ಕೋವಿಡ್ ನಿಯಂತ್ರಣದಲ್ಲಿ ಬೆಂಗಳೂರು ನಂಬರ್ 1: ಕೇಂದ್ರ ಸಚಿವ
ಬೆಂಗಳೂರು, ಮೇ 25: 'ದೇಶದ ಎಲ್ಲ ಮಹಾನಗರಗಳಿಗೆ ಹೋಲಿಸಿದರೆ ಕೊರೊನಾ ನಿಯಂತ್ರಣ ಮಾಡುವಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿ ಇದೆ' ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
Recommended Video
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ದಾಖಲಾಗಿರುವ 800 ರಿಂದ 900 ಪ್ರಕರಣಗಳು ಬೇರೆ ರಾಜ್ಯದಿಂದ ಇಲ್ಲಿಗೆ ಬಂದವರಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ' ಎಂದರು.
'ರಾಜ್ಯದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಾಗಿದೆ. ಕೊರೊನಾವೈರಸ್ ಪರೀಕ್ಷೆಗಳ ಪ್ರಮಾಣವೂ ಹೆಚ್ಚಿದೆ. ಹೈಡ್ರೊಕ್ಲೊರೋಫಿನ್, ಪ್ಯಾರಾಸಿಟಮಾಲ್ ಮಾತ್ರೆಗಳೂ ಅಗತ್ಯಕ್ಕಿಂತ ಹೆಚ್ಚಿದೆ. ಜನ ಆತಂಕ ಪಡುವ ಅವಶ್ಯಕತೆ ಇಲ್ಲ' ಎಂದು ಹೇಳಿದರು.

ವಲಸಿಗರನ್ನು ಅವರ ರಾಜ್ಯಕ್ಕೆ ಕಳುಹಿಸಲು ರಾಜ್ಯ ಸಿದ್ದ ಇದೆ. ಆದ್ರೆ ಆಯಾ ರಾಜ್ಯಗಳೂ ಅವರನ್ನು ಬಿಟ್ಟುಕೊಳ್ಳಲು ಒಪ್ಪಬೇಕು. ಹೀಗಾಗಿ ಒಂದಷ್ಟು ಗೊಂದಲ ಇದೆ. ರಸಗೊಬ್ಬರದ ದಾಸ್ತಾನು ಸಹ ಅಗತ್ಯದ ಪ್ರಮಾಣದಲ್ಲಿ ಇದೆ. ಪಿಪಿಇ ಕಿಟ್ ಗಳು ಅಗತ್ಯ ಇದೆ ಅಂತ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಹೋಟೆಲ್ ಗಳನ್ನು ತೆರೆಯಬೇಕು ಎಂಬ ಬೇಡಿಕೆಯೂ ಇದೆ. ಈ ಬಗ್ಗೆ ಕೇಂದ್ರದ ಜತೆ ಮಾತನಾಡಿ ಕೂಡಲೆ ವ್ಯವಸ್ಥೆ ಮಾಡಿಸುತ್ತೇನೆ' ಎಂದು ಸದಾನಂದ ಗೌಡ ಹೇಳಿದರು.












Click it and Unblock the Notifications