Viral: ತಿಂಗಳಿಗೆ ₹2 ಲಕ್ಷ ವೇತನದ ಹುಡುಗನ ಕಂಡೀಷನ್ ಕೇಳಿ ರಿಜೆಕ್ಟ್ ಮಾಡಿದ ಬೆಂಗಳೂರು ಯುವತಿ
ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಮದುವೆಗೆ ಹುಡುಗಿ ಸಿಗುತ್ತಿಲ್ಲ ಎಂಬ ಮಾತು ಅನೇಕ ಹುಡುಗರಿಂದ ಕೇಳಿ ಬರುತ್ತಿದೆ. ಅದೆಷ್ಟೋ ಯುವಕರಿಗೆ ಮದುವೆ ವಯಸ್ಸು ಮೀರಿದರೂ ವಿವಾಹವಾಗುತ್ತಿಲ್ಲ. ಇದಕ್ಕೆ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಶಿಕ್ಷಣ, ಬದಲಾದ ಮನೋಚಿಂತನೆಗಳು ಸೇರಿದಂತೆ ಅನೇಕ ಕಾರಣಗಳಿವೆ. ಆದರೆ ಬೆಂಗಳೂರಿನ ಯುವತಿ ತನಗೆ ಕಂಡಿಷನ್ ಹಾಕಿದ್ದಾನೆ ಎಂದು ಮಾಸಿಕ 2ಲಕ್ಷ ರೂಪಾಯಿ ವೇತನದ ಹುಡುಗನನ್ನು ರಿಜೆಕ್ಟ್ ಮಾಡಿದ್ದಾಳೆ. ಈ ಸುದ್ದಿ ಆನ್ಲೈನ್ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಇಂದಿನ ಕಾಲದಲ್ಲಿ ಹೆಣ್ಣು ಗಂಡಿನಷ್ಟೇ ಸರಿಸಮಾನವಾಗಿ, ಸ್ವತಂತ್ರ್ಯವಾಗಿ ಬದುಕಬೇಕು. ತಾನು ಯಾರಿಗೂ ಕಡಿಮೆ ಅಲ್ಲ ಎಂಬ ಭಾವನೆ ಹೊಂದಿದ್ದಾಳೆ. ಗಂಡಿನಂತೆ ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿರುವ ಹೆಣ್ಣು ಮಕ್ಕಳು ಸುಶಿಕ್ಷಿತರಾಗಿದ್ದಾರೆ. ಅವರ ಸಾಮಾಜಿಕ ಚಿಂತನೆ, ವಿವಾಹದ ಮೇಲಿನ ದೃಷ್ಟಿಕೋನ ಸಾಕಷ್ಟು ಬದಲಾಗಿದೆ. ಮದುವೆ ಬಗ್ಗೆ ಅವರಲ್ಲಿ ಸ್ಪಷ್ಟ ಪರಿಕಲ್ಪನೆ ಇದೆ.

ಕೆಲವು ಯುವತಿಯರು ಸಾಂಪ್ರದಾಯದಂತೆ, ಪೋಷಕರು ಹೇಳಿದಂತೆ ಒಪ್ಪಿ ಮದುವೆ ಆಗುತ್ತಾರೆ. ಇನ್ನೂ ಹಲವು ಯುವತಿಯರು ನಾನೂ ಸ್ವತಂತ್ರವಾಗಿರಬೇಕು, ಆರ್ಥಿಕವಾಗಿ ಯಾರ ಮೇಲೂ ಅವಲಂಬಿತವಾಗಿರಬಾರದು ಎಂಬ ಭಾವನೆ ಹೊಂದಿರುತ್ತಾರೆ. ಇದಕ್ಕೆ ಸರಿ ಹೊಂದದ ಹುಡುಗನನ್ನು ಯುವತಿಯರು ಒಪ್ಪದಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿದೆ.
ನಂದಿನಿ ಪೋಸ್ಟ್ ವೈರಲ್
ಅದೇ ರೀತಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ನಂದಿನಿ ಎಂಬುವವರು ತಾಯಿಯ ಒತ್ತಾಯಕ್ಕೆ ಮದುವೆಗೆ ಒಪ್ಪಿಗೆ ನೀಡಿ ಯುವಕನನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಸ್ವತಃ ಅವರೇ ಮಾಹಿತಿ ಹಂಚಿಕೊಂಡಿದ್ದು, ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಪೋಸ್ಟ್ ಲಕ್ಷಾಂತರ ವಿವ್ಸ್ ಪಡೆದಿದೆ.
ಎಮೋಷನಲ್ ಬ್ಲ್ಯಾಕ್ ಮೇಲ್ ಮಾಡಿದ್ದ ಅಮ್ಮನ ಮಾತಿನಂತೆ ಮದುವೆ ಒಪ್ಪಿದ್ದ ಯುವತಿ-ಯುವಕನ ನಡುವೆ ಸಂಭಾಷಣೆ ನಡೆದಿದೆ. ಹುಡುಗ ಮತ್ತು ನಂದಿನಿ ಇಬ್ಬರು ಸಹ ಐಟಿ ಉದ್ಯೋಗಿಗಳು. ಯುವತಿಗೆ ಮಾಸಿಕ 90 ಸಾವಿರ ವೇತನ, ಹುಡುಗನಿಗೆ 2 ಲಕ್ಷ ಸಂಬಳವಿದೆ. 'ಹುಡುಗ ಮದುವೆ ಆದ ಮೇಲೆ ನನ್ನ ಕುಟುಂಬಕ್ಕೆ ಶೇ.50ರಷ್ಟು ಹಣ ನೀಡಬೇಕು. ಇಲ್ಲವಾದರೆ ಕೆಲಸ ಬಿಟ್ಟು ಗೃಹಿಣಿಯಾಗಬೇಕು' ಎಂದು ಕಂಡೀಷನ್ ಹಾಕಿದ್ದಾನೆ'.
ಆತನ ಮಾತಿಗೆ ಮರುತ್ತರ ನೀಡದಿದ್ದಾಗ, ಮತ್ತೆ ಆತ 'ಮಹಿಳೆಯರಿಗೆ ಕೆಲಸದ ಅಗತ್ಯವೇನಿದೆ? ಎಂದು ಪ್ರಶ್ನೆಸಿದ್ದಾನೆ. ಆಗ ಯುವತಿ ನೀವು ಅವಲಂಬಿತ ಹೆಂಡತಿಯನ್ನು ಹುಡುಕುತ್ತಿದ್ದೀರಿ. ನೀವು ಯಾಕೆ ಗೃಹಿಣಿಯಾಗುವ ಯುವತಿಯನ್ನೇ ಮದುವೆ ಆಗಬಾರದು? ನೀವು ಕೆಲಸ ಮಾಡುವ ಯುವತಿಯನ್ನು ಏಕೆ ಮದುವೆ ಮನವೊಲಿಸುತ್ತಿದ್ದೀರಿ! ಎಂದು ನಂದಿನಿ ಪ್ರಶ್ನಿಸಿದ್ದಾಳೆ.
ಈ ಸಂಭಾಷಣೆ ಹೋಟೆಲ್ನಲ್ಲಿ ನಡೆದಿದ್ದು, ಹುಡುಗನ ಅಂತರಾಳ ತಿಳಿದ ಯುವತಿ ತಾನು ತಿಂದ ಪ್ರೆಂಚ್ ಫ್ರೈಸ್ಗೆ ಅರ್ಧ ಬಿಲ್ ಕೊಟ್ಟು ಅಲ್ಲಿಂದ ಹೊರಟು ಹೋಗಿದ್ದಾಳೆ. ಅಲ್ಲಿಗೆ ಹುಡುಗನನ್ನು ರಿಜೆಕ್ಟ್ ಮಾಡಿದ ವಿಷಯ ಮನೆಯಲ್ಲಿ ಗೊತ್ತಾಯಿತು. ಕೆಲವು ದಿನ ಅಮ್ಮ ಮಾತನಾಡಿರಲಿಲ್ಲ. ಈಗ ಎಲ್ಲವು ಸರಿ ಹೋಗಿದೆ ಎಂದು ಯುವತಿ ಪೋಸ್ಟ್ನಲ್ಲಿ ತಿಳಿಸಿದ್ದಾಳೆ.
ನೆಟ್ಟಿಗರಿಂದ ಅನೇಕ ರೀತಿ ವಿಶ್ಲೇಷಣೆ
ಸದ್ಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಶ್ಲೇಷಿಸಿದ್ದಾರೆ. ಮಹಿಳೆಯರು ಹಕ್ಕು, ಆರ್ಥಿಕ ಸ್ವಾಲಂಬನೆ, ಮಹಿಳೆ ಆರ್ಥಿಕವಾಗಿ ಸ್ವತಂತ್ರಳಾದರೆ ಕೈ ತಪ್ಪಿ ಹೋಗುತ್ತಾಳೆ ಎಂಬ ಕೆಲವು ಪುರುಷರ ಭಾವನೆ' ಹೀಗೆ ನಾನಾ ಆಯಾಮಗಳಲ್ಲಿ ಈ ಘಟನೆಯನ್ನು ಸಾಮಾಜಿಕ ಬಳಕೆದಾರರು ವಿಶ್ಲೇಷಿಸಿದ್ದಾರೆ, ಚರ್ಚಿಸಿದ್ದಾರೆ. ಕೆಲವರು ನಿಮ್ಮ ನಿರ್ಧಾರ ಸರಿಯಾಗಿದೆ ಎಂದು ನಂದಿನಿಗೆ ಸಪೋರ್ಟ್ ಮಾಡಿದ್ದಾರೆ.
Few months back my mother emotionally blackmailed me into meeting a guy who earns more than twice my salary.
— Nandini M (@your_niaaaa) August 14, 2026
He earns ₹2 lakh a month. I work in IT and earn ₹90K.
He lives with his parents, who depend on him financially. His married sister is a homemaker and apparently also…


Click it and Unblock the Notifications
