ಬೆಂಗಳೂರು ಹೆಬ್ಬಾಳದ ಮೆಟ್ರೋ ಏಕೀಕೃತ ಸಾರಿಗೆ: 55 ಎಕರೆ ಭೂ ವಿವಾದ - ಸಿಬಿಐ ತನಿಖೆಗೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bengaluru Hebbal Metro: ಬೆಂಗಳೂರು ನಗರದ ಪ್ರಮುಖ ನಮ್ಮ ಮೆಟ್ರೋ ಯೋಜನೆಗೆ ಭೂಮಿ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ನಡುವೆ ಜಟಾಪಟಿ ಮುಂದುವರಿದಿದೆ. ಹೆಬ್ಬಾಳದಲ್ಲಿ ಮೆಟ್ರೋಗೆ ಮಲ್ಟಿಮೋಡಲ್ ಹಬ್ (ಏಕೀಕೃತ ಸಾರಿಗೆ ವ್ಯವಸ್ಥೆ) ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಈ ಹಿಂದೆಯೂ ಶೋಭಾ ಕರಂದ್ಲಾಜಿ ಅವರು ಮಾತನಾಡಿದ್ದರು. ಏನಿದು ಯೋಜನೆ ಹಾಗೂ ಇದೀಗ ವಿವಾದ ಸ್ವರೂಪ ಪಡೆದುಕೊಂಡಿರುವುದು ಯಾಕೆ, ಈ ಸಂಬಂಧ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬರೆದಿರುವ ಪತ್ರದಲ್ಲಿ ಏನಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು ನಗರದ ಹೆಬ್ಬಾಳದಲ್ಲಿ ಮೆಟ್ರೋಗೆ ಮಲ್ಟಿಮೋಡಲ್ ಹಬ್ ನಿರ್ಮಿಸಲು ಭೂಮಿ ನೀಡುವಂತೆ ನಾನು ಕಾಂಗ್ರೆಸ್ ಸರ್ಕಾರವನ್ನು ಪದೇ ಪದೇ ಒತ್ತಾಯಿಸಿದ್ದೆ, ಇದು ಸಂಚಾರವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಸಾರ್ವಜನಿಕ ಒತ್ತಡ ಮತ್ತು ವಿವಿಧ ಸಂಘಟನೆಗಳ ವಿನಂತಿಗಳ ಹೊರತಾಗಿಯೂ, ಸರ್ಕಾರವು ಖಾಸಗಿ ಸಂಸ್ಥೆಗೆ ಭೂಮಿಯನ್ನು ಮಂಜೂರು ಮಾಡಿತು. ಹೆಬ್ಬಾಳದಲ್ಲಿ 55 ಎಕರೆ ಪ್ರಧಾನ ಭೂಮಿಯನ್ನು ಅಸ್ತಿತ್ವದಲ್ಲಿಲ್ಲದ ಖಾಸಗಿ ಸಂಸ್ಥೆಗೆ ವಿವಾದಾತ್ಮಕ ವರ್ಗಾವಣೆಯನ್ನು ಇಂದು ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ರದ್ದುಗೊಳಿಸಿದೆ ಮತ್ತು ಸಿಬಿಐ ತನಿಖೆಗೆ ಆದೇಶಿಸಿದೆ.
ಇದು ಬೇಲಿಯೇ ಎದ್ದು ಬೆಳೆ ಮೇಯ್ದಂತೆ ಎನ್ನುವ ಶ್ರೇಷ್ಠ ಪ್ರಕರಣ. ಆರಂಭದಲ್ಲಿ, ಸಾರಿಗೆಯನ್ನು ಸುಗಮಗೊಳಿಸಲು ಮತ್ತು ಸಂಚಾರ ಅವ್ಯವಸ್ಥೆಯನ್ನು ಪ್ರಮುಖ ಪ್ರಮಾಣದಲ್ಲಿ ಕಡಿಮೆ ಮಾಡಲು ಮೆಟ್ರೋ ವಿಸ್ತರಣೆಗೆ ಭೂಮಿಯ ಅಗತ್ಯವಿದ್ದಾಗ ಖಾಸಗಿ ಸಂಸ್ಥೆಗೆ ಭೂಮಿ ಮಂಜೂರು ಮಾಡುವುದು ಅತ್ಯಂತ ತರ್ಕಬದ್ಧವಲ್ಲದ ಕೆಲಸವಾಗಿತ್ತು. ಇದೀಗ ಗೌರವಾನ್ವಿತ ಹೈಕೋರ್ಟ್‌ನ ಆದೇಶವು ಜನರಿಗೆ ಸಿಕ್ಕ ದೊಡ್ಡ ಗೆಲುವು. ಸಿಬಿಐ ತನಿಖೆಯ ನಂತರ ಇನ್ನೂ ಅನೇಕ ರಹಸ್ಯಗಳು ಹೊರಬರಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಹೆಬ್ಬಾಳ ಮೆಟ್ರೋ ಮಲ್ಟಿಮೋಡಲ್ ಹಬ್ ಯೋಜನೆ
ಇನ್ನು ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗ ಹಾಗೂ ಹೆಬ್ಬಾಳದಲ್ಲಿ ಮೆಟ್ರೋ, ಉಪನಗರ ರೈಲು ಮತ್ತು ಬಿಎಂಟಿಸಿ ಬಸ್‌ಗಳನ್ನು ಸಂಪರ್ಕಿಸುವ ಬಹು ಮಾದರಿ ಸಾರಿಗೆ ಹಬ್ (Multi-Modal Transport Hub) ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಅಗತ್ಯ ಅಥವಾ ಪೂರಕ ನೆರವು ನೀಡಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದ್ದರು. ಅಲ್ಲದೆ ಕರ್ನಾಟಕ ಸರ್ಕಾರದ ಭೂಮಿ ಹಂಚಿಕೆ ವಿಚಾರವು ಸಹ ವಿವಾದಾತ್ಮಕ ಸ್ವರೂಪವನ್ನು ಪಡೆದುಕೊಂಡಿತ್ತು.
Bengaluru-Hebbal Metro: ಏನಿದು ಯೋಜನೆ
ಸ್ಥಳ: ಹೆಬ್ಬಾಳದ ಕೆಐಎಡಿಬಿ (KIADB) ಪ್ರದೇಶದಲ್ಲಿ ಸುಮಾರು 45-55 ಎಕರೆ ಜಾಗದಲ್ಲಿ ಈ ಯೋಜನೆ ರೂಪಿಸಲಾಗಿತ್ತು.
ಉದ್ದೇಶ: ಮೆಟ್ರೋ (ನೀಲಿ ಮಾರ್ಗ), ಉಪನಗರ ರೈಲು, ಬಿಎಂಟಿಸಿ ಬಸ್ ಡಿಪೋ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕವನ್ನು ಒಂದೇ ಕಡೆ ತಂದು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಮೆಟ್ರೋ ಡಿಪೋ: ಬಿಎಂಆರ್‌ಸಿಎಲ್ (BMRCL) ಇಲ್ಲಿ ಮೆಟ್ರೋ ರೈಲುಗಳ ನಿರ್ವಹಣಾ ಡಿಪೋ ನಿರ್ಮಿಸಲು ಉದ್ದೇಶಿಸಿತ್ತು.












Click it and Unblock the Notifications