Bengaluru-Hosur Metro: ಬೆಂಗಳೂರು-ಹೊಸೂರು ನಡುವೆ ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ಕಾಮಗಾರಿ ಅಪ್ಢೇಟ್
ಚೆನ್ನೈ, ಜನವರಿ, 25: ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ರೈಲು ಕಾರ್ಯಸಾಧ್ಯತೆಯ ಅಧ್ಯಯನವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ಹೊಸೂರು ಮತ್ತು ಬೆಂಗಳೂರಿನ ಬೊಮ್ಮಸಂದ್ರ ನಡುವಿನ 20 ಕಿಲೋ ಮೀಟರ್ ಮೆಟ್ರೋ ರೈಲಿನ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಲು ಗುತ್ತಿಗೆಯನ್ನು ಬಾಲಾಜಿ ರೈಲ್‌ರೋಡ್ ಸಿಸ್ಟಮ್ಸ್ ಮತ್ತು ಹ್ಯಾಬೋಗ್ ಕನ್ಸಲ್ಟೆಂಟ್‌ಗಳ ಜೆವಿಗೆ ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ (CMRL) ನೀಡಿದೆ.
ತಮಿಳುನಾಡಿನ ಹೊಸೂರು ಮತ್ತು ಬೆಂಗಳೂರಿನ ಕೈಗಾರಿಕಾ ಕೇಂದ್ರವಾಗಿರುವ ಬೊಮ್ಮಸಂದ್ರದ ನಡುವೆ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸುವ ಕಾರ್ಯಸಾಧ್ಯತೆಯ ಅಧ್ಯಯನವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು CMRL ತಿಳಿಸಿದೆ. ಬಾಲಾಜಿ ರೈಲ್‌ರೋಡ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಹ್ಯಾಬೋಗ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಜಂಟಿ ಉದ್ಯಮದೊಂದಿಗೆ ಮೆಟ್ರೋ ರೈಲ್ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ತಿಳಿಸಿದೆ .

ಗುತ್ತಿಗೆದಾರ ಬಾಲಾಜಿ ರೈಲ್‌ರೋಡ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಹ್ಯಾಬೋಗ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿಯಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಲಿದ್ದು, 4 ತಿಂಗಳಲ್ಲಿ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿದುಬಂದಿದೆ.
Contract Agreement Signed for “Preparation of Feasibility Study Report for introducing Mass Rapid Transit System connecting Hosur with Bommasandra” for a value of Rs.29.44 lakhs
— Chennai Metro Rail (@cmrlofficial) January 23, 2024
Chennai Metro Rail Limited signed the
Contract Agreement for Selection of Consultant for Preparation… pic.twitter.com/S9zVNFlgHs
"ಹೊಸೂರನ್ನು ಬೊಮ್ಮಸಂದ್ರದೊಂದಿಗೆ ಸಂಪರ್ಕಿಸುವ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಪರಿಚಯಿಸುವ ಕಾರ್ಯಸಾಧ್ಯತೆಯ ಅಧ್ಯಯನ ವರದಿಯ ತಯಾರಿಗಾಗಿ" ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಮೌಲ್ಯ 29.44 ಲಕ್ಷ ರೂಪಾಯಿ ಆಗಿದರ. ಈ ಉದ್ದೇಶಿತ ಕಾರಿಡಾರ್ ಅಂದಾಜು 20 ಕಿಲೋ ಮೀಟರ್ ಆಗಿದೆ. ಇದು ಅತ್ತಿಬೆಲೆ ಮೂಲಕ ತಮಿಳುನಾಡಿನಲ್ಲಿ 8 ಕಿಲೋ ಮೀಟರ್ ಮತ್ತು ಕರ್ನಾಟಕದಲ್ಲಿ 12 ಕಿ.ಮೀ. ವ್ಯಾಪ್ತಿಯ ಅಂತರರಾಜ್ಯ ಯೋಜನೆಯಾಗಿದೆ.
ಒಟ್ಟಾರೆಯಾಗಿ, ಕೆಲಸದ ವ್ಯಾಪ್ತಿಯು ವಿವಿಧ ಟ್ರಾಫಿಕ್ ಸಮೀಕ್ಷೆಗಳನ್ನು ನಡೆಸುವುದು, ಅಸ್ತಿತ್ವದಲ್ಲಿರುವ ಪ್ರಯಾಣದ ಬೇಡಿಕೆ ಮಾದರಿಯನ್ನು ನವೀಕರಿಸುವುದು, 5 ವರ್ಷಗಳ ಮಧ್ಯಂತರದಲ್ಲಿ 30 ವರ್ಷಗಳ ಹಾರಿಜಾನ್ ಅವಧಿಯ ಪ್ರಯಾಣದ ಬೇಡಿಕೆಯನ್ನು ಮುನ್ಸೂಚಿಸುವುದು ಮತ್ತು ಉದ್ದೇಶಿತ ಕಾರಿಡಾರ್‌ನಲ್ಲಿ ಸವಾರರ ಅಂದಾಜು ಮಾಡುವುದನ್ನು ಒಳಗೊಂಡಿರುತ್ತದೆ." ಎಂದು CMRLನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.











Click it and Unblock the Notifications