Bengaluru Karaga: ಕರಗ ಹೊತ್ತಿದ್ದ ಜ್ಞಾನೇಂದ್ರ ಕೊಲೆಗೆ ಸಂಚು, ಸಿಸಿಟಿವಿ ಆಧರಿಸಿ ಒರ್ವ ಬಂಧನ
ಬೆಂಗಳೂರು, ಏಪ್ರಿಲ್ 13: ಬೆಂಗಳೂರಿನ ವಿಶ್ವ ಪ್ರಸಿದ್ಧ ಐತಿಹಾಸಿಕ ಕರಗ (Bengaluru Karaga) ಉತ್ಸವವು ಕೆಲ ದಿನಗಳ ಹಿಂದಷ್ಟೇ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು. ಉತ್ಸವದಲ್ಲಿ ಕರಗ ಹೊತ್ತಿದ್ದವರ ಕೊಲೆಗೆ ಸಂಚು ನಡೆದಿತ್ತು ಎಂಬುದು ಸಿಸಿಟಿವಿಯಿಂದ ಬಯಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಬೆಂಗಳೂರಿನ ಕರಗ ಉತ್ಸವದಲ್ಲಿ ದ್ರೌಪದಮ್ಮನ ಕರಗವನ್ನು ಜ್ಞಾನೇಂದ್ರ ಎಂಬುವವರ ಹೊತ್ತಿದ್ದರು. ದೇವರು ಹೊತ್ತ ಜ್ಞಾನೇಂದ್ರರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಅಂಶ ಕೆಲದಿನಗಳ ಬಳಿಕ ತಡವಾಗಿ ಬೆಳಕಿದೆ ಬಂದಿದೆ.

ಕರಗ ಉತ್ಸವದ ವೇಳೆ ನನ್ನ ಮೇಲೆ ರಾಸಾಯನಿಕ ಮತ್ತು ಖಾರದಿ ಪುಡಿ ಎರಚಿ ಕೊಲೆ ಮಾಡಲು ಯತ್ನಿಸಲಾಗಿದೆ ಎಂದು ಸ್ವತಃ ಜ್ಞಾನೇಂದ್ರ ಅವರೇ ಆರೋಪಿ ಮಂಗಳವಾರ ನಗರದ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣ ಸಂಬಂಧ ಅನುಮಾನಾಸ್ಪದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ವ್ಯಕ್ತಿ ಹೆಸರು ಬೆಂಗಳೂರು ಜಯನಗರದ ನಿವಾಸಿ ಆದಿನಾರಾಯಣ ಎಂದು ತಿಳಿದು ಬಂದಿದೆ. ಪ್ರಾಥಮಿಕ ಹಂತ ದ ವಿಚಾರಣೆ ನಡೆಸಿದ್ದೇವೆ. ಮಂಗಳವಾರದಿಂದ ದೂರು ಸ್ವೀಕರಿಸಿ ನಂತರ ಆದಿನಾರಾಯಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆಗಾಗಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ನಗರದಲ್ಲಿ ಕಳೆದ ಏಪ್ರಿಲ್ 6ರಂದು ಕರಗ ಉತ್ಸವ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಯಾವುದೋ ರಸಾಯನಿಕ ಬೆರೆಸಿದ ಹೂವುಗಳನ್ನು ಬಂಧಿತ ಆದಿನಾರಾಯಣ ಕರಗ ಹೊತ್ತಿದ್ದ ಜ್ಞಾನೇಂದ್ರರ ಮೇಲೆ ಎಸೆಯುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈಮೇಲೆ ಬಿದ್ದ ರಸಾಯನಿಕದಿಂದಾಗಿ ಜ್ಞಾನೇಂದ್ರ ಅವರ ಕುತ್ತಿಗೆ ಭಾಗದಲ್ಲಿ ಸುಟ್ಟಗಾಯಗಳಾಗಿವೆ.
ಈ ಬಂಧಿತ ಆರೋಪಿ ಮತ್ತು ದೂರುದಾರ ಕರಗ ಹೊತ್ತ ಜ್ಞಾನೇಂದ್ರ ಅವರ ಮಧ್ಯೆ ಕರಗ ಹೊರುವ ವಿಚಾರಕ್ಕೆ ಹಲವು ವರ್ಷಗಳಿಂದಲೂ ಮನಸ್ತಾಪ ಇತ್ತ. ಆದಿನಾರಾಯಣನ ಪ್ರಯತ್ನ ಕೈಗೂಡಲಿಲ್ಲ. ಈ ಸೇಡಿನಿಂದಲೇ ಆತ ರಸಾಯಾನಿಕ ಕೃತ್ಯ ಎಸಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕಾರಣದಿಂದಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕರಗ ಉತ್ಸವದ ವೇಳೆ ರಾಸಾಯನಿಕ ಮಿಶ್ರಣ ಹಾಗೂ ಖಾರದ ಪುಡಿ ಮಿಶ್ರಣ ಮಾಡಿದ ಹೂವು ಎರಚಿದ್ದಾರೆ ಎಂಬ ಜ್ಞಾನೇಂದ್ರ ಅವರು ದೂರಿನ ಮೇರೆಗೆ ಬಂಧಿತ ಆದಿನಾರಾಯಣ ವಿರುದ್ಧ ಕೊಲೆ ಯತ್ನ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.
ಕರ್ಪೂರದಿಂದ ಅವಘಡ : ಬೈಕ್ ಭಸ್ಮ
ಐತಿಹಾಸಿಕ ಕರಗ ಉತ್ಸವ ಸಂಬಂಧ ನಗರದ ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಸ್ಥಾನದ ಬಳಿ ಕರ್ಪೂರ ಹಚ್ಚಿದ್ದರಿಂದ ಎಂಟು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದ್ದವು. ಮಧ್ಯಾಹ್ನ 1.30 ರಿಂದ 2ಗಂಟೆ ಸುಮಾರಿಗೆ ರಸ್ತೆ ಬದಿಯಲ್ಲಿ ಹಚ್ಚಿದ ಬೃಹತ್ ಕರ್ಪೂರದಿಂದ ಘಟನೆ ನಡೆದಿದೆ.
ಹೆಚ್ಚು ಉಷ್ಣಾಂಶ ಇದ್ದ ಪರಿಣಾಮ ರಸ್ತೆಯಲ್ಲಿ ಹಚ್ಚಿಟ್ಟಿದ್ದ ಕರ್ಪೂರವು ಗಾಳಿಗೆ ಪಕ್ಕದಲ್ಲೇ ಇದ್ದ ವಾಹನಗಳಿಗೆ ತಾಕಿದೆ. ನಂತರ ಬೈಕ್‌ಗಳ ಸೀಟು, ಪೈಬರ್ ವಸ್ತುಗಳು ಬಿಸಿಯಾಗಿ ಸುಡಲು ಆರಂಭವಾಗಿವೆ. ಕೂಡಲೇ ಹಲಸೂರು ಗೇಟ್ ಪೊಲೀಸರು ಪೈಪ್ ಬಳಸಿ ಸಮೀಪದ ಟ್ಯಾಂಕ್‌ನಿಂದ ನೀರು ಸಿಂಪಡಿಸಿ ಬೆಂಕಿ ನಂದಿಸಲು ಪ್ರಯತ್ನಿದ್ದರು. ಇದು ಭಾರಿ ಸುದ್ದಿಯಾಗಿತ್ತು.












Click it and Unblock the Notifications