Bengaluru Karaga Festival 2023: ಮಾರ್ಚ್ 29ರಿಂದ ಬೆಂಗಳೂರು ಕರಗ ಮಹೋತ್ಸವ, ದರ್ಗಾಗೆ ಹೋಗುವುದು ದೇವಿ ಕೈಯಲ್ಲಿದೆ
ಬೆಂಗಳೂರು ಐತಿಹಾಸಿಕ ಪ್ರಸಿದ್ಧ 'ಕರಗ ಶಕ್ತ್ಯೋತ್ಸವ'ವ ಆಚರಣೆಗೆ ದಿನಾಂಕ ಘೋಷಣೆಯಾಗಿದೆ. ದೇಶ ವಿದೇಶ ಸೇರಿದಂತೆ ಲಕ್ಷಾಂತರ ಜನರು ಬಂದು ಸಿಲಿಕಾನ್ ಸಿಟಿಯ ಈ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಬೆಂಗಳೂರು, ಮಾರ್ಚ್ 21: ಬೆಂಗಳೂರು ಐತಿಹಾಸಿಕ ಪ್ರಸಿದ್ಧ 'ಕರಗ ಶಕ್ತ್ಯೋತ್ಸವ'ವ ಆಚರಣೆಗೆ ದಿನಾಂಕ ಘೋಷಣೆಯಾಗಿದೆ. ದೇಶ ವಿದೇಶ ಸೇರಿದಂತೆ ಲಕ್ಷಾಂತರ ಜನರು ಬಂದು ಸಿಲಿಕಾನ್ ಸಿಟಿಯ ಈ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.
ಇದೇ ಮಾರ್ಚ್ 29ರಂದು ಆರಂಭವಾಗಿ ಏಪ್ರೀಲ್ 8ರವರೆಗೆ ಒಟ್ಟು ಬರೋಬ್ಬರಿ 11 ದಿನಗಳ ಕಾಲ ನಡೆಯಲಿದೆ. ಈ ಬಾರಿ ಬಹುವಿಜೃಂಭಣೆಯಿಂದ ಕರಗ ಉತ್ಸವ ಆಚರಿಸುವುದಾಗಿ ಶ್ರಿ ಧರ್ಮರಾಯ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಈ ಸಂಬಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ವಿಶ್ವ ವಿಖ್ಯಾತ ಶ್ರೀ ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಏಪ್ರೀಲ್ 6ರಂದು ಚೈತ್ರ ಪೂರ್ಣಿಮೆ ದಿನ ನಡೆಯಲಿದೆ. ಅದರ ಪೂರ್ವಭಾವಿಯಾಗಿ ಆಹ್ವಾನ ಪತ್ರಿಕೆಯನ್ನು ಚಿಕ್ಕಪೇಟೆ ಶಾಸಕರಾದ ಶ್ರೀ ಉದಯ್ ಗರುಡಾಚಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಮಂಗಳವಾರ ನಗರದಲ್ಲಿ ಬಿಡುಗಡೆ ಮಾಡಿದರು.
ಒಟ್ಟು ಹನ್ನೊಂದು ದಿನವು ಬೆಳಗ್ಗೆಯಿಂದ ರಾತ್ರವರೆಗೆ ಅನೇಕ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ. ಪ್ರತಿ ವರ್ಷದಂತೆ ಈ ಸಲವೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಅವರು ಹೊರಲಿದ್ದಾರೆ. ಪೂಜಾರಿ ಜ್ಞಾನೇಂದ್ರ ಅವರು ಕಳೆದ 12 ವರ್ಷಗಳಿಂದ ಕರಗ ಹೊರುತ್ತಾ ದ್ರೌಪದಿ ಅಮ್ಮನ ಸೇವೆ ಮಾಡುತ್ತಾ ಬಂದಿದ್ದಾರೆ.

ಇದೇ ಮಾರ್ಚ್ 29 ಕರಗ ಮಹೋತ್ಸವದ ಆರಂಭದ ದಿನ. ಅಂದು ಧ್ವಜಾರೋಹಣ ನಡೆಯುತ್ತದೆ. ನಂತರ ಏಪ್ರಿಲ್ 8ರವರಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ಮತ್ತು ಅಲಂಕಾ, ಮಹಾ ಮಂಗಳಾರತಿ, ಪ್ರಸಾಧ್ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಏಪ್ರಿಲ್ 3ರಂದು ಆರತಿ, ಏಪ್ರಿಲ್ 4 ರಂದು ಹಸಿಕರಗ ಜರುಗಲಿದೆ. ಇನ್ನು ಏಪ್ರಿಲ್ 5 ರಂದು ಪೊಂಗಲ್ ಆಚರಣೆ, ಮಾರನೇ ದಿನ ಏಪ್ರೀಲ್ 6 ರಂದು 'ಕರಗ ಮಹೋತ್ಸವವು' ಅದ್ಧೂರಿಯಾಗಿ ಜರುಗಲಿದೆ. ನಗರ ನಿವಾಸಿಗಳು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳಲಿದ್ದಾರೆ. ವೀರಕುಮಾರರು, ತಿಗಳ ಸಮುದಾಯದ ಕೆಲ ಭಕ್ತರು ಕರಗ ನಡೆಯುವ 11 ದಿನಗಳ ಕಾಲ ಉಪವಾಸ ವ್ರತ ಆಚರಣೆ ನಡೆಸುತ್ತಾರೆ.
ಕರಗದಲ್ಲಿ ಮಲ್ಲಿಗೆ ಹೂವು ಮತ್ತು ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಮಲ್ಲಿಗೆ ಹೂವುಗಳನ್ನು ಒತ್ತಾದ ದಂಡೆಗಳ ಹಾರವನ್ನು ವೀರಕುಮಾರರಿಗೆ ಹಾಕಲಾಗಿರುತ್ತದೆ. ಉತ್ಸವದಲ್ಲಿ ಎಲ್ಲ ದೇವರುಗಳಿಗೂ ಮಲ್ಲಿಗೆ ಬಿಟ್ಟು ಬೇರೆ ಹೂವುಗಳನ್ನು ಬಳಕೆ ಮಾಡುವುದಿಲ್ಲ. ಕರಗ ಉತ್ಸವದ 11 ದಿನಗಳ ಕಾಲವೂ ಅರ್ಪಿಸಲಾಗುವ ಗಾವನ್ನ, ಪೊಂಗಲ್, ನೈವೇದ್ಯ ಮುಂದಾವುಗಳೆಲ್ಲವನ್ನು 'ವಹ್ನಿಕುಲ' ಸಮುದಾಯದ ಹೆಣ್ಣು ಮಕ್ಕಳೇ ಶ್ರದ್ಧೆಯಿಂದ ತಯಾರು ಮಾಡುತ್ತಾರೆ. ಇದು ಕರಗ ಮತ್ತೊಂದು ವಿಶೇಷ.

ದರ್ಗಕ್ಕೆ ಕರೆದೊಯ್ಯದಂತೆ ಪಟ್ಟು: ಧರ್ಮ ದಂಗಲ್ ನಿರೀಕ್ಷೆ
ಈ ವರ್ಷ ಬೆಂಗಳೂರು ಕರಗ ಉತ್ಸವ ವೇಳೆ ನಗರದ ಪ್ರಮುಖ ಬೀದಿಯಲ್ಲಿ ದ್ರೌಪದಿಯಮ್ಮನ ಮೂರ್ತಿ ಮೆರವಣಿಗೆ ಹೊರಡುತ್ತದೆ. ಈ ವೇಳೆ ಮಸ್ತಾನ್ ದರ್ಗಾಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಭೇಟಿ ನೀಡುತ್ತದೆ. ಆದರೆ ಈ ವರ್ಷ ದರ್ಗಾಗೆ ಭೇಟಿ ನೀಡುವುದು ಬೇಡ ಎಂದು ಹಿಂದೂಪರ ಸಂಘಟನೆಗಳು ಪಟ್ಟು ಹಿಡಿದಿವೆ. ಹೀಗಾಗಿ ಉತ್ಸವಕ್ಕೆ ಧರ್ಮ ದಂಗಲ್‌ನಿಂದ ತೊಂದರೆ ಉಂಟಾಗುವ ಸಾಧ್ಯತೆ ಕಂಡು ಬರುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸತೀಶ್ ಅವರು, ಬೆಂಗಳೂರು ಕರಗಕ್ಕೆ 800 ವರ್ಷಗಳ ಇತಿಹಾಸ ಇದೆ. ಅಂದಿನಿಂದಲೂ ದರ್ಗಾಕ್ಕೆ ಹೋಗುತ್ತಲೆ ಬಂದಿದ್ದೇವೆ. ಈ ವರ್ಷವು ದರ್ಗಾಕ್ಕೆ ಕರಗ ಹೋಗುತ್ತದೆ. ಅದೆಲ್ಲವು ತಾಯಿಯ ಕೈಯಲ್ಲಿದೆ ಹೊರತು ನಮ್ಮ ಕೈಯಲ್ಲಿಲ್ಲ. ತಾಯಿ ಜೊತೆಗೆ ನಾವು ಹೋಗುತ್ತೇವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
-
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು












Click it and Unblock the Notifications