ಬೆಂಗಳೂರು ಫುಟ್‌ಪಾತ್ ಒತ್ತುವರಿ ತೆರವಿಗೆ 2 ತಿಂಗಳು ಪೂರ್ಣ: ಈವರೆಗೆ ಎಷ್ಟು ಕಿಮೀ ಮಾರ್ಗ ತೆರವಾಗಿದೆ?

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಿನಿಂದ ವಿವಿಧ ರಸ್ತೆಗಳಲ್ಲಿ ಪಾದಾಚಾರಿ ಒತ್ತುವರಿ ಮಾರ್ಗ ತೆರವು ಮಾಡಲಾಗಿದೆ. ಜುಲೈ 1ರಿಂದ ಆಗಸ್ಟ್ 31ರವರೆಗೆ ಒಟ್ಟು 60 ದಿನಗಳಲ್ಲಿ ಒಟ್ಟು 286.67 ಕಿಲೋ ಮೀಟರ್ ಪಾದಚಾರಿ ಮಾರ್ಗ ಅತಿಕ್ರಮಣವನ್ನು ಮುಕ್ತಗೊಳಿಸಲಾಗಿದೆ. ಇಂದು ಸೋಮವಾರ ಒಂದೇ ದಿನ 9.62 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು ಪಾದಾಚಾರಿ ತೆರವು ಮುಂದುವರಿಸಲು ಸೂಚಿಸಿದ್ದಾರೆ. ಪಾದಚಾರಿಗಳಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ.

Bengaluru Footpath Encroachment Drive 286 67 Km Cleared in 60 Days 9 62 Km Cleared Today GBA

ಇಂದಿನ ಒತ್ತುವರಿ ತೆರವು ಆಗಿದ್ದೆಲ್ಲಿ?

ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬ್ಯಾಟರಾಯನಪುರ ವಿಭಾಗದಲ್ಲಿ ಶ್ರೀರಾಮಪುರ-ಥಣಿಸಂದ್ರ ರಸ್ತೆ - ಜೆಎನ್‌ಸಿ ಸರ್ಕಲ್‌ನಿಂದ ಥಣಿಸಂದ್ರ ರಸ್ತೆಯವರೆಗೆ 1.00 ಕಿ.ಮೀ, ದಾಸರಹಳ್ಳಿ ಮುಖ್ಯ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ (NH 7) ದಾಸರಹಳ್ಳಿವರೆಗೆ (ಉಳಿದ ಉದ್ದ) 0.92 ಕಿ.ಮೀ. ಒತ್ತುವರಿ ತೆರವು ಮಾಡಲಾಗಿದೆ.

ವಿದ್ಯಾರಣ್ಯಪುರ ವಿಭಾಗದಲ್ಲಿ ಔಟರ್ ರಿಂಗ್ ರಸ್ತೆ ಬಿಇಎಲ್ ಸರ್ಕಲ್‌ನಿಂದ ಹೆಬ್ಬಾಳ ಫ್ಲೈಓವರ್‌ವರೆಗೆ 4.50 ಕಿಲೋ ಮೀಟರ್ ಒತ್ತುವರಿ ತೆರವು ಮಾಡಲಾಗಿದೆ. ಇನ್ನೂ ಸರ್ವಜ್ಞನಗರ ವಿಭಾಗದಲ್ಲಿ ಹೊರ ವರ್ತುಲ ರಸ್ತೆ (ORR)ಯಿಂದ ಹೆಣ್ಣೂರು ಮುಖ್ಯ ರಸ್ತೆಯ 80 ಅಡಿ ರಸ್ತೆಯಿಂದ ಚಂದ್ರಿಕಾ ಸೋಪ್ ಫ್ಯಾಕ್ಟರಿವರೆಗೆ ಬಾಕಿ ಉಳಿದಿದ್ದ 1ಕಿ.ಮೀ. ಒತ್ತುವರಿ ಮುಕ್ತಗೊಳಿಸಲಾಗಿದೆ.

ಒತ್ತುವರಿ ಕಾರ್ಯಚರಣೆ ಪ್ರಮುಖಾಂಶಗಳು

* 9.62 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ
* 7 ಅಂಗಡಿಗಳು/ಪೆಟ್ಟಿ ಅಂಗಡಿಗಳು ತೆರವು
* 20 ತಳ್ಳುವ ಗಾಡಿಗಳು ತೆರವು
* 35 ಎಸಿ ಶೀಟ್‌ಗಳು/ಕ್ಯಾನೋಪಿಗಳು ತೆರವು
* 22 ಮೆಟ್ಟಿಲುಗಳು/ರ್ಯಾಂಪ್‌ಗಳು ತೆರವು
* 27 ಜಾಹೀರಾತು ಕಂಬಗಳು/ನಾಮಫಲಕಗಳು ತೆರವು
* 13 ಟನ್ ಕಟ್ಟಡ ತ್ಯಾಜ್ಯ/ಮಣ್ಣು ತೆರವು

ಒಟ್ಟು ಕಾರ್ಯಾಚರಣೆಯ ಪ್ರಗತಿ

2026ರ ಜುಲೈ 1ರಿಂದ ಆಗಸ್ಟ್ 31ರವರೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಒಟ್ಟು 286.67 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.

ಕಾರ್ಯಾಚರಣೆಯ ಪ್ರಮುಖಾಂಶಗಳು:

* 286.67 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ
* 674 ಅಂಗಡಿಗಳು/ಪೆಟ್ಟಿ ಅಂಗಡಿಗಳು ತೆರವು
* 888 ತಳ್ಳುವ ಗಾಡಿಗಳು ತೆರವು
* 1,977 ಎಸಿ ಶೀಟ್‌ಗಳು/ಕ್ಯಾನೋಪಿಗಳು ತೆರವು
* 1,724 ಮೆಟ್ಟಿಲುಗಳು ಹಾಗೂ ರ್ಯಾಂಪ್‌ಗಳು ತೆರವು
* 1,808 ಜಾಹೀರಾತು ಕಂಬಗಳು ಹಾಗೂ ನಾಮಫಲಕಗಳು ತೆರವು
* 70 ತಾತ್ಕಾಲಿಕ/ಶಾಶ್ವತ ಶೆಡ್‌ಗಳು ತೆರವು
* 2,163.20 ಟನ್ ಕಟ್ಟಡ ತ್ಯಾಜ್ಯ ಹಾಗೂ ಮಣ್ಣು ತೆರವು
* 46.60 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ

ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವುದು, ಅತಿಕ್ರಮಣಗಳನ್ನು ಪರಿಣಾಮಕಾರಿಯಾಗಿ ತೆರವುಗೊಳಿಸುವುದು ಹಾಗೂ ನಗರದಲ್ಲಿ ಸುರಕ್ಷಿತ ಮತ್ತು ಸುಗಮ ಪಾದಚಾರಿ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆಯು ಇಂತಹ ವಿಶೇಷ ಕಾರ್ಯಾಚರಣೆಗಳನ್ನು ಮುಂದುವರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+