಿಗಳು ಹೇಳಿವೆ. ಅಧಿಸೂಚಿತ ಕಾಡುಗಳನ್ನು ಸಹ ಅಭಿವೃದ್ಧಿಯ ಹೆಸರಿನಲ್ಲಿ ಅತಿಕ್ರಮಣ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+