Bengaluru rain: ನಗರಕ್ಕೆ ಆಗಸ್ಟ್‌ನಲ್ಲಿ ಶೇ.40ರಷ್ಟು ಮಳೆ ಕೊರತೆ, ಶುಷ್ಕ ವಾತಾವರಣ ಮುಂದುವರಿಕೆ
ಬೆಂಗಳೂರು, ಆಗಸ್ಟ್ 16: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಮುಂಗಾರು ಮಳೆ ದುರ್ಬಲವಾಗಿದೆ. ಮಳೆಗಾಲದ ವಾತಾವರಣ ಮಾಯವಾಗಿ ಬಿರು ಬೇಸಿಗೆಯಂತೆ ತಾಪಮಾನ ದಾಖಲಾಗುತ್ತಿದೆ. ಈ ವರ್ಷ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶೇಕಡಾ. 40ಕ್ಕೂ ಅಧಿಕ ಮಳೆ ಕೊರತೆ ಉಂಟಾಗಿದೆ. ಕಳೆದ ಎರಡು ವಾರದಿಂದ ಮಳೆ ಆಗಿಲ್ಲ, ಶುಷ್ಕ ವಾತಾವಣ ಕ್ರಮೇಣ ಹೆಚ್ಚಾಗುತ್ತಿದೆ.
ಈ ವರ್ಷದ ಮುಂಗಾರು ಸಾಮಾನ್ಯಕ್ಕಿಂತ ಭಿನ್ನವಾಗಿದೆ. ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನ ಹೀಗೆ ಶುಷ್ಕ ವಾತಾವರಣ ಮುಂದುವರಿಯಲಿದ್ದು, ಕೆಲವೆಡೆ ತುಂತರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ರಾತ್ರಿ ಚದುರಿದಂತೆ ಮಳೆ ದಾಖಲಾಗಿದೆ.

ಮುಂದಿನ ವಾರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದೇ ರೀತಿ ಮಳೆ ಕಡಿಮೆ ತಾಪಮಾನ ಅಧಿಕ ಪರಿಸ್ಥಿತಿ ಮುಂದುವರಿಯಲಿದೆ. ನಗರದ ಪ್ರತ್ಯೇಕ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಲಭ್ಯವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನೈಋತ್ಯ ಮುಂಗಾರು ಮಳೆ ಕರ್ನಾಟಕದ ಮೇಲೆ ದುರ್ಬಲವಾಗಿದೆ. ದಕ್ಷಿಣ ಕರ್ನಾಟಕದ ಸೇರಿದಂತೆ ಕರಾವಳಿ ಹಾಗೂ ಒಳಭಾಗಗಳಲ್ಲಿ ಮಳೆ ದಾಖಲಾಗಿದ್ದರೂ, ನಿದಗಿತ ಸ್ಥಳಗಳಲ್ಲಿ ಅಷ್ಟೇ ದಾಖಲಾಗಿದ್ದು, ಬಿಟ್ಟರೆ ರಾಜ್ಯಾದ್ಯಂತ ಹೇಳಿಕೊಳ್ಳುವಂತಹ ಮಳೆ ಆಗಿಲ್ಲ.

ನಗರಕ್ಕೆ ಕೇವಲ 10.8 ಮಿಮೀ ಮಳೆ ದಾಖಲು
ಇನ್ನೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ನೀಡಿರುವ ಮಾಹಿತಿ ನೋಡುವುದಾದರೆ, ಆಗಸ್ಟ್ ಮೊದಲ ವಾರದ ವಾಡಿಕೆ 24.3 ಮಿಲಿ ಮೀಟರ್ ಮಳೆ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯ ಅರ್ಧದಷ್ಟು ಮಳೆ ಆಗಿಲ್ಲ. ಅಂದರೆ ನಗರಕ್ಕೆ ಕೇವಲ 10.8 ಮಿಮೀ ಮಳೆ ಬಿದ್ದಿದೆ. ಈ ಮೂಲಕ ಮಳೆ ಕೊರತೆ ಉಂಟಾಗಿದೆ.
ಇದೇ ತಿಮಗಳ ಆಗಸ್ಟ್ ಮೊದಲ ವಾರ (ಆ.5 ರತನಕ) ಗರಿಷ್ಠ 26 ರಿಂದ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತಿತ್ತು. ಈ ಪ್ರಮಾಣದಲ್ಲಿ ನಿರಂತರ ಏರಿಕೆ ಆಗಿದ್ದು, ಸದ್ಯ ನಗರದಲ್ಲಿ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಳಾಗಿದೆ. ಮೋಡದ ವಾತಾವರಣದ ಜೊತೆಗೆ ಗರಿಷ್ಠ ತಾಪಮಾನದಲ್ಲಿ ಈ ಸ್ಥಿರವಾದ ಹೆಚ್ಚಳವು ಶೇ.80% ಕ್ಕಿಂತ ಹೆಚ್ಚು ಆರ್ದ್ರ ವಾತಾವರಣ ಏರಿಕೆ ಆಗಿದೆ.
ಬೆಂಗಳೂರಿನ ಜನರು ಬಿಸಿಲಿನ ಶಾಖಕ್ಕೆ ತತ್ತಿಸುತ್ತಿದ್ದಾರೆ. ಆಗಸ್ಟ್ ಕೊನೆಯ ವಾರದ ವೇಳೆಗೆ ಮಾನ್ಸೂನ್ ವೇಗವನ್ನು ಪಡೆಯುವ ನಿರೀಕ್ಷೆ ಇದೆ. ಹೀಗಾಗಿ ಆಗಸ್ಟ್ ಕೊನೆ ವಾರದ ಇಲ್ಲವೇ ಸೆಪ್ಟಂಬರ್ ಮೊದಲ ವಾರದ ಶಾಖದ ಪರಿಸ್ಥಿತಿಯು ಸುಧಾರಿಸಲಿದೆ. ಎಂದಿನಂತೆ ನಿರೀಕ್ಷೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಬುಧವಾರದ ತಾಪಮಾನ ವಿವರ
ಬುಧವಾರ ಬೆಂಗಳೂರಿನಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಇದ ಆಗಸ್ಟ್ ತಿಂಗಳಲ್ಲಿಯೇ ದಾಖಲೆಯ ತಾಪಮಾನ ಎಂದು ತಿಳಿದು ಬಂದಿದೆ. ನಗರದ ಎಚ್ಎಎಲ್ ವಿಮಾಣ ನಿಲ್ದಾಣದಲ್ಲಿ ಬೆಳಗ್ಗೆ ಗರಿಷ್ಠ 31.5 ಡಿಸೆ, ಕನಿಷ್ಠ 19.3 ಡಿ.ಸೆ, ದಾಖಲಾಗಿದೆ. ಕೆಐಎಎಲ್ ಏರ್‌ಪೋರ್ಟ್‌ನಲ್ಲಿ ಗರಿಷ್ಠ 32.5 ಡಿ.ಸೆ ಮತ್ತು ಕನಿಷ್ಠ 21.5 ಡಿಗ್ರೆ ಸೆಲ್ಸಿಯಸ್ ಹಾಗೂ ಬೆಂಗಳೂರು ನಗರದಲ್ಲಿ 31.8 ಡಿ.ಸೆ ಮತ್ತು ಕನಿಷ್ಠ 21 ಡಿ.ಸೆ. ಉಷ್ಣಾಂಶ ದಾಖಲಾಗಿದೆ.












Click it and Unblock the Notifications