ಬೆಂಗಳೂರು: ಗಾರ್ಡನ್ ಸಿಟಿ ಕಾಲೇಜಿನಲ್ಲಿ 'ಕನ್ನಡೋತ್ಸವ'
ಬೆಂಗಳೂರು, ಮಾ. 7: ನಗರದ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಮಾರ್ಚ್ 07 'ಕನ್ನಡೋತ್ಸವ' ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು ಸಂಜೆ 5 ರಿಂದ ಮನರಂಜನಾತ್ಮಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕ್ರಮವನ್ನು ಕನ್ನಡ ಚಲನಚಿತ್ರ ರಂಗದ ಹೆಸರಾಂತ ಖ್ಯಾತ ಸಂಗೀತ ಸಂಯೋಜಕ ಹಾಗೂ ಹಾಸ್ಯ ನಟರಾದ ಲಯಕೋಕಿಲ ಉದ್ಘಾಟಿಸಲಿದ್ದಾರೆ. ಚಿತ್ರ ನಿರ್ದೇಶಕ ಲಕ್ಕಿ ಶಂಕರ್, ನಾಯಕ ನಟಿ ನಮ್ರತ, ನಟ ಸುಹಾಸ್ ಹಾಗೂ ಕಿರುತರೆ ಕಲಾವಿದ ಸುಜಿತ್ ಹಾಜರಿರುವರು. ನಟ ಆದಿ ಲೋಕೇಶ್, ಸರಿಗಮ ವಿಜಯ್ ಹಾಗೂ ನಿವೃತ್ತ ನ್ಯಾಯ್ಯಧೀಶರಾದ ಸೋಮಶೇಖರ್ ಆಗಮಿಸಲಿದ್ದಾರೆ.[ಚಿತ್ರಗಳಲ್ಲಿ: ಶಿರಸಿ ಉತ್ಸವದ ಸಾಂಸ್ಕೃತಿಕ ಸಂಭ್ರಮ]

ಗಾರ್ಡನ್ ಸಿಟಿ ಕಾಲೇಜಿಗೆ ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ರಾಜ್ಯದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಕನ್ನಡ ಭಾಷೆ, ನುಡಿ ರಕ್ಷಣೆ ಹಿನ್ನೆಲೆಯಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.[ಚಿತ್ರಗಳಲ್ಲಿ: ಶ್ರವಣಬೆಳಗೊಳ ನುಡಿಹಬ್ಬದ ಹೈಲೈಟ್ಸ್]
ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಲ್ಲೂ ನೆಲ ಜಲದ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಲಾಗಿದೆ. ಕಾರ್ಯಕ್ರಮಕ್ಕೆ 150 ರೂ ಪ್ರವೇಶ ಶುಲ್ಕವಿದೆ.












Click it and Unblock the Notifications