ಬೆಂಗಳೂರಿಗೆ ಬಂತು ಕಸ ವಿಲೇವಾರಿಯ ವಿಶೇಷ 'ಗಾಬ್ಲರ್ ಯಂತ್ರ', ಏನಿದರ ವೈಶಿಷ್ಟ್ಯ

ಬೆಂಗಳೂರು: ಬೆಂಗಳೂರಿನ ಪ್ರತಿ ನಿತ್ಯ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಲಕ್ಷಾಂತರ ಟನ್ ಕಸ ಸಂಗ್ರಹವಾಗುತ್ತದೆ. ಅದರ ವಿಲೇವಾರಿಯದ್ದೆ ಸಮಸ್ಯೆ ಆಗುತ್ತಿದೆ. ಕಸ ಸ್ವಚ್ಛತೆ, ನಿರ್ವಹಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಒಂದಿಲ್ಲೊಂದು ಉಪಕ್ರಮ ಜಾರಿಗೆ ತರುತ್ತದೆ. ಇದೀಗ ಪ್ರಾಧಿಕಾರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಿಶೇಷ 'ಗಾಬ್ಲರ್' (ಸ್ಮಾರ್ಟ್ ಕಸ ಸಂಗ್ರಹಿಸುವ ಯಂತ್ರ) ಯಂತ್ರವನ್ನು ಬಳಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಳಾಗುತ್ತಿದೆ. ನಗರದ ಎಂಜಿ ರಸ್ತೆ ಭಾಗದ ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳಲ್ಲಿ ಹೊಸ ಗಾಬ್ಲರ್ (ಸ್ಮಾರ್ಟ್ ಕಸ ಸಂಗ್ರಹಿಸುವ ಯಂತ್ರ) ಯಂತ್ರವನ್ನು ಪ್ರಾಯೋಗಿಕವಾಗಿ ಬಳಸಿ ವರದಿ ನೀಡುವಂತೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Bengaluru Gobbler Machine

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಿವಾಜಿನಗರ ವಿಭಾಗದ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿ ಇಂದು ಗಾಬ್ಲರ್ ಯಂತ್ರದ ಡೆಮೋ (Demo) ಪರಿಶೀಲನೆ ನಡೆಸಿದ ವೇಳೆ ಮಹೇಶ್ವರ್ ರಾವ್ ಮಾತನಾಡಿದರು. ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ನಗರದ ರಸ್ತೆಗಳನ್ನು ಸ್ವಚ್ಛವಾಗಿಡಬೇಕು. ಈ ನಿಟ್ಟಿನಲ್ಲಿ ಗಾಬ್ಲರ್ ಯಂತ್ರ ಪ್ರಾಯೋಗಿಕವಾಗಿ ಬಳಸಬೇಕೆಂದು ತಿಳಿಸಿದ್ದಾರೆ. ವರದಿ ನೋಡಿಕೊಂಡು ಮುಂದಿನ ಎಲ್ಲ ನಗರ ಪಾಲಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯಂತ್ರಗಳನ್ನು ಬಳಸಿಕೊಳ್ಳಲು ಅವರು ನಿರ್ದೇಶನ ನೀಡಿದರು.

KSRTC ಬಸ್ ಪಾಸ್‌ ವಿತರಣೆ: ಮೇ 29ರಿಂದ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕ್ರಮ ಅನುಸರಿಸಿ
KSRTC ಬಸ್ ಪಾಸ್‌ ವಿತರಣೆ: ಮೇ 29ರಿಂದ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕ್ರಮ ಅನುಸರಿಸಿ

ನಡೆದುಕೊಂಡೆ ಯಂತ್ರ ನಿಯಂತ್ರಿಸಬಹುದು

ಗಾಬ್ಲರ್ ಯಂತ್ರವು ಸ್ಮಾರ್ಟ್ ಯಂತ್ರವಾಗಿದ್ದು, ಸರಿಯಾದ ತರಬೇತಿ ಪಡೆದ ಚಾಲಕನು ಅದರ ಮೇಲೆ ನಿಂತುಕೊಂಡೇ ಚಾಲನೆ ಮಾಡಬಹುದು. ಅಲ್ಲದೆ, ಚಾಲಕನು ನಡೆದುಕೊಂಡು ಹೋಗುತ್ತಾ ಯಂತ್ರವನ್ನು ನಿಯಂತ್ರಿಸಬಹುದಾದ ವ್ಯವಸ್ಥೆಯೂ ಇದರಲ್ಲಿದೆ. ಒಬ್ಬ ವ್ಯಕ್ತಿ ಇದನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.

ವಿದ್ಯುತ್ ಚಾಲಿತ ಕಸ ಸಂಗ್ರಹ ಯಂತ, ನಿರ್ವಹಣೆ ಸುಲಭ

ಈ ಯಂತ್ರವು ವಿದ್ಯುತ್ ಬ್ಯಾಟರಿ ಮೂಲಕ ಕಾರ್ಯ ನಿರ್ವಹಿಸುತ್ತದೆ. 3 ಗಂಟೆಗಳ ಕಾಲ ಚಾರ್ಜ್ ಮಾಡಿದರೆ, 8 ಗಂಟೆಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸಲಿದೆ. ಯಂತ್ರಕ್ಕೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದ್ದು, ಮೇಲ್ವಿಚಾರಣೆ ಮಾಡಲು ಅನುಕೂಲವಾಗಲಿದೆ. ಇದು ಕಿರಿದಾದ ಜಾಗಗಳಲ್ಲಿಯೂ ಸುಲಭವಾಗಿ ಬಳಸಬಹುದಾಗಿದೆ.

ಗಾಬ್ಲರ್ ಯಂತ್ರದಲ್ಲಿ 240 ಲೀಟರ್ ತ್ಯಾಜ್ಯ ಸಂಗ್ರಹಿಸುವ ಕಂಟೈನರ್, ಧೂಳಿನ ಫಿಲ್ಟರ್, ಕಂಟ್ರೋಲ್ ಬಟನ್‌ಗಳು, ಕಸ ಹೆಕ್ಕಲು ಜಾಯ್‌ಸ್ಟಿಕ್, ಫ್ಲಾಷಿಂಗ್ ಎಚ್ಚರಿಕೆ ದೀಪ, ರಾತ್ರಿ ವೇಳೆ ಕಾರ್ಯನಿರ್ವಹಿಸಲು ಎಲ್.ಇ.ಡಿ ದೀಪ, ಹಿಂಬದಿ ಚಲನೆಯ ಎಚ್ಚರಿಕಾ ಅಲಾರಂ ಹಾಗೂ ಅಗ್ನಿಶಾಮಕ ಸಾಧನಗಳಿವೆ. ಕಸ ಸಂಗ್ರಹವಾದ ಬಳಿಕ ಬಯೋಡಿಗ್ರೇಡಬಲ್ ಬ್ಯಾಗ್‌ಗಳ ಮೂಲಕ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಬಹುದಾಗಿದೆ.

ಕಸ ಸಂಗ್ರಹಣೆ ಹೇಗೆ?

ಯಂತ್ರವು ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಧೂಳು, ಮರದ ತುಂಡುಗಳು, ಪ್ಲಾಸ್ಟಿಕ್, ಅಲ್ಯೂಮಿನಿಯಂ, ಕಾಗದ, ಗಾಜು, ಒಣ ಎಲೆಗಳು, ಪ್ಲಾಸ್ಟಿಕ್ ಚೀಲಗಳು, ರ‍್ಯಾಪರ್‌ಗಳು ಹಾಗೂ ಪ್ಲಾಸ್ಟಿಕ್ ಮತ್ತು ಲೋಹದ ಬಾಟಲಿಗಳು ಸೇರಿದಂತೆ ಇತರೆ ತ್ಯಾಜ್ಯವನ್ನು ಸುಲಭವಾಗಿ ಹೀರಿಕೊಂಡು ರಸ್ತೆಗಳನ್ನು ಸ್ವಚ್ಛಗೊಳಿಸಲಿದೆ. ಅಲ್ಲದೆ, 12 ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿದ್ದು, ಪ್ರೆಶರ್ ಪೈಪ್ ಮೂಲಕ ಸ್ವಚ್ಛಗೊಳಿಸುವ ವ್ಯವಸ್ಥೆಯೂ ಇದೆ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಹೇಳಿದರು.

ಕೆ.ಆರ್. ಮಾರುಕಟ್ಟೆ, ರಸಲ್ ಮಾರುಕಟ್ಟೆ, ಕಮರ್ಷಿಯಲ್ ಸ್ಟ್ರೀಟ್, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಇತರೆ ಸಿಬಿಡಿ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ ಬಳಸಿ, ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪರಿಶೀಲಿಸಬೇಕು. ಗಾಬ್ಲರ್ ಯಂತ್ರದ ಕಾರ್ಯಕ್ಷಮತೆ ಪರಿಶೀಲಿಸಿ ಯಾವುದೇ ಸಮಸ್ಯೆ ಇಲ್ಲದಿದ್ದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+