ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 'ಟರ್ಮಿನಲ್ 3' ನಿರ್ಮಾಣ ಕೆಲಸ 10 ವರ್ಷಗಳ ನಂತರ ಆರಂಭ

|
Google Oneindia Kannada News

ಬೆಂಗಳೂರು, ನವೆಂಬರ್ 23: ಎರಡನೇ ಟರ್ಮಿನಲ್ ಉದ್ಘಾಟನೆ ಕಂಡ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಉದ್ದೇಶಿತ ಟರ್ಮಿನಲ್ 3 ಕಾಮಗಾರಿ ಹತ್ತು ವರ್ಷಗಳ ನಂತರ ಆರಂಭವಾಗಲಿದೆ ಎಂದು ಫೇರ್‌ಫಾಕ್ಸ್ ಕಂಪನಿ ತಿಳಿಸಿದೆ.

ಟರ್ಮಿನಲ್ ನಿರ್ಮಾಣವು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಉದ್ದೇಶದ ಭಾಗವೇ ಆಗದೆ. ಆದರೆ ಕಾರಣಾಂತರಗಳಿಂದ ಸದ್ಯಕ್ಕೆ ಕಾಮಗಾರಿ ಆರಂಭವಾಗುವುದಿಲ್ಲ ಎನ್ನಲಾಗಿದೆ. 2034ರ ವೇಳೆಗೆ ಕೆಐಎನಲ್ಲಿ ಉದ್ದೇಶಿತ ಬೃಹತ್ ಟರ್ಮಿನಲ್‌ 3 ಕಾಮಗಾರಿ ಶುರುವಾಗುವ ನಿರೀಕ್ಷೆಗಳು ಇವೆ.

 ಮುಂದಿನ 3 ವರ್ಷಗಳಲ್ಲಿ ನಾಗನಹಳ್ಳಿ ಟರ್ಮಿನಲ್ ಪೂರ್ಣ: ಪ್ರತಾಪ್ ಸಿಂಹ ಮುಂದಿನ 3 ವರ್ಷಗಳಲ್ಲಿ ನಾಗನಹಳ್ಳಿ ಟರ್ಮಿನಲ್ ಪೂರ್ಣ: ಪ್ರತಾಪ್ ಸಿಂಹ

ಕೆಐಎ ವಿಮಾನ ನಿಲ್ದಾಣವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಫೇರ್‌ಫ್ಯಾಕ್ಸ್ ಇಂಡಿಯಾ ಕಂಪನಿ (ಶೇ.54 ಪಾಲು) ಹಾಗೂ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (KIAL) ಹೊಂದಿವೆ. ಈ ಪೈಕಿ ಫೇರ್‌ಫ್ಯಾಕ್ಸ್ ಇಂಡಿಯಾ ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ಹಣಕಾಸು ಫಲಿತಾಂಶ ಪ್ರಕಟಿಸುವ ಸಂದರ್ಭದಲ್ಲಿ ಟರ್ಮಿನಲ್ 3 ರ ನಿರ್ಮಾಣ ಕುರಿತು ಮಾಹಿತಿ ನೀಡಿದೆ.

Bengaluru KIA Expansion Terminal 3 construction work will be start 2034 Fairfax india said

ನವೆಂಬರ್ 11ರಂದು ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಮತ್ತು ಉದ್ಯಾನದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ವಿಷಯವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು.

ಹೊಸ ಟರ್ಮಿನಲ್ 2.5 ಲಕ್ಷ ಚದರ ಮೀಟರ್ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಟರ್ಮಿನಲ್ ವಾರ್ಷಿಕವಾಗಿ 25ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಈ ಟರ್ಮಿನಲ್ ಮುಂದಿನ ಒಂದೂವರೆ ತಿಂಗಳ ನಂತರ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಅಲ್ಲಿಯವರೆಗೆ ಸಣ್ಣಪುಟ್ಟ ಬಾಕಿ ಕೆಲಸ ಪೂರ್ಣಗೊಳಿಸಲಿದೆ. ಇದೀಗ ಕೆಐಎ ವಿಸ್ತರಣೆ ಭಾಗವೇ ಆದ ಟರ್ಮಿನಲ್ 3ನಿರ್ಮಾಣವು ಹತ್ತು ವರ್ಷ ವಿಳಂಬವಾಗಲಿದೆ ಎಂಬ ಸುದ್ದಿ ಬಹಿರಂಗವಾಗಿದೆ.

English summary
Bengaluru Kempegowda International Airport (KIA) Expansion Terminal 3 construction work will be start after 10 years (2034), Fairfax india company said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X