Bengaluru: ಇಂದಿನಿಂದ ಸುರಂಜನ್ ದಾಸ್ ಜಂಕ್ಷನ್ ಬಳಿಯ ರಸ್ತೆ ಅಂಡರ್‌ಪಾಸ್ ಸಂಚಾರ ಮುಕ್ತ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಮುಖ ರಸ್ತೆಯೊಂದರ ಅಂಡರ್ ಪಾಸ್ ಲೋಕಾರ್ಪಣೆ ಆಗುವ ಮೂಲಕ ವಾಹನ ಸವಾರರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಯಾವ ಜಂಕ್ಷನ್ನಿನ ರಸ್ತೆ ಅಂಡರ್‌ಪಾಸ್, ಅಂದಾಜು ವೆಚ್ಚ, ನಿರ್ಮಾಣ, ಅದರ ಪ್ರಯೋಜನ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 09: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಮುಖ ರಸ್ತೆಯೊಂದರ ಅಂಡರ್ ಪಾಸ್ ಲೋಕಾರ್ಪಣೆ ಆಗುವ ಮೂಲಕ ವಾಹನ ಸವಾರರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ.
ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿರುವ ಬೆಂಗಳೂರಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಚಾರ ದಟ್ಟಣೆ ನಿಂಯತ್ರಣ ಸಂಬಂಧ ಬೃಹತ್ ಬೆಂಗಳೂರು ನಗರ ಪಾಲಿಕೆ (BBMP) ಅಂಡರ್‌ಪಾಸ್ ನಿರ್ಮಿಸಿದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ನಿರ್ಮಾಣವಾದ 'ಸುರಂಜನ್ ದಾಸ್ ಜಂಕ್ಷನ್' ಬಳಿಯ ಕೆಳಸೇತುವೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಗುರುವಾರ ಲೋಕಾರ್ಪಣೆಗೊಳಿಸಿದರು.
ಹಳೇ ವಿಮಾನ ನಿಲ್ದಾಣ ರಸ್ತೆಯ ಸುರಂಜನ್ ದಾಸ್ ಜಂಕ್ಷನ್‌ವು ಬೆಂಗಳೂರಿನ ಕೇಂದ್ರಭಾಗ ಮತ್ತು ಪೂರ್ವ ಭಾಗದಲ್ಲಿರುವ ಮಾಹಿತಿ ತಂತ್ರಜ್ಞಾನದ ಪ್ರದೇಶವಾಗಿರುವ (ITPL)ಮಾರತ್ತಹಳ್ಳಿ, ವೈಟ್‌ಫೀಲ್ಡ್, ವರ್ತೂರು ಮತ್ತು ಹೊರವರ್ತುಲ ಮುಂದುವರೆದ ಪ್ರದೇಶಗಳಿಗೆ ಸಂಪರ್ಕಿಸುವ ಜಂಕ್ಷನ್ ಆಗಿದೆ.

ಸುರಂಜನ್ ದಾಸ್ ಜಂಕ್ಷನ್ ಸುತ್ತಮುತ್ತ ಸಣ್ಣ ಮಧ್ಯಮ ಮತ್ತು ಬೃಹತ್ ಐಟಿ ಸಂಸ್ಥೆಗಳು ಸ್ಥಾಪಿತವಾಗಿವೆ. ಅತೀ ಹೆಚ್ಚಿನ ವಾಹನ ದಟ್ಟಣೆ ಇಲ್ಲಿ ಕಂಡು ಬರುತ್ತದೆ. ಇದರ ಪರಿಹಾರಾರ್ಥವಾಗಿ ಬಿಬಿಎಂಪಿ 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಹಳೇ ವಿಮಾನ ನಿಲ್ದಾನ ರಸ್ತೆಯನ್ನು ಸಿಗ್ನಲ್ ಮುಕ್ತ ಕಾರಿಡಾರ್ ಯೋಜನೆಯ ಭಾಗವಾಗಿ ಕೆಳಸೇತುವೆ ನಿರ್ಮಿಸಿದೆ. ಇದರ ಕಾಮಗಾರಿ 2018ರ ಅಕ್ಟೋಬರ್ 20 ರಂದು ಆರಂಭವಾಯಿತು. ಆದರೆ ಕಾರಣಾಂತರಗಳಿಂದ ನಿಗದಿತ ಅವಧಿಗೆ ಮುಗಿಯಲಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.
ಎಚ್‌ಎಎಲ್ ಸೇರಿದಂತೆ ಈ ಸುರಂಜನ್ ದಾಸ್ ಪ್ರದೇಶದ ರಸ್ತೆಗಳಲ್ಲಿ ನಿತ್ಯ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಸಂಸ್ಥೆಗಳಾದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL), ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಜೇಶನ್ (ISRO), ನ್ಯಾಷನಲ್ ಏರೋಸ್ಪೇಸ್ ಲ್ಯಾಬರೋಟರಿ (NAL), ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಐಟಿ ಕಂಪನಿ ಉದ್ಯೋಗಿಗಳು ದಿನನಿತ್ಯ ಸಂಚರಿಸುತ್ತಾರೆ. ಅಲ್ಲದೇ ರಾಜ್ಯ ರಾಷ್ಟ್ರೀಯ ಹೆದ್ದಾರಿಗಳಿಗೆ, ಹೊರವಲಗಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದೆ.

ಕೆಳಸೇತುವೆ ಸಂಪೂರ್ಣ ವಿವರ
ಕೆಳಸೇತುವೆ ಉದ್ದ- 267.26 ಮೀಟರ್
ಲೈನ್‌ಗಳ ಸಂಖ್ಯೆ - 4 ಲೈನ್ ದ್ವಿಮುಖ ಸಂಚಾರ
ಮಾರ್ಗದ ಅಗಲ -2 X 7.50 ಮೀಟರ್
ಲಂಬ ತೆರವು- 4.50 ಮೀಟರ್
ಬಾಕ್ಸ ಭಾಗದ ಉದ್ದ 52 ಮೀಟರ್
ಅಂದಾಜು ವೆಚ್ಚ- 19 ಕೋಟಿ ರೂ.ಗಳು
ಕಾಮಗಾರಿ ಆರಂಭ- 2018 ಅಕ್ಟೋಬರ್ 20
ಕಾಮಗಾರಿ ಪೂರ್ಣ- 2023 ಜನವರಿ 25
ಕಾಮಗಾರಿ ವಿಳಂಬಕ್ಕೆ ಕಾರಣಗಳು
ಎಚ್ಎಎಲ್ ಸಂಸ್ಥೆಗೆ ಸೇರಿದ ಸುಮಾರು 3100 ಚದರ ಮೀಟರ್ ಜಾಗದ ಭೂಸ್ವಾಧೀನ, ಜಲಮಂಡಳಿಯ ಮತ್ತು ಬೆಸ್ಕಾಂ ಉಪಯುಕ್ತತೆಗಳ ಸ್ಥಳಾಂತರ ಆಗಬೇಕಿತ್ತು. ಒಟ್ಟು ಸುಮಾರು 32 ಮರಗಳನ್ನು ಸ್ಥಳಾಂತರ ಜೊತೆಗೆ ಒಂದಷ್ಟು ಮರಗಳ ತೆರವು ಆಗಬೇಕಿತ್ತು. ಜೊತೆಗೆ ಯೋಜನೆ ಕುರಿತು ಹೈಕೋರ್ಟ್‌ಗೆ ದಾವೆ ಹೂಡಲಾಗಿತ್ತು. ಈ ಎಲ್ಲ ಕಾರಣದಿಂದ ಕೆಳಸೇತುವೆಯನ್ನು ಸಾರ್ವಜನಿಕ ಬಳಕೆಗೆ ನೀಡುವುದು ತಡವಾಯಿತು ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications