Circular Skywalk: ಬನಶಂಕರಿಯಲ್ಲಿ ನಗರದ ಮೊದಲ ವೃತ್ತಾಕಾರದ ಸ್ಕೈವಾಕ್ ನಿರ್ಮಾಣ, ಏನಿದರ ವಿಶೇಷತೆ?
ಬೆಂಗಳೂರು ದಕ್ಷಿಣ ಭಾಗದ ಜನರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಪಾದಚಾರಿಗಳ ಅನುಕೂಲಕ್ಕಾಗಿ ಬನಶಂಕರಿ ಜಂಕ್ಷನ್‌ನಲ್ಲಿ ಹಲವು ವರ್ಷಗಳಿಂದ ವಿಳಂಬವಾಗಿದ್ದ ಸರ್ಕುಲರ್ ಸ್ಕೈವಾಕ್ ಕಾಮಗಾರಿ ಕೊನೆಗೂ ಶುರುವಾಗಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಈ ಪಾದಚಾರಿ ಸ್ಕೈವಾಕ್ ನಿರ್ಮಾಣ ಪ್ರಕ್ರಿಯೆಯನ್ನು ನಮ್ಮ ಮೆಟ್ರೋ ಕೊನೆಗೂ ಕೈಗೆತ್ತಿಕೊಂಡಿದೆ. ಈ ಮೇಲ್ಸೇತುವೆಯನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ಇದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಇತ್ತೀಚೆಗೆ ಈ ಸ್ಕೈವಾಕ್ ಅನ್ನು ವಿನ್ಯಾಸಗೊಳಿಸಲು ಮತ್ತು ನಿರ್ಮಿಸಲು ವಿವಿಧ ಕಂಪನಿಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಿದೆ. ಬನಶಂಕರಿ ಮೆಟ್ರೋ ನಿಲ್ದಾಣ ಹಾಗೂ ಬನಶಂಕರಿ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರವನ್ನು (ಟಿಟಿಎಂಸಿ) ಈ ಸ್ಕೈವಾಕ್ ಸಂಪರ್ಕಿಸುತ್ತದೆ. ಈ ವರ್ಷದ ಅಂತ್ಯದ ವೇಳೆಗೆ ಇದರ ನಿರ್ಮಾಣ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಕನಿಷ್ಠ 15 ತಿಂಗಳುಗಳು ಬೇಕಾಗುತ್ತದೆ ಎಂದು ವರದಿಯಾಗಿದೆ.

ಈ ಯೋಜನೆಯು ಇಲ್ಲಿನ ಸ್ಕೈವಾಕ್ ಅನ್ನು ಮರುವಿನ್ಯಾಸಗೊಳಿಸುವುದು, ಯುಟಿಲಿಟಿ ಲೈನ್‌ಗಳನ್ನು ಸ್ಥಳಾಂತರಿಸುವುದು ಮತ್ತು ಸ್ಕೈವಾಕ್‌ಗೆ ದಾರಿ ಮಾಡಿಕೊಡಲು ಮರಗಳನ್ನು ತೆಗೆದುಹಾಕುವುದನ್ನು ಸಹ ಒಳಗೊಂಡಿದೆ. ಇದು ಬೆಂಗಳೂರಿನ ಮೊದಲನೆ ವೃತ್ತಾಕಾರದ ಸ್ಕೈವಾಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ರಸ್ತೆ ಮತ್ತು ಸ್ಕೈವಾಕ್ ಮಟ್ಟಗಳಲ್ಲಿ, ವಿಶ್ರಾಂತಿ ಜಾಗಗಳು ಹಾಗು ವಾಣಿಜ್ಯ ಮಳಿಗೆಗಳನ್ನು ಸಹ ಹೊಂದಿರಲಿದೆ.
2017ರಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಬನಶಂಕರಿ ಮೆಟ್ರೋ ನಿಲ್ದಾಣವು ಟಿಟಿಎಂಸಿಯಿಂದ ಸುಮಾರು 200 ಮೀಟರ್ ದೂರದಲ್ಲೇ ಇದೆ. ಆದರೆ ಬಸ್ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣದ ನಡುವೆ ಸುಗಮವಾಗಿ ಸಂಚರಿಸುವ ವ್ಯವಸ್ಥೆ ಇಲ್ಲ. ಈ ಸಾರಿಗೆ ಕೇಂದ್ರಗಳ ನಡುವೆ ಜನ ತಲುಪಲು ಪರದಾಡಬೇಕಿತ್ತು. ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ತಲುಪಲು ಕೂಡ ಪ್ರಯಾಣಿಕರು ಜನನಿಬಿಡ ರಸ್ತೆಯನ್ನು ದಾಟಲು ಒದ್ದಾಡುತ್ತಿದ್ದರು. ಅಲ್ಲಿ ವಾಹನಗಳ ಸಂಚಾರ ಹೆಚ್ಚು ಹಾಗೂ ಟ್ರಾಫಿಕ್ ಕೂಡ ಅಧಿಕವಾಗಿದ್ದ ಕಾರಣ ಇದಕ್ಕೆ ಪರಿಹಾರವಾಗಿ ಸ್ಕೈವಾಕ್ ಯೋಜನೆ ಶುರು ಮಾಡಲಾಗಿತ್ತು.

ಹಣಕಾಸು ಮತ್ತು ನಿರ್ಮಾಣದ ವಿಚಾರವಾಗಿ ಬಿಎಂಆರ್‌ಸಿಎಲ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡುವಿನ ವಿವಾದದಿಂದಾಗಿ ಈ ಯೋಜನೆಯು ವಿಳಂಬವಾಗಿತ್ತು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಈ ಯೋಜನೆಗೆ ಒತ್ತಾಯಿಸಿದ ನಂತರ ಕಳೆದ ವರ್ಷ ಬಿಬಿಎಂಪಿ ಬಜೆಟ್‌ನಲ್ಲಿ ಈ ಸ್ಕೈವಾಕ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು.
ಸ್ಕೈವಾಕ್‌ನ ವಿಶೇಷತೆಗಳು
ಇದನ್ನು ಇಳಿಜಾರುಗಳನ್ನು ಹೊಂದಿರುವ ವೃತ್ತಾಕಾರದ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸ್ಕೈವಾಕ್ ಉದ್ದ 280 ಮೀಟರ್ ಹಾಗೂ ಅಗಲ 6 ಮೀಟರ್. ಇದಕ್ಕೆ ಬಿಬಿಎಂಪಿಯಿಂದ ಸಂಪೂರ್ಣವಾಗಿ ಹಣಕಾಸು ಒದಗಿಸಲಾಗುತ್ತಿದ್ದು, ಇದರ ವೆಚ್ಚ ಸುಮಾರು 40ರಿಂದ 45 ಕೋಟಿ ಎನ್ನಲಾಗಿದೆ. ಈ ಸ್ಕೈವಾಕ್‌ನಲ್ಲಿ ಕೆಳಗಿನ ಮತ್ತು ಮೇಲಿನ ಹಂತಗಳಲ್ಲಿ ಲಿಫ್ಟ್‌ಗಳು, ವಿಶ್ರಾಂತಿ ಸ್ಥಳಗಳು ಸೇರಿ ಹಲವು ವ್ಯವಸ್ಥೆಗಳಿರಲಿವೆ. 2027ರ ವೇಳೆಗೆ ಇದು ಬಳಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಈ ಸ್ಕೈವಾಕ್‌ಗೆ ಬಿಬಿಎಂಪಿ ಹಣವನ್ನು ಒದಗಿಸುತ್ತಿದ್ದು, ಬಿಎಂಆರ್‌ಸಿಎಲ್ ಇದನ್ನು ನಿರ್ಮಿಸಲಿದೆ. ಇದು ಕಣ್ಣಿಗೆ ನೋವುಂಟು ಮಾಡದಂತೆ ಸೌಂದರ್ಯದಿಂದ ಕೂಡಿರುವಂತೆ, ಅಂಗವಿಕಲರು, ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಸುಗಮ ಪ್ರವೇಶಕ್ಕೆ ಅನುಕೂಲವಾಗುವಂತೆ ಮತ್ತು ಬಿಎಂಆರ್‌ಸಿಎಲ್ ಕೆಫೆಟೇರಿಯಾಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಆದಾಯ ಗಳಿಸಲು ಸ್ಥಳಾವಕಾಶ ಒದಗಿಸುವಂತೆ ವಿನ್ಯಾಸಗೊಳಿಸಲಾಗುತ್ತಿದೆ.
ಆರಂಭದಲ್ಲಿ ಬಿಬಿಎಂಪಿಯೇ ಈ ಸ್ಕೈವಾಕ್ ನಿರ್ಮಿಸಬೇಕಾಗಿತ್ತು. ಆದರೆ ಈಗ ಬಿಎಂಆರ್‌ಸಿಎಲ್ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದೆ. ಈ ಸ್ಕೈವಾಕ್ ವಿಶೇಷ ವಿನ್ಯಾಸದಲ್ಲಿ ಇರುವುದರಿಂದ ಬನಶಂಕರಿ ಜಂಕ್ಷನ್‌ನ ಅಂದ ಹೆಚ್ಚಿಸಲಿದೆ. ಅಂತಿಮ ವಿನ್ಯಾಸ ಸಿದ್ಧವಾದ ನಂತರ ಸ್ಪಷ್ಟ ಚಿತ್ರಣ ಹೊರಹೊಮ್ಮಲಿದೆ.

3 ಮುಖ್ಯಮಂತ್ರಿಗಳ ನಂತರ ಯೋಜನೆ ಶುರು
ಟಿಟಿಎಂಸಿ ಮತ್ತು ಮೆಟ್ರೋ ನಿಲ್ದಾಣವನ್ನು ಸಂಪರ್ಕಿಸುವ ಬನಶಂಕರಿ ಜಂಕ್ಷನ್‌ನಲ್ಲಿ ಸ್ಕೈವಾಕ್ ನಿರ್ಮಿಸಲು ಐದು ವರ್ಷಗಳಿಗೂ ಹೆಚ್ಚು ಕಾಲ ನನ್ನ ನಿರಂತರ ಪ್ರಯತ್ನದ ನಂತರ, ಮೂರು ಮುಖ್ಯಮಂತ್ರಿಗಳು, ಮೂರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹಲವಾರು ಬಿಬಿಎಂಪಿ ಆಯುಕ್ತರ ನಂತರ, ಅಧಿಕಾರಶಾಹಿಯ ನಿಧಾನಗತಿಯ ನಂತರ ಅಂತಿಮವಾಗಿ ಯೋಜನೆಗೆ ಟೆಂಡರ್ ಕರೆಯಲು ಮುಂದಾಗಿವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಬಿಎಂಆರ್‌ಸಿಎಲ್ ತನ್ನ 15 ತಿಂಗಳ ಗಡುವಿಗೆ ಬದ್ಧವಾಗಿರುತ್ತದೆ ಮತ್ತು ಅದರ ಸಾಮಾನ್ಯ ಮೆಟ್ರೋ ಪೂರ್ಣಗೊಳಿಸುವಿಕೆಯ ವಿಳಂಬಕ್ಕಿಂತ ಭಿನ್ನವಾಗಿ ಅದನ್ನು ಸಮಯಕ್ಕೆ ತಲುಪಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬನಶಂಕರಿ ಪ್ರದೇಶದಲ್ಲಿರುವ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಈ ಸ್ಕೈವಾಕ್ ನಿರ್ಮಾಣಕ್ಕೆ ಸಾರ್ವಜನಿಕರು ಬಹುದಿನಗಳಿಂದ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಈ ಸಂಬಂಧ ಕಳೆದ ವರ್ಷ ಪತ್ರ ಬರೆದಿದ್ದರು.
ಸ್ಕೈವಾಕ್ ನಿರ್ಮಾಣದಿಂದ ಪಾದಚಾರಿಗಳಿಗೆ, ಮೆಟ್ರೋ ಮತ್ತು ಬಸ್ ನಿಲ್ದಾಣಗಳ ಮುಖೇನ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಆದಷ್ಟು ಬೇಗ ಈ ಸ್ಕೈವಾಕ್ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸಬೇಕು ಹಾಗೂ ಕಾಮಗಾರಿ ಆರಂಭಿಸಬೇಕು ಎಂದು ತೇಜಸ್ವಿ ಸೂರ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.
ಸಂಸದನಾಗಿ ಆಯ್ಕೆಯಾದ ನಂತರ 2019ರಲ್ಲಿ ಬನಶಂಕರಿ ಮೆಟ್ರೋ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಾಣದ ಸಾಧ್ಯತೆಗಳ ಕುರಿತು ನಾನು ಖುದ್ದು ಪರಿಶೀಲನೆ ನಡೆಸಿ ಸ್ಮಾರ್ಟ್ ಸಿಟಿ ಮಿಷನ್, ಬಿಬಿಎಂಪಿ, ಬಿಎಂಆರ್‌ಸಿಎಲ್ ಅಧಿಕಾರಿಗಳೊಂದಿಗೆ ಸ್ಕೈವಾಕ್ ನಿರ್ಮಾಣದ ಅಗತ್ಯತೆ ಕುರಿತು ಸಭೆ ಕೂಡ ನಡೆಸಿದ್ದರು. ಪ್ರತಿನಿತ್ಯ ಈ ಮಾರ್ಗದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿದ್ದು, ಪಾದಚಾರಿ ರಸ್ತೆ, ಸಂಚಾರ ಮಾರ್ಗಗಳಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಗಮನ ಸೆಳೆದಿದ್ದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications