Bengaluru Weather: ಬಿಸಿಲಿಗೆ ಬೆಚ್ಚಿದ ಬೆಂಗಳೂರು! 10 ವರ್ಷಗಳಲ್ಲೇ ಆಗಸ್ಟ್ ತಿಂಗಳಲ್ಲಿ ಹೆಚ್ಚು ತಾಪಮಾನ ದಾಖಲು

ಬೇಸಿಗೆಯಲ್ಲು ಕೂಲ್ ಆಗಿರುತ್ತಿದ್ದ ಬೆಂಗಳೂರಿಗೆ ಈ ಬಾರಿ ಮಳೆಗಾಲದಲ್ಲೇ ಬಿರು ಬೇಸಿಗೆಯ ಅನುಭವ ತಟ್ಟಿದೆ. ಹೌದು, ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿದ್ದು, ಜನರನ್ನು ಹೈರಾಣಾಗಿಸಿದೆ.

ಆಗಸ್ಟ್ 28ರಂದು ಸೋಮವಾರ ಬೆಂಗಳೂರಿನಲ್ಲಿ ದಶಕದಲ್ಲೇ ಅತ್ಯಂತ ಬಿಸಿಯಾದ ಆಗಸ್ಟ್ ದಿನವನ್ನು ದಾಖಲಿಸಿದೆ. ಸೋಮವಾರ ಬೆಂಗಳೂರಿನ ತಾಪಮಾನ ಗರಿಷ್ಠ 32.6 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟಿತು, ಇದು ಸಾಮಾನ್ಯ ದಿನಗಳಿಗಿಂತ 4.5 ಡಿಗ್ರಿ ಸೆಲ್ಸಿಯಸ್ ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

 Bengaluru Experiences Hottest August Day in a Decade on August 28

ಆಗಸ್ಟ್ ತಿಂಗಳಲ್ಲಿ ಹಿಂದಿನ ಗರಿಷ್ಠ ತಾಪಮಾನವು 2012 ರಲ್ಲಿ ಆಗಸ್ಟ್ 24 ರಂದು 32.4 ಡಿಗ್ರಿ ಸೆಲ್ಸಿಯಸ್ ಆಗಿತ್ತು ಎಂದು ದತ್ತಾಂಶಗಳು ಹೇಳಿವೆ. 1991 ಮತ್ತು 2020 ರ ನಡುವಿನ ಹವಾಮಾನದ ಮಾಹಿತಿಯನ್ನು ಆಧರಿಸಿ ಆಗಸ್ಟ್‌ನಲ್ಲಿ ನಗರದ ಸರಾಸರಿ ತಾಪಮಾನವು ಸುಮಾರು 28.1 ಡಿಗ್ರಿ ಸೆಲ್ಸಿಯಸ್ ಆಗಿದೆ. ಕಳೆದ ವಾರದಲ್ಲಿ, ಬೆಂಗಳೂರಿನಲ್ಲಿ ತಾಪಮಾನವು ಸ್ಥಿರವಾಗಿ 30 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ.

ಮಳೆ ಕೊರತೆ, ಪಶ್ಚಿಮದ ಗಾಳಿ

ಮುಂಗಾರು ಮಳೆ ಕೊರತೆಯ ಜೊತೆಗೆ, ಪಶ್ಚಿಮ ದಿಕ್ಕಿನಿಂದ ಬೀಸುವ ಗಾಳಿ ಅಥವಾ ಗಾಳಿಯ ಅನುಪಸ್ಥಿತಿಯು ಈ ತಿಂಗಳು ತಾಪಮಾನದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹವಾಮಾನ ತಜ್ಞರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ. ಈ ವರ್ಷದ ಜೂನ್‌ನಿಂದ, ಬೆಂಗಳೂರಿನಲ್ಲಿ 226 ಮಿಮೀ ವಾಡಿಕೆ ಮಳೆಯಾಗಬೇಕಿತ್ತು, ಆದರೆ ಈ ಬಾರಿ 105 ಮಿಮೀ ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

"ಸಮುದ್ರ ಮಟ್ಟದಿಂದ ಸುಮಾರು 3.1 ಕಿಮೀ ಎತ್ತರದಲ್ಲಿ, ಟ್ರೋಪೋಸ್ಪಿಯರ್‌ನಲ್ಲಿ, ಪಶ್ಚಿಮ ಘಟ್ಟಗಳ ಉಪಸ್ಥಿತಿಯು ಮೋಡ ಕವಿದ ವಾತಾವರಣಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ತಾಪಮಾನವು ಸಾಮಾನ್ಯವಾಗಿ ಏರುತ್ತದೆ. ಆದರೆ, ಈ ಬಾರಿ ವಾಯುವ್ಯ ದಿಕ್ಕಿನಿಂದ ಮಾತ್ರ ಗಾಳಿ ಬೀಸುತ್ತಿದ್ದು, ತಾಪಮಾನ ಹೆಚ್ಚಾಗಿದೆ" ಎಂದು ಐಎಂಡಿ ಬೆಂಗಳೂರಿನ ವಿಜ್ಞಾನಿ ಎ.ಪ್ರಸಾದ್ ಹೇಳಿದ್ದಾರೆ.

ತಾಪಮಾನ ಕಡಿಮೆಯಾಗುವ ಸಾಧ್ಯತೆ

ಮುಂದಿನ ಕೆಲವು ವಾರಗಳಲ್ಲಿ ಹವಾಮಾನ ಪ್ರವೃತ್ತಿಗಳು ಬದಲಾಗಲಿವೆ ಎಂದು ಪ್ರಸಾದ್ ಹೇಳಿದರು. "ತಾಪಮಾನವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಕ್ರಮೇಣ ಕಡಿಮೆಯಾಗಲಿದೆ,'' ಎಂದು ಹೇಳಿದರು. ಮುಂದಿನ ಎರಡು ದಿನಗಳ ಕಾಲ ಕರ್ನಾಟಕದ ಒಳನಾಡಿನ ಕೆಲವೆಡೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಕರ್ನಾಟಕದ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲೂ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಶುಕ್ರವಾರ (ಆ.31) ಉತ್ತಮ ಪ್ರಮಾಣದ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು, ವಾರಾಂತ್ಯದಲ್ಲಿ ಎರಡು ದಿನಗಳ ಕಾಲ ಅಲ್ಪ ಪ್ರಮಾಣದ ಮಳೆಯಾಗಲಿದೆ. ಮಂಗಳವಾರ, ನಗರದಲ್ಲಿ ತಾಪಮಾನವು ಗರಿಷ್ಠ 30.6 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+