ಗ್ರಾಹಕರೇ ಎಚ್ಚರ: ಸ್ವಿಗ್ಗಿ, ಅಮೆಜಾನ್, ಇನ್‌ಸ್ಟಾಮಾರ್ಟ್ ಘಟಕಗಳ ಮೇಲೆ ದಾಳಿ: ಎಕ್ಸ್‌ಪೈರಿ ಆಹಾರ ಪದಾರ್ಥಗಳು ಜಪ್ತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆರೋಗ್ಯ ಸರಕ್ಷತೆಗೆ ಸಂಬಂಧಿಸಿದ ಆರೋಗ್ಯಾಧಿಕಾರಿಗಳ ದಾಳಿ ಮುಂದುವರಿದಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಇಂದು ಮಂಗಳವಾರ ನಗರದಲ್ಲಿರುವ ಅಮೆಜಾನ್/ಸ್ವಿಗ್ಗಿ, ಇನ್‌ಸ್ಟಾಮಾರ್ಟ್ ಸಂಸ್ಥೆಯ ಆಹಾರ ಸಂಗ್ರಹಣಾ, ಪೂರೈಕೆ ಘಟಕಗಳಲ್ಲಿ ವಿಶೇಷ ಜಾರಿ ಕಾರ್ಯಾಚರಣೆ ನಡೆಸಿ ತಪಾಸಣೆ ಕೈಗೊಂಡರು. ಈ ವೇಳೆ ಅನೈರ್ಮಲ್ಯ, ನಿಯಮ ಉಲ್ಲಂಘನೆ ಜೊತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಆಹಾರ ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ peptide party ಗೆ ಸಂಬಂಧಿಸಿದಂತೆ ನೀಡಿದ ದಾಖಲೆಗಳನ್ನು ಆಧರಿಸಿ ತಪಾಸಣೆಯನ್ನು ಕೈಗೊಳ್ಳಲಾಗಿದೆ. ತಪಾಸಣೆಯ ಸಂದರ್ಭದಲ್ಲಿ ಆನ್‌ಲೈನ್ ಹಾಗೂ ಇ-ಕಾಮರ್ಸ್ ವೇದಿಕೆಗಳ ಮೂಲಕ ಮಾರಾಟವಾಗುವ ಆಹಾರ ಉತ್ಪನ್ನಗಳ ಕಡ್ಡಾಯ ಲೇಬಲಿಂಗ್, ತಯಾರಿಕಾ ದಿನಾಂಕ, ಅವಧಿ ಮುಕ್ತಾಯ ದಿನಾಂಕ, ಶೆಲ್ಫ್ ಲೈಫ್ ಹಾಗೂ ಇತರೆ ಆಹಾರ ಸುರಕ್ಷತಾ ಮಾನದಂಡಗಳ ಪಾಲನೆ ಪರಿಶೀಲಿಸಲಾಯಿತು. ಇನ್ನೂ ಪರವಾನಗಿ ಇಲ್ಲದೆ ಔಷಧಿಗಳನ್ನು ಸಂಗ್ರಹಿಸಿದ್ದರ ಮಾಹಿತಿ ಆಧರಿಸಿ ಶೋಧ ನಡೆಸಲಾಯಿತು.

Bengaluru Food Safety Raid

ತಪಾಸಣೆಯ ವೇಳೆ ಕಡ್ಡಾಯ ಲೇಬಲಿಂಗ್ ಮಾನದಂಡಗಳನ್ನು ಪಾಲಿಸದ ಹಾಗೂ ಅವಧಿ ಮೀರಿದ ಆಹಾರ ಉತ್ಪನ್ನಗಳು ಮತ್ತು ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ ಔಷಧಿಗಳನ್ನು ಕೆಳಕಂಡ ಘಟಕಗಳಿಂದ ವಶಪಡಿಸಿಕೊಳ್ಳಲಾಗಿದೆ. ಅವುಗಳ ಮಾಹಿತಿ ಇಲ್ಲಿದೆ.

ಎಲ್ಲೆಲ್ಲಿ ತಪಾಸಣೆ, ಏನೆಲ್ಲ ಜಪ್ತಿ?

* Amazon BLR6 ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್, ಪ್ಲಾಟ್ ನಂ. 12/P2 (IT ಸೆಕ್ಟರ್), ದೇವನಹಳ್ಳಿ:

ಇಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನಿಗದಿಪಡಿಸಿರುವ ಲೇಬಲಿಂಗ್ ಮಾನದಂಡಗಳಿಗೆ ಅನುಗುಣವಾಗಿರದ ತಪ್ಪು/ಅಸಮರ್ಪಕ ಲೇಬಲಿಂಗ್ ಹೊಂದಿರುವ 14 ಲಕ್ಷ ರೂಪಾಯಿ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವಧಿ ಮೀರಿದ ₹06ಲಕ್ಷ ಮೌಲ್ಯದ ಆಹಾರ ಉತ್ಪನ್ನ ಜಪ್ತಿ ಮಾಡಲಾಗಿದೆ.

ಇದೊಂದು ಘಟಕದಿಂದ ಒಟ್ಟು ಮೌಲ್ಯ ₹20 ಲಕ್ಷ ಮೌಲ್ಯದ ಆಹಾರಗಳನ್ನು ಜಪ್ತಿ ಮಾಡಲಾಗಿದೆ. ಪರವಾನಗಿ ಇಲ್ಲದೆ ಸಂಗ್ರಹಿಸಲಾಗಿದ್ದ ₹2,45,352 ಮೌಲ್ಯದ ಔಷಧಿಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

* Amazon BLR7RKV ಡೆವಲಪರ್‌ಗಳು, ಸೈ. ನಂ. 524/2, 525/3, 526/3, ಮಡಿವಾಳ ಮತ್ತು ತಟ್ಟನಹಳ್ಳಿ ಗ್ರಾಮ, ಆನೇಕಲ್:

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನಿಗದಿಪಡಿಸಿರುವ ಲೇಬಲಿಂಗ್ ಮಾನದಂಡಗಳಿಗೆ ಅನುಗುಣವಾಗಿರದ ತಪ್ಪು/ಅಸಮರ್ಪಕ ಲೇಬಲಿಂಗ್ ಇರುವುದು ಇಲ್ಲಿನ ದಾಳಿ ವೇಳೆ ಕಂಡು ಬಂದಿದೆ. 19 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳು, ಅವಧಿ ಮೀರಿದ ₹13 ಲಕ್ಷ ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಘಟಕದಿಂದ ವಶಪಡಿಸಿಕೊಳ್ಳಲಾದ ಆಹಾರ ಉತ್ಪನ್ನಗಳ ಒಟ್ಟು ಮೌಲ್ಯ 32 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ಹೇಳಿದ್ದಾರೆ.

* ಸಪ್ತಾ ಬಜಾರ್, ಹೆಚ್‌ಬಿ ಆರ್ ಬಡಾವಣೆ: ಇಲ್ಲಿನ ಆಹಾರ ಉದ್ದಿಮೆ ಘಟಕದಲ್ಲಿ ದಿನಸಿ ಪದಾರ್ಥಗಳು, ಹಾಲು, ತರಕಾರಿಗಳು, ಮೊಸರು ಹಾಗೂ ಇತರೆ ಆಹಾರ ಪದಾರ್ಥಗಳನ್ನು ವಿವಿಧ ಇ-ಕಾಮರ್ಸ್‌/ಆನ್‌ಲೈನ್ ವಿತರಣಾ ಸಂಸ್ಥೆಗಳಿಂದ ಖರೀದಿಸಿ, ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಮರುಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಇಲ್ಲಿ ತಪಾಸಣೆ ನಡೆಸಿದಾಗ ಗೋಡಂಬಿ ಬಿಸ್ಕತ್ತುಗಳು, ವಿಜಯ ರಾಗಿ ಹಿಟ್ಟು, ಚಿಕನ್ ಪ್ಯಾಟಿ, ಪನ್ನೀರ್, ಕುಕೀಸ್, ಬೀಜಗಳು, ಮೊಟ್ಟೆಗಳು ಹಾಗೂ ಹಿಟ್ಟು ಸೇರಿದಂತೆ ವಿವಿಧ ಅವಧಿ ಮೀರಿದ ಕೇಲವ 10,000 ರೂ. ಮೌಲ್ಯದ ಆಹಾರ ಉತ್ಪನ್ನ ಜಪ್ತಿ ಮಾಡಲಾಯಿತು.

Leo 7 ಎಂಟರ್ ಪ್ರೈಸೆಸ್‌ ಘಟಕ ಬಂದ್

* ಲಿಂಗರಾಜಪುರಂನ Leo 7 ಎಂಟರ್ ಪ್ರೈಸೆಸ್‌ ಘಟಕ: ಇಲ್ಲಿನ ದಾಳಿ ವೇಳೆ ಪೌಷ್ಠಿಕಾಂಶದ ಉತ್ಪನ್ನಗಳು, ಪಾನೀಯಗಳು, ಚಾಕೊಲೇಟ್‌ಗಳು, ಸಿಹಿತಿಂಡಿಗಳು, ತುಪ್ಪ ಮತ್ತು ಸೀಡ್ಸ್‌ಗಳು ಮತ್ತು ಎಕ್ಸ್‌ಪೈರಿ ಆದ ಅವಧಿ ಮುಕ್ತಾಯದ ಹಂತದಲ್ಲಿರುವ (ನಿಯರ್ ಎಕ್ಸ್‌ಪೈರಿ) ಆಹಾರ ಪದಾರ್ಥಗಳು ಪತ್ತೆಯಾಗಿವೆ. ಇಲ್ಲಿ ಬರೋಬ್ಬರಿ 56 ಲಕ್ಷ ರೂ.ನ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿ ಘಟಕ ಬಂದ್ ಮಾಡಲಾಗಿದೆ.

* ಇನ್‌ಸ್ಟಾಮಾರ್ಟ್, ಹೊಸಕೋಟೆ:

ಹೊಸಕೋಟೆಯಲ್ಲಿರುವ ಇನ್‌ಸ್ಮಾಮಾರ್ಟ್ ಘಟಕದಲ್ಲಿ ಅವಧಿ ಮೀರಿದ 42 ಲಕ್ಷ ರೂ. ಮೌಲ್ಯದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೈರ್ಮಲ್ಯಕರ ಪರಿಸ್ಥಿತಿ ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ ಮತ್ತು ಅನ್ವಯವಾಗುವ ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಸಂಬಂಧಿತ ಘಟಕ ಮುಚ್ಚಲಾಗಿದೆ. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ 2006 ಹಾಗೂ ಅನ್ವಯವಾಗುವ FSSAI ನಿಯಮಗಳ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+