ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ಕೊಡುವ ವೈಧ್ಯರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ

|
Google Oneindia Kannada News

ಬೆಂಗಳೂರು, ಡಿ. 30: ನಾವು ವೈದ್ಯರು, ಕೊರೊನಾಗೆ ಹೊಸ ರೀತಿಯ ವ್ಯಾಕ್ಸಿನ್ ಕೊಡ್ತೀವಿ ಎಂದು ಹೇಳಿಕೊಂಡು ಮನೆಗೆ ನುಗ್ಗಿರುವ ಕಿರಾತಕರು ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ತಡವಾಗಿ ಬೆಳಕಿಗೆ ಬಂದಿದೆ. ದರೋಡೆ ಮಾಡಿದ್ದ ಪ್ರಮುಖ ಆರೋಪಿ ಜಾಡು ಹಿಡಿದು ಬಂಧಿಸಲು ತೆರಳಿದ ಯಶವಂತಪುರ ಪೊಲೀಸ್ ಸಬ್‌ಇನ್ಸಪೆಕ್ಟರ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ಹೌದು ಇಂತಹ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿ. 29 ರಂದು ಜೆ.ಪಿ. ಪಾರ್ಕ್ ಸಮೀಪ ಸಂಪಂತ್ ಸಿಂಗ್ ಎಂಬುವರ ಮನೆಗೆ ವೈದ್ಯರ ಸೋಗಿನಲ್ಲಿ ದರೋಡೆಕೋರರು ಎಂಟ್ರಿ ಕೊಟ್ಟಿದ್ದಾರೆ.

ವೈದ್ಯರ ಸಮವಸ್ತ್ರ ಧರಿಸಿದ್ದ ಕಿರಾತಕರು, ಸಂಪತ್ ಸಿಂಗ್ ಪತ್ನಿ ಪಿಸ್ತಾ ಸಿಂಗ್ ಹಾಗೂ ಅವರ ಸೊಸೆ ರಕ್ಷಾ ಕೈಕಾಲು ಕಟ್ಟಿ ಪಿಸ್ತೂಲು ತೋರಿಸಿ ಹೆದರಿಸಿದ್ದಾರೆ. ಆ ಬಳಿಕ ಮನೆಯಲ್ಲಿದ್ದ ಚಿನ್ನಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಸಂಪಂತ್ ಸಿಂಗ್ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Bengaluru: House Robbed at Yeshwantpur On Pretext Of Giving Covid Vaccine Jab

ಸಿಸಿಟಿವಿ ಆಧರಸಿ ದರೋಡೆಕೋರರ ಬೆನ್ನಟ್ಟಿ ಯಶವಂತಪುರ ಠಾಣೆ ಸಬ್‌ಇನ್ಸ್ಪೆಕ್ಟರ್ ವಿನೋದ್ ರಾಥೋಡ್ ತನಿಖೆ ನಡೆಸಿದ್ದು, ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ. ಸಂಜಯ್ ನಗರ ಠಾಣಾ ವ್ಯಾಪ್ತಿಯ ಭೂಪಸಂದ್ರದಲ್ಲಿ ಆರೋಪಿಯೊಬ್ಬ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಲ್ಲಿಗೆ ತೆರಳಿದ್ದಾರೆ. ಭೂಪಸಂದ್ರದ ರೈಲ್ವೇ ಹಳಿಯ ನಿರ್ಜನ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಲು ತೆರಳಿದ್ದಾರೆ.

Bengaluru: House Robbed at Yeshwantpur On Pretext Of Giving Covid Vaccine Jab

ಪ್ರಮುಖ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ವಿನೋದ್ ರಾಥೋಡ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿರುವ ವಿನೋದ್ ಅವರನ್ನು ಬಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Bengaluru: House Robbed at Yeshwantpur On Pretext Of Giving Covid Vaccine Jab

ಭಯಾನಕ ಪ್ಲಾನ್: ವೈದ್ಯರ ಸೋಗಿನಲ್ಲಿ ಸಂಪತ್ ಸಿಂಗ್ ಮನೆಗೆ ಮೂವರು ಎಂಟ್ರಿ ಕೊಟ್ಟಿದ್ರು. ಒಂದು ಕಾರು ಹಾಗೂ ಬೈಕ್ ನಲ್ಲಿ ತೆರಳಿ, ನಾವು ವೈದ್ಯರು. ಕೊರೊನಾಗೆ ಹೊಸ ರೀತಿಯ ಲಸಿಕೆ ಬಂದಿದೆ. ಇದು ಹಾಕಿಸಿಕೊಂಡರೆ ಓಮಿಕ್ರಾನ್ ಬರಲ್ಲ ಎಂದು ನಂಬಿಸಿದ್ದಾರೆ. ಕಡ್ಡಾಯವಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲೇಬೇಕು ಎಂದು ಹೇಳಿದ್ದಾರೆ. ಇದನ್ನು ಖಚಿತ ಪಡಿಸಿಕೊಳ್ಳಲು ಪಿಸ್ತಾದೇವಿ ಗಂಡನಿಗೆ ಪೋನ್ ಮಾಡಲು ಯತ್ನಿಸಿದ್ದಾರೆ. ಆ ಬಳಿಕ ಪಿಸ್ತೂಲ್ ಹಣೆಗೆ ಇಟ್ಟು ಬೆದರಿಸಿದ್ದಾರೆ. ಬಳಿಕ ಸೊಸೆ ರಕ್ಷಾ ಅವರನ್ನು ಹಗ್ಗದಿಂದ ಕಟ್ಟಿಹಾಕಿ 50 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಪೊಲೀಸ್ ವ್ಯಾಯಾಮ ಶಾಲೆಗೆ ಚಾಲನೆ: ನಗರ ಸಶಸ್ತ್ರ ಪೊಲೀಸ್ (ದಕ್ಷಿಣ ಘಟಕ) ದಲ್ಲಿ, ಇನ್ಫೋಸಿಸ್ ಫೌಂಡೇಶನ್ ನೆರವಿನಿಂದ ನಿರ್ಮಿಸಿರುವ ಕ್ರೀಡಾ ಮೈದಾನವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು. ಈ ವೇಳೆ ಮಾತನಾಡಿದ ಗೃಹ ಸಚಿವರು, ಪೊಲೀಸರು ಯಾವಾಗಲೂ ಶಿಸ್ತಿನಿಂದ ಇರಬೇಕು. ದೈಹಿಕವಾಗಿಯೂ ಆರೋಗ್ಯವಂತವಾಗಿರಬೇಕು. ಈ ನಿಟ್ಟಿನಲ್ಲಿ ಪ್ರಾರಂಭಿಸಿರುವ ಜಿಮ್‌ನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

Bengaluru: House Robbed at Yeshwantpur On Pretext Of Giving Covid Vaccine Jab

ಎಂಇಎಸ್ ನಿಷೇಧ ಸಂಬಂಧ ಡಿ. 31 ರಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಶಾಂತಿಯುತ ಹೋರಾಟ ಮಾಡುವುದು ಅವರ ಹಕ್ಕು. ಆದರೆ ಬಂದ್ ಮಾಡುವುದರಿಂದ ಎಲ್ಲರಿಗೂ ತೊಂದರೆ ಆಗಲಿದೆ. ಕೆಲವು ಪುಂಡರಿಂದ ಆಗಿರುವ ತೊಂದರೆ ಸಂಬಂಧ ತಕ್ಕ ಕ್ರಮ ಜರುಗಿಸಾಗಿದೆ. ನೆಲ, ಜಲ, ಭಾಷೆ ರಕ್ಷಣೆ ವಿಚಾರದಲ್ಲಿ ಸರ್ಕಾರ ಯಾವತ್ತೂ ಹಿಂದೆ ಸರಿಯಲ್ಲ. ಎಂಇಎಸ್ ನಿಷೇಧ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಗೃಹ ಸಚಿವರು ಇದೇ ವೇಳೆ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಗೃಹ ಸಚಿವ ರಾಮಲಿಗಾರೆಡ್ಡಿ, ರಾಜ್ಯ ಸಭಾ ಸದಸ್ಯ ಕೆ ಸಿ ರಾಮಮೂರ್ತಿ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹಾಗೂ ಇತರರು, ಉಪಸ್ಥಿತರಿದ್ದರು.

Recommended Video

ಸೌತ್ ಆಫ್ರಿಕಾವನ್ನು ಬಗ್ಗುಬಡಿದಿದ್ದು ಹೇಗೆ ಅಂತಾ ಹೇಳಿದ ವಿರಾಟ್ | Oneindia Kannada

English summary
Bengaluru: House Robbed at Yeshwantpur On Pretext Of Giving Covid Vaccine Jab; Case registered in Yeshwantpur police station. Accused attack on police after they went to arrest him. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X