Bengaluru: ದಕ್ಷಿಣ ಭಾರತದ ಅತಿ ಎತ್ತರದ ರೈಲು-ರಸ್ತೆ ಮೇಲ್ಸೇತುವೆ ಬಹುತೇಕ ಸಿದ್ಧ
ಬೆಂಗಳೂರು, ಆಗಸ್ಟ್ 11: ಜಯದೇವ ಇಂಟರ್‌ಸೆಕ್ಷನ್‌ನಲ್ಲಿರುವ ಮಾರೇಹನಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ದಕ್ಷಿಣ ಭಾರತದ ಅತಿ ಎತ್ತರದ ರೈಲ್ ಕಮ್-ರೋಡ್ ಮೇಲ್ಸೇತುವೆ ಬಹುತೇಕ ಪೂರ್ಣಗೊಂಡಿದೆ. ಟ್ರಾಫಿಕ್ ಕಡಿಮೆ ಮಾಡುವ ದೃಷ್ಟಿಯಿಂದ ಇದು ಪ್ರಮುಖ ಪಾತ್ರ ನಿರ್ವಹಿಸಲಿದೆ. ಸದ್ಯ, ರಸ್ತೆಯ ಅಂತಿಮ ಕಾಮಗಾರಿ ನಡೆಯುತ್ತಿದೆ.
ಬೆಂಗಳೂರಿನ ಅತಿದೊಡ್ಡ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಅನ್ನು ಕಡಿಮೆ ಮಾಡಲಿದ್ದು, ಆದರೂ ಇದು ಕಾರ್ಯ ನಿರ್ವಹಿಸಲು ಇನ್ನೂ ಹಲವು ತಿಂಗಳು ಕಾಯಬೇಕಿದೆ. ಮೇಲ್ಸೇತುವೆಗೆ ಹೋಗುವ ರ‍್ಯಾಂಪ್‌ಗಳು ಸಿದ್ಧವಾಗದ ಹೊರತು, ಇದನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಮೆಟ್ರೋ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಂದ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ಆರ್ ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಲೈನ್ (ರೀಚ್ -5) ಗೆ ಸಂಬಂಧಿಸಿದಂತೆ ಈ ಮೇಲ್ಸೇತುವೆಯನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾರಂಭಿಸುವ ಸಾಧ್ಯತೆ ಇದೆ.
ದಕ್ಷಿಣ ಭಾರತದ ಎತ್ತರದ ಮೇಲ್ಸೇತುವೆ
ಫ್ಲೈಓವರ್ ನೆಲಮಟ್ಟದಿಂದ ಎರಡು ಪದರಗಳನ್ನು ಹೊಂದಿದ್ದು, ಮೊದಲ ಹಂತವು ನಾಲ್ಕು ಲೇನ್‌ಗಳನ್ನು ಹೊಂದಿದ್ದರೆ, ಎರಡನೇ ಹಂತವು ಮೆಟ್ರೋ ಟ್ರ್ಯಾಕ್‌ಗಳನ್ನು ಹೊಂದಿರುತ್ತದೆ.
ಈ ಫ್ಲೈಓವರ್ 3.2 ಕಿಮೀ ಉದ್ದ ಇದೆ, ಫ್ಲೈಓವರ್ 31 ಮೀಟರ್ ಎತ್ತರ ಇದೆ. ಇದು ದಕ್ಷಿಣ ಭಾರತದಲ್ಲೇ ಅತಿ ಎತ್ತರದ ಫ್ಲೈಓವರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಸದ್ಯಕ್ಕೆ ಮೇಲ್ಸೇತುವೆ ಸಿದ್ಧವಾಗಿದ್ದರೂ, ರ‍್ಯಾಂಪ್‌ಗಳ ನಿರ್ಮಾಣ ವಿಳಂಬವಾಗಿರುವುದರಿಂದ ಮಾರ್ಗದ ಆರಂಭಕ್ಕೂ ಮುನ್ನವೇ ಅದನ್ನು ತೆರೆಯಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದ ಬಳಿಕ ಹೆಎಸ್‌ಆರ್ ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸುಗಮ ಪ್ರವೇಶವನ್ನು ಒದಗಿಸುತ್ತದೆ.
ಅಫ್ಕಾನ್ಸ್ (AFCONS) ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ಹೊರ ವರ್ತುಲ ರಸ್ತೆಯಲ್ಲಿನ ಯೋಜನೆಯೊಂದಿಗೆ ವಿಳಂಬವಾದ ಗುತ್ತಿಗೆಯನ್ನು ನೀಡಲಾಯಿತು. ''ಕೆಲಸ ಪೂರ್ಣಗೊಳಿಸಬೇಕಿದ್ದ ಹಿಂದಿನ ಗುತ್ತಿಗೆದಾರರು ಕೈಬಿಟ್ಟಿದ್ದಾರೆ. ಇದನ್ನು ಮರು ಟೆಂಡರ್ ಮಾಡಲಾಗಿದೆ ಮತ್ತು ಅಫ್ಕಾನ್ಸ್ ಕಾಮಗಾರಿ ನಡೆಸುತ್ತಿದೆ. ತಡವಾಗಿ ಕೆಲಸ ಆರಂಭಿಸಿದ ಕಾರಣ ಕೆಲಸವನ್ನು ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ.
"ಈ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದ ಬಳಿಕ ಸಂಚಾರ ದಟ್ಟಣೆ ಸಮಸ್ಯೆ ಸುಧಾರಿಸಲು ಸಹಾಯವಾಗಲಿದೆ. ಬಿಟಿಎಂ ಲೇಔಟ್‌ನಿಂದ ಹೊರ ವರ್ತುಲ ರಸ್ತೆಯ ಕಡೆಗೆ ಹೋಗುವ ರ‍್ಯಾಂಪ್ ಅನ್ನು ಐಟಿ ವೃತ್ತಿಪರರು ಹೆಚ್ಚಾಗಿ ಬಳಸುತ್ತಾರೆ ಮತ್ತು ಅದು ಪೂರ್ಣಗೊಂಡಾಗ ಅವರು ಸುಗಮ ಪ್ರಯಾಣ ಮಾಡಬಹುದು. ಎಲೆಕ್ಟ್ರಾನಿಕ್ ಸಿಟಿ ಮತ್ತು ಹೊಸೂರು ಕಡೆಯ ವಾಹನಗಳಿದೂ ಇದು ಸಹಾಯವಾಗಲಿದೆ. 4 ಸಿಗ್ನಲ್‌ಗಳನ್ನು ಎರಡಕ್ಕೆ ಕಡಿಮೆ ಮಾಡಲಿದೆ" ಎಂದು ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರಸ್‌ಗೆ ತಿಳಿಸಿರುವುದಾಗಿ ವರದಿ ಮಾಡಿದೆ.












Click it and Unblock the Notifications