ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ಸರ್ವೇಕ್ಷಣ:ಬೆಂಗಳೂರಿಗೆ ಎಷ್ಟನೇ ರ‍್ಯಾಂಕ್? ನಿರೀಕ್ಷಿಸಿ

By Nayana
|
Google Oneindia Kannada News

ಬೆಂಗಳೂರು, ಮೇ.3: ಕೇಂದ್ರ ಸರ್ಕಾರ ನಡೆಸಿರುವ ಸ್ವಚ್ಛ ಸರ್ವೇಕ್ಷಣ ಅಭಿಯಾನದ ಸರ್ವೇ ವರದಿ ಮೇ ತಿಂಗಳಲ್ಲಿ ಪ್ರಕಟವಾಗಲಿದ್ದು, ಸ್ವಚ್ಛ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಎಂದು ತಿಳಿಯಲಿದೆ.

ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಪ್ರತಿವರ್ಷ ಒಂದು ಸಾವಿರ ಕೋಟಿ ರೂ. ವ್ಯಯಿಸುತ್ತಿದೆ. ಆದರೆ, ಅದರಿಂದ ನಗರದ ಸ್ವಚ್ಛತೆ ನಿರೀಕ್ಷಿತ ಪ್ರಮಾಣದಲ್ಲಿ ವೃದ್ಧಿಸಿಲ್ಲ. ಹೈಕೋರ್ಟ್ ಎಚ್ಚರಿಕೆ ನಂತರ ಇದೀಗ ತ್ಯಾಜ್ಯ ಘಟಕಗಳು ಆರಂಭಗೊಂಡಿದೆ.

ಸ್ವಚ್ಛ ಭಾರತ ಯೋಜನೆಯಡಿ 2 ಲಕ್ಷ ಶೌಚಾಲಯ ನಿರ್ಮಾಣಸ್ವಚ್ಛ ಭಾರತ ಯೋಜನೆಯಡಿ 2 ಲಕ್ಷ ಶೌಚಾಲಯ ನಿರ್ಮಾಣ

ಅಲ್ಲಿಯವರೆಗೆ ಕಳೆದ ಎರಡು ವರ್ಷಗಳಿಂದ ಘಟಕಗಳು ಸ್ಥಗಿತಗೊಂಡಿತ್ತು. ಬೆಂಗಳೂರಿನಲ್ಲಿ ತ್ಯಾಜ್ಯದ ಸಮಸ್ಯೆ ಹೆಚ್ಚುವಂತಾಗಿತ್ತು. ಇದರ ನಡುವೆಯೇ ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣ ಅಭಿಯಾನ ನಡೆಸಿದೆ.

Bengaluru expects better ranking on swachh survekshan

ಕೇಂದ್ರ ಸರ್ಕಾರ ನಡೆಸಿರುವ ಅಭಿಯಾನದಂತೆ ಸಮೀಕ್ಷೆಯಲ್ಲಿ ಒಟ್ಟು 4041 ನಗರಗಳು ಭಾಗಿಯಾಗಿವೆ. ಅದರಲ್ಲಿ 500 ನಗರಗಳು 1 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದರೆ, ಉಳಿದ 3541 ನಗರಗಳ ಜನಸಂಖ್ಯೆ 1 ಲಕ್ಷಕ್ಕಿಂತ ಕಡಿಮೆ ಇದೆ.

ಯಾವೆಲ್ಲ ಅಂಶಗಳ ಪರಿಗಣನೆ?: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಕೈಗೊಳ್ಳಲಾಗಿರುವ ಸ್ವಚ್ಛ ನಗರಗಳ ಸರ್ವೇ ಕಾರ್ಯದಲ್ಲಿ ನಗರದ ಸ್ವಚ್ಛತೆ, ನೈರ್ಮಲ್ಯ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಪಾಲಿಕೆಯಿಂದ ಕೂಗೊಂಡ ಕ್ರಮಗಳು, ಶಾಲೆ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದಕ್ಕೆ ಕೈಗೊಂಡ ಕ್ರಮ ಇವುಗಳನ್ನಾಧರಿಸಿ ಸ್ವಚ್ಛ ನಗರ ರಾಂಕಿಂಗ್ ನೀಡಲಾಗುತ್ತದೆ.

English summary
Swachh survekshan survey team will visit Bengaluru soon to inspect the city under swachh Bharat mission guidelines. This time Bengaluru is expecting better ranking which was secured 210 place last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X