ಬೆಂಗಳೂರಿನ 'ಒಂಟಿ' ಮಹಿಳೆಗೆ ರೂಂ ನಿರಾಕರಿಸಿದ ಹೋಟೆಲ್
ಬೆಂಗಳೂರು, ಜೂನ್ 26 : ಬೆಂಗಳೂರಿನ 23 ವರ್ಷದ ಮಹಿಳೆಯೋರ್ವರಿಗೆ ರೂಂ ನೀಡಲು ಹೈದರಾಬಾದ್ ನ ಹೋಟೆಲ್ ನಿರಾಕರಿಸಿ ಅವಮಾನ ಮಾಡಿದೆ. ಸೋಮವಾರ ಈ ಘಟನೆ ನಡೆದಿದೆ.
ಇದಕ್ಕೆ ಕಾರಣ ಏನು ಗೊತ್ತಾ? ಅವರು ಒಂಟಿಯಾಗಿದ್ದಾರೆಂದು! ಕೋಣೆ ನಿರಾಕರಿಸಿದ್ದಕ್ಕೆ ಹೋಟೆಲ್ ಅಧಿಕಾರಿಗಳು ಸೂಕ್ತವಾದ ಕಾರಣವನ್ನೂ ನೀಡಿಲ್ಲ.
ಬೆಂಗಳೂರಿನ ಮಹಿಳೆ ನೂಪುರ್ ಸರಸ್ವತ್ ಹೈದರಾಬಾದ್ ನ ಹೋಟೆಲೊಂದರಲ್ಲಿ ರೂಂ ಕೇಳಿದ್ದಾರೆ. ಆದರೆ, ಅವರು ಒಂಟಿಯಾಗಿದ್ದಾರೆಂದು ರೂಂ ನೀಡಲು ಹೋಟೆಲ್ ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ದೇಶದಲ್ಲಿ ಒಂಟಿಯಾಗಿ ಅಡ್ಡಾಡುವ ಬೇಕಾದಷ್ಟು ಮಹಿಳೆಯರಿದ್ದಾರೆ. ಒಂಟಿಯಾಗಿದ್ದರೇನಂತೆ, ಹೋಟೆಲ್ ರೂಂ ನೀಡದಿರುವುದು ಎಷ್ಟು ಸರಿ ಎಂದು ಬೆಂಗಳೂರಿನ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂಟಿ ಮಹಿಳೆಗೆ ರೂಂ ನೀಡುವುದು ಸುರಕ್ಷತೆಯ ದೃಷ್ಟಿಯಿಂದ ಅಷ್ಟು ಒಳ್ಳೆಯದಲ್ಲ ಎಂಬುದು ಅವರ ವಾದ. ಆದರೆ, ಅವರಿಗೆ ನನ್ನ ಬಗ್ಗೆ ಅಷ್ಟು ಕಾಳಜಿಯಿದ್ದರೆ, ನನ್ನನ್ನು ರೂಂ ಕೂಡ ನೀಡದೆ ಬೀದಿಗೆ ತಳ್ಳುತ್ತಿದ್ದರೆ ಎಂದು ನೂಪುರ್ ಕಿಡಿಕಾರಿದ್ದಾರೆ.
ಮೊದಲೇ ಬುಕ್ ಮಾಡಿದ್ದರೂ ರೂಂ ನೀಡದ್ದರಿಂದ ಬುಕ್ಕಿಂಗ್ ಹಣವನ್ನು ಅವರಿಗೆ ತಿರುಗಿ ನೀಡಿದ್ದಾರೆ. ಇದಕ್ಕಾಗಿ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ, ಅವರು ನೀಡಿರುವ ಕಾರಣ ಸಮಂಜಸವಾಗಿಲ್ಲ ಎಂಬುದು ನೂಪುರ್ ಅವರ ವಾದ.












Click it and Unblock the Notifications