ಬೆಂಗಳೂರಲ್ಲಿ ದ್ವಿಚಕ್ರ ವಾಹನ ಖದೀಮನ ಬಂಧನ
ಬೆಂಗಳೂರು, ಆಗಸ್ಟ್, 14 : ನಿಮ್ಮ ದ್ವಿಚಕ್ರ ವಾಹನ ಕಳುವಾಗಿದೆಯಾ? ಪೊಲೀಸರಿಗೆ ದೂರು ನೀಡಿದ್ದೀರಾ? ಹಾಗಾದರೆ ಬೇಗ ಹೋಗಿ ನಿಮ್ಮ ನಿಮ್ಮ ದ್ವಿಚಕ್ರ ವಾಹನ ಪಡೆದುಕೊಳ್ಳಿ. ಮತ್ತೆ ಆರಾಮವಾಗಿ ಗಾಡಿಯಲ್ಲಿ ವಿಹರಿಸಿ.
ಅಬ್ದುಲ್ಲಾಖಾನ್ (25) ಎಂಬಾತ ಈ ಪ್ರಕರಣ ಆರೋಪಿಯಾಗಿದ್ದು, ಆತನನ್ನು ಕೋರಮಂಗಲ ಪೊಲೀಸರು ಗುರುವಾರ ಬಂಧಿಸಿದ್ದು, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆತನನ್ನು ತನಿಖೆಗೆ ಒಳಪಡಿಸಿದ್ದಾರೆ.[ಮೈಸೂರು : ಕಳುವಾದ ವಾಹನ ಪತ್ತೆಗೆ ಬಂತು ಆಪ್]

ವಿನ್ಸನ್ ಗಾರ್ಡನ್ ನ ಚಿನ್ನಯ್ಯ ಪಾಳ್ಯದ ನಿವಾಸಿಯಾದ ಅಬ್ದುಲ್ಲಾ, ಇದುವರೆಗೂ ಬರೋಬ್ಬರಿ 3 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ಅಪಹರಿಸಿದ್ದು, ಇದೀಗ ಪೊಲೀಸರ ಬಂಧಿಯಾಗಿದ್ದಾನೆ.
ವಾಹನ ಕಳೆದುಕೊಂಡ ನಾಗರಾಜ್ ನೀಡಿದ ದೂರಿನ ಪರಿಶೀಲನೆ ನಡೆಸಿದ ನಗರದ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್ ರೋಹಿಣಿ ಕಟೋಚ್ ಸಪೇಟ್ ಅವರು ವಿಚಾರಣೆಗಾಗಿ ವಿಶೇಷ ತನಿಖಾ ತಂಡ ರಚಿಸಿದ್ದು, ಇವರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ಕೋರಮಂಗಲ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications