Chickpet: ಕ್ಷೇತ್ರದಲ್ಲಿ ಎಎಪಿ ಬ್ರಿಜೇಶ್ ಕಾಳಪ್ಪರಿಂದ ಭರ್ಜರಿ ರೋಡ್ ಶೋ, ಮುಖ್ಯಮಂತ್ರಿ ಚಂದ್ರು ಸಾಥ್
ಬೆಂಗಳೂರು, ಏಪ್ರಿಲ್ 14: ಇತ್ತೀಚೆಗಷ್ಟೆ ರಾಷ್ಟ್ರೀಯ ಸ್ಥಾನಮಾನ ಪಡೆದ ಆಮ್ ಆದ್ಮಿ ಪಕ್ಷ (ಎಎಪಿ) ಬೆಂಗಳೂರಿನಾದ್ಯಂತ ಅಬ್ಬರದ ಪ್ರಚಾರ ಮತ್ತು ಬೈಕ್ ರ್‍ಯಾಲಿ ಆರಂಭಿಸಿದೆ. ತಮ್ಮದೇ ಆದ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿದ್ದಾರೆ.
ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿಯಾಗಿರುವ ಬ್ರಿಜೇಶ್ ಕಾಳಪ್ಪ ಅವರು ಶುಕ್ರವಾರ ಬೃಹತ್ ರೋಡ್ ಶೋ ನಡೆಸಿದರು. ಜೊತೆಗೆ ನಗರದ ಸಜ್ಜನ್ ರಾವ್ ವೃತ್ತದಲ್ಲಿ ನೂತನ ಕಚೇರಿಯನ್ನು ಬ್ರಿಜೇಶ್ ಕಾಳಪ್ಪ ಹಾಗೂ ಅಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಉದ್ಘಾಟನೆ ಮಾಡಿದರು.

ಗುರುವಾರ ಬೆಳಗ್ಗೆ 10ಗಂಟೆಗೆ ಆರಂಭವಾದ ಎಎಪಿ ಅಭ್ಯರ್ಥಿಯಾಗಿರುವ ಬ್ರಿಜೇಶ್ ಕಾಳಪ್ಪ ನೇತೃತ್ವದ ರ್‍ಯಾಲಿ ನಗರದ ಜೆಸಿ ರಸ್ತೆ, ಟೌನ್ ಹಾಲ್, ಕಲಾಸಿಪಾಳ್ಯ ಬಸ್ ನಿಲ್ದಾಣ, ಕಲಾಸಿಪಾಳ್ಯ ಪೊಲೀಸ್ ಠಾಣೆ ರಸ್ತೆ ಸೇರಿದಂತೆ ನಗರದ ಹಲವು ಏರಿಯಾಗಳಲ್ಲಿ ಸಂಚರಿಸಿತು.
ರ್‍ಯಾಲಿಯಲ್ಲಿ ನೂರಾರು ಕಾರ್ಯಕರ್ತರು ದ್ವಿಚಕ್ರ ವಾಹನ, ಬೊಲೆರೋ ವಾಹನದ ಮೂಲಕ ಸಂಚರಿಸಿದರು. ರಸ್ತೆಯುದ್ಧಕ್ಕು ಎಎಪಿ ಭಾವುಟಗಳು ರಾರಾಜಿಸಿದವು. ಈ ವೇಳೆ ಚಿಕ್ಕಪೇಟೆ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಕಾಳಪ್ಪ, ಅಮ್ ಆಪ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಮತದಾರರಲ್ಲಿ ಮತಯಾಚನೆ ಮಾಡಿದರು.
ಚಿಕ್ಕಪೇಟೆ ಪೋಸ್ಟಿಂಗ್‌ಗೆ ಕೋಟಿ ಕೊಡಬೇಕು: ಆರೋಪ
ಈ ಸಂದರ್ಭದಲ್ಲಿ ಮಾತನಾಡಿದ, ಚಿಕ್ಕಪೇಟೆ ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಕಾಳಪ್ಪ, ಚಿಕ್ಕಪೇಟೆ ಪ್ರದೇಶ ಯಾಕೆ ಹಿನಾಯವಾಗಿ ಇದೆ ಎಂದು ನಾವೇಲ್ಲರು ಯೋಚಿಸಬೇಕಿದೆ. ಹಾಗೆಯೇ ವಿಶ್ವೇಶ್ವರಪುರಂ ಅನ್ನು ಸರ್ ಎಂ ವಿಶ್ವೇಶ್ವರಯ್ಯ ಅವರು ನಿರ್ಮಾಣ ಮಾಡಿ 100 ವರ್ಷವಾಗಿದೆ. ಬಸವನಗುಡಿ ಅಂತ ಹೆಸರಿಟ್ಟಿದ್ದು ಕೆಂಪೇಗೌಡರ ಕಾಲದಲ್ಲಿ. ಚಿಕ್ಕಪೇಟೆಗೆ ಸೇರುವ ಮಿನರ್ವ ಸರ್ಕಲ್ ಮೊದಲ ವಿದ್ಯುತ್ ಲೈಟ್ ಅನ್ನು ಅಳವಡಿಸಲಾಗಿತ್ತು ಎಂದು ಕ್ಷೇತ್ರದ ವಾಸ್ತವ ಅಂಶವನ್ನು ತಿಳಿಸಿದ್ದರು.

ಐತಿಹಾಸಕ ಕರಗ ನಡೆಯೋದು ಈ ಚಿಕ್ಕಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ. ಚಿಕ್ಕಪೇಟೆ ಸಾಕಷ್ಟು ಐತಿಹ್ಯವಿದೆ. ಆದರೆ ಇಂದಿನ ಸನ್ನಿವೇಶದಲ್ಲಿ ಎಲ್ಲಿ ನೋಡಿದರು ಭ್ರಷ್ಟಚಾರ ತಾಂಡವವಾಡುತ್ತಿದೆ. ಚಿಕ್ಕಪೇಟೆಗೆ ಒಂದು ಪೋಸ್ಟಿಂಗ್ ಆಗಬೇಕಾದರು ಕೋಟಿಗಟ್ಟಲೇ ಹಣ ಸುರಿಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ಕ್ಷೇತ್ರದ ಅಭಿವೃದ್ಧಿಗೆ ಬಂದ ಹಣದಿಂದ ನುಂಗಿ ಹಾಕಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹಾಗಾಗಿ ಈ ಭಾರೀ ಒಂದು ಬದಲಾವಣೆಯನ್ನ ತರಲು ನಾವು ಬಂದಿದ್ದೇವೆ. ನಮ್ಮ ಆಮ್ ಆದ್ಮಿ ಪಕ್ಷವನ್ನು ಬೆಂಬಲಿ ಮತಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಈ ಬೃಹತ್ ಪ್ರಚಾರ ಮೇರವಣಿಯಲ್ಲಿ ರಾಜ್ಯದ ಮಹಿಳಾ ಕಾರ್ಯದರ್ಶಿ ಸುಷ್ಮಾ ವೀರ್ ಸೇರಿದಂತೆ ಅಮ್ ಆದ್ಮಿ ಪಕ್ಷದ ಮುಖಂಡರು ಸೇರಿದಂತೆ ಅಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಪ್ರಚಾರ ವೇಳೆ ಎಎಪಿ ಕಾರ್ಯಕರ್ತ ಮೇಲೆ ಹಲ್ಲೆ
ಬೆಂಗಳೂರಿನ ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸಿ.ವಿ.ರಾಮನ್ ನಗರದ ಶಾಸಕ ಬಿಜೆಪಿಯ ಎಸ್.ರಘು ಅವರು ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಕ್ಷೇತ್ರದ ಎಎಪಿ ಅಭ್ಯರ್ಥಿಗ ಮೋಹನ್ ದಾಸರಿ ಅವರು ಆರೋಪಿಸಿದ್ದಾರೆ. ಘಟನೆಯಿಂದ ಅವರು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ತಪ್ಪಿತಸ್ಥರ ವಿರುದ್ಧ ಸುಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಚಾರದ ವೇಳೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.












Click it and Unblock the Notifications