ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಧಾನಿಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೇನು? ಹೈಲೈಟ್ಸ್

|
Google Oneindia Kannada News

ಬೆಂಗಳೂರು, ಫೆಬ್ರವರಿ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018-19 ನೇ ಬಜೆಟ್ ನಲ್ಲಿ ಬೆಂಗಳೂರು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲವು ಘೋಷಣೆ ಮಾಡಿದ್ದಾರೆ.

ಒಳಚರಂಡಿ, ಮೆಟ್ರೋ, ರಸ್ತೆಗಳು ಸೇರಿದಂತೆ ಇನ್ನು ಹಲವು ಮೂಲಸೌಕರ್ಯಗಳ ಕುರಿತು ಹಣ ಮೀಸಲಿಡಲಾಗಿದೆ. 2018-19 ನೇ ಬಜೆಟ್ ನಲ್ಲಿ ಬೆಂಗಳೂರಿಗೆ ಏನೇನು ದೊರೆತಿದೆ ಎನ್ನುವುದನ್ನು ನೋಡೋಣ.

Bengaluru infrastructure: Siddaramaiah provide Rs.2500 crore

1) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ: 2018-19 ರಲ್ಲಿ105.55 ಕಿ.ಮೀ ಉದ್ದದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಯ ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಲು ಅಗತ್ಯ ಕ್ರಮ.

2) ಹಂತ 3 ರಲ್ಲಿ ಜೆಪಿನಗರದಿಂದ ಹೆಬ್ಬಾಳದ ಮೂಲಕ ಕೆ.ಆರ್. ಪುರಂ, ಟೋಲ್ ಗೇಟ್ ನಿಂದ ಕಡಬಗೆರೆ, ಗೊಟ್ಟಿಗೆರೆಯಿಂದ ಬಸವಾಪುರ, ಆರ್ ಕೆ ನಗರದಿಂದ ಏರೋಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್ ನಿಂದ ರಾಜನುಕುಂಟೆ, ಬೊಮ್ಮಸಂದ್ರದಿಂದ ಅತ್ತಿಬೆಲೆ, ಇಬ್ಬಲೂರಿನಿಂದ ಕರ್ಮಲ್ ರಾಮ್ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತದೆ.

Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳುLive : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

3) 2018- 19 ನೇ ಸಾಲಿನ ಹೊಸ ಯೋಜನೆಗಳು: ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ. ಮುಂದಿನ ಐದು ವರ್ಷಗಳಲ್ಲಿ ನಗರದ ಎಲ್ಲಾ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗ:ಉ ವೈಟ್ ಟಾಪಿಂಗ್. 2018-19 ನೇ ಸಾಲಿನಲ್ಲಿ 150 ಕಿ.ಮೀ ಉದ್ದದ ರಸ್ತೆಗಳು ವೈಟ್ ಟಾಪಿಂಗ್.

4) 10 ಡಬಲ್ ಡಿಕ್ಕರ್ ಬಸ್ ಖರೀದಿಗೆ ನಿರ್ಧಾರ, 325 ಬಸ್ ನಿಲ್ದಾಣಗಳು ಮೇಲ್ದರ್ಜೆಗೆ

5) ಬೆಂಗಳೂರಿನ 1 ಸಾವಿರ ಬಸ್ ಗಳಲ್ಲಿ ಮಹಿಳಾ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

6) -ಕೆಐಎಎಲ್ ನಿಂದ ಫ್ಲೈಬಸ್ ಸೇವೆ

7) 20 ಕೋಟಿ ರೂ ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್

8) -ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ ಬಜೆಟ್ ನಲ್ಲಿ 50 ಕೋಟಿ ರೂ ಹಣ ಮೀಸಲಿರಿಸಿದ್ದಾರೆ.

English summary
To improve the infrastructure of Bengaluru like roads, drainage, grade separate and many more chief minister Siddaramaiah announced an action plan of Rs.2500 crore in his budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X