Bengaluru Rain: ಇಂದು ವ್ಯಾಪಕ ಮಳೆ, ಸೆ. 30ರ ವರೆಗಿನ ಹವಾಮಾನ ವರದಿ

ಬೆಂಗಳೂರು, ಸೆಪ್ಟಂಬರ್ 27: ಬೆಂಗಳೂರು ನಗರದಲ್ಲಿ ವರುಣನ ಅಬ್ಬರ ಮತ್ತೆ ಶುರುವಾಗಿದೆ. ಮಂಗಳವಾರ ನಗರದ ವಿವಿಧೆಡೆ ಸಾಧಾರಣವಾಗಿ ಮಳೆ ಆಗಿದ್ದು, ಇಂದು ನಗರದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಮುನ್ಸೂಚನೆ ಪ್ರಕಾರ ಇಂದಿನಿಂದ ಸೆಪ್ಟಂಬರ್ 30 ರವರೆಗೆ ಮಳೆ ಆಗಲಿದೆ.

ಸೆಪ್ಟಂಬರ್ ಅಂತ್ಯಕ್ಕೆ ಮುಂಗಾರು ಮಳೆ ಋತು ಕೊನೆಗೊಂಡು ಹಿಂಗಾರು ಮಳೆ ಸುರಿಸುವ ಮೂಡಗಳು ಸಕ್ರಿಯವಾಗಲಿವೆ. ಈ ಸಂಬಂಧ ರಾಜ್ಯದ ವಿವಿಧೆಡೆ ಮಳೆ ಸಕ್ರಿಯವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ರಾಜ್ಯಗಳಲ್ಲಿ ಸಹ ಮಳೆ ಬೀಳುತ್ತಿದೆ.

Bengaluru Face Thunderstorm Rain Today, Till Continue September 30th, See Full Forecast

ಇಂದು ಬುಧವಾರ ನಗರದ ವಿವಿಧ ಬಡಾವಣೆಗಳಲ್ಲಿ ಸಾಧಾರಣದಿಂದ ವ್ಯಾಪಕವಾಗಿ ಮಳೆ ಸುರಿಯಲಿದೆ. ಗುಡುಗು ಮಿಂಚು ಸಹಿತ ಆಗಾಗ ಜಿಟಿ ಜಿಟಿ ಮಳೆ ಬರಲಿದ್ದು, ಬಿಸಿಲಿನ ದರ್ಶನವಾದರೂ ಸಹಿತ ಮಬ್ಬು ವಾತಾವರಣವೇ ಕಂಡು ಬರಲಿದೆ. ಇದೇ ಮಳೆ ಮುಂದಿನ ಒಂದು ವಾರ ಕಂಡು ಬರುವ ಸಾಧ್ಯತೆಗಳು ಇದೆ.

ನಾಳೆ ಗುರುವಾರದಿಂದ ಭಾನುವಾರದ ವರೆಗೆ ಆಗಾಗ ಜಿಟಿ ಜಿಟಿ ಮಳೆ ಬರಲಿದೆ. ಅಲ್ಲಲ್ಲಿ ಚದುರಿದಂತೆ ಮಳೆ ಬಂದರೆ ಹಲವು ಪ್ರದೇಶಗಳಲ್ಲಿ ತುಂತುರಿವಿನಿಂದ ಸಾಧಾರಣ ಮಳೆ ಆಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ಮಂಗಳವಾರ ಬಿದ್ದ ಮಳೆ ಮಾಹಿತಿ

ನೆನ್ನೆ ಮಂಗಳವಾರ ನಗರದ ವಿವಿಧೆಡೆ ಸಂಜೆ ಬಿರುಸು ಮಳೆ ಆಗಿದೆ. ನಗರದ ಪಶ್ಚಿಮ ವಲಯದ ಬಸವೇಶ್ವರ ನಗರದಲ್ಲಿ ಗರಿಷ್ಠ 30ಮಿಲಿ ಮೀಟರ್ ಮಳೆ ದಾಖಲಾಗಿದೆ. ಗೊಟ್ಟಿಗೇರೆಯಲ್ಲಿ ಅಧಿಕ 8.5 ಮಿಲಿ ಮೀಟರ್, ಲಕ್ಷ್ಮೀ ದೇವಿ ನಗರ, ಲಗ್ಗೇರಿ, ನಂದಿನಿ ಬಡಾವಣೆ ಹಾಗೂ ಶಂಕರಮಠದಲ್ಲಿ ತಲಾ 7 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ವಿಜಯನಗರ, ಹಂಪಿನಗರ, ನಾಯಂಡಹಳ್ಳಿ, ಚಾಮರಾಜಪೇಟೆ, ಮೆಜೆಸ್ಟಿಕ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ತುಂತುರು ಮಳೆ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Bengaluru Face Thunderstorm Rain Today, Till Continue September 30th, See Full Forecast

ಕರ್ನಾಟಕ ಹವಾಮಾನ ಮುನ್ಸೂಚನೆ

ಕರ್ನಾಟಕದಲ್ಲಿ ಮುಂದಿನ ಒಂದು ವಾರ ಸುಮಾರು 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದೆ. ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ಒಳನಾಡಿನ ಅತ್ಯಧಿಕ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರುವ ಮುನ್ಸೂಚನೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+