e-Khata: ಬೆಂಗಳೂರಿನಲ್ಲಿ ಇ-ಖಾತಾ ಪ್ರಕ್ರಿಯೆಗೆ ದಾಖಲೆ ವೇಗ, ಶೇ 99ರಷ್ಟು ಅರ್ಜಿಗಳ ವಿಲೇವಾರಿ ಪೂರ್ಣ
ಬೆಂಗಳೂರು: ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ (e-Khata) ಅರ್ಜಿಗಳ ವಿಲೇವಾರಿಯಲ್ಲಿ ಮಹತ್ವದ ಸಾಧನೆ ದಾಖಲಾಗಿದೆ. ಒಟ್ಟು ಅರ್ಜಿಗಳಲ್ಲಿ ಶೇ 99.36ರಷ್ಟು ವಿಲೇವಾರಿ ದರ ಸಾಧಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ. ನಾಗರಿಕರು ಅರ್ಜಿ ಸಲ್ಲಿಸಿದ ಬಳಿಕ 1ರಿಂದ 2 ದಿನಗಳೊಳಗೆ ಇ-ಖಾತಾ ಅರ್ಜಿಗಳ ವಿಲೇವಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಬಿಎ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ಅವರು ಈ ಕುರಿತು ಪ್ರಕಟಣೆ ನೀಡಿದ್ದು, ಎಲ್ಲ ನಾಗರಿಕರು ಆನ್‌ಲೈನ್ ಮೂಲಕವೇ ಇ-ಖಾತಾಕ್ಕೆ ಅರ್ಜಿ ಸಲ್ಲಿಸಲು ಮನವಿ ಮಾಡಿದ್ದಾರೆ. ನಾಗರಿಕರು https://bbmpeaasthi.karnataka.gov.in ವೆಬ್‌ಸೈಟ್ ಮೂಲಕ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಮೀಪದ ಎಲ್‌ಪಿಇಗಳ ವಿವರಗಳನ್ನು ಮೇಲ್ಕಂಡ ವೆಬ್‌ಸೈಟ್‌ನಲ್ಲೇ ಪಡೆಯಬಹುದು ಎಂದು ತಿಳಿಸಿದ್ದಾರೆ.

ಇ-ಖಾತಾ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ನಗರ ನಿಗಮ ಅಥವಾ ಜಿಬಿಎ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಮಧ್ಯವರ್ತಿಗಳಿಗೆ ಹಣ ಕೊಡುವುದು ಅಥವಾ ಲಂಚ ನೀಡುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರಿಗೆ ಜಿಬಿಎ ಮನವಿ ಮಾಡಿದೆ.
3-4 ದಿನಗಳಲ್ಲಿ ಅನುಮೋದನೆ
ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದ 3-4 ದಿನಗಳೊಳಗೆ ಇ-ಖಾತಾ ಅನುಮೋದನೆ ಲಭ್ಯವಾಗುತ್ತದೆ. ಆದರೆ ಮ್ಯೂಟೇಷನ್ ಅಥವಾ ದಾಖಲೆ ತಿದ್ದುಪಡಿ ಅಗತ್ಯವಿದ್ದಲ್ಲಿ, ಪ್ರಕ್ರಿಯೆಗೆ 10-15 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಗರಿಕರ ಸಹಾಯಕ್ಕಾಗಿ ಇ-ಖಾತಾ ಸಹಾಯವಾಣಿ-94806 83695 ಪ್ರಾರಂಭಿಸಲಾಗಿದೆ. ಇ-ಖಾತಾ ಅರ್ಜಿಯ ಸ್ಥಿತಿಯನ್ನು ನಾಗರಿಕರು ಆನ್‌ಲೈನ್‌ನಲ್ಲೇ https://bbmpeaasthi.karnataka.gov.in/citizen_core/Final_eKhatha_Status_based_on_ePIDಲಿಂಕ್ ಮೂಲಕ ಪರಿಶೀಲಿಸಬಹುದು.

ಇದರೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ಸಾಮಾನ್ಯ ಪ್ರಶ್ನೋತ್ತರಗಳು ಹಾಗೂ ವಿಡಿಯೋ ಟ್ಯುಟೋರಿಯಲ್‌ಗಳು ಸಹ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಇ-ಖಾತಾ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ಜಿಬಿಎ ತಿಳಿಸಿದೆ. ಇ-ಖಾತಾ ವ್ಯವಸ್ಥೆಯ ಈ ದಾಖಲೆ ಮಟ್ಟದ ಕಾರ್ಯಕ್ಷಮತೆ, ಬೆಂಗಳೂರು ನಗರದಲ್ಲಿ ಪಾರದರ್ಶಕ ಆಡಳಿತ ಮತ್ತು ಡಿಜಿಟಲ್ ಸೇವೆಗಳ ಪರಿಣಾಮಕಾರಿ ಕೆಲಸಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರ್ಜಿ ವಿಲೇವಾರಿ ವಿವರ
ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳ ವಿಲೇವಾರಿಯಲ್ಲಿ 2026ರ ಜನವರಿ 21ರವರೆಗೆ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಒಟ್ಟು 9,27,029 ಇ-ಖಾತಾ ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದು, ಇದರಲ್ಲಿ 9,21,077 ಅರ್ಜಿಗಳು ವಿಲೇವಾರಿಯಾಗಿವೆ. ಇದರೊಂದಿಗೆ ಒಟ್ಟಾರೆ ವಿಲೇವಾರಿ ಪ್ರಮಾಣ ಶೇ 99.36ರಷ್ಟು ತಲುಪಿದೆ.
Bengaluru City ekhata performance continues at- 99.36% disposal rate
— Greater Bengaluru Authority (@GBA_office) January 22, 2026
Once a citizen applies, within 1-2 days his/her ekhata application is being disposed.
GBA wants every citizen to apply online at https://t.co/p1wpGQDUGB
Or from Bangalore One Centre or via Local Private… pic.twitter.com/YD9iwPWsHd
ನಗರದ ಐದು ಪಾಲಿಕೆಗಳಲ್ಲಿಯೂ ಇ-ಖಾತಾ ಪ್ರಕ್ರಿಯೆ ತ್ವರಿತವಾಗಿ ಸಾಗುತ್ತಿದೆ. ಉತ್ತರ ನಗರ ಪಾಲಿಕೆಯಲ್ಲಿ 2,04,108 ಅರ್ಜಿಗಳು ಸ್ವೀಕರಿಸಲ್ಪಟ್ಟು, 2,03,417 ಅರ್ಜಿಗಳು ವಿಲೇವಾರಿಯಾಗಿವೆ. ಕೇಂದ್ರ ನಗರ ಪಾಲಿಕೆಯಲ್ಲಿ 80,481 ಅರ್ಜಿಗಳಲ್ಲಿ 80,012 ಅರ್ಜಿಗಳು, ಪೂರ್ವ ನಗರ ಪಾಲಿಕೆಯಲ್ಲಿ 1,58,044 ಅರ್ಜಿಗಳಲ್ಲಿ 1,56,971 ಅರ್ಜಿಗಳು, ದಕ್ಷಿಣ ನಗರ ಪಾಲಿಕೆಯಲ್ಲಿ 2,03,238 ಅರ್ಜಿಗಳಲ್ಲಿ 2,01,669 ಅರ್ಜಿಗಳು, ಪಶ್ಚಿಮ ನಗರ ಪಾಲಿಕೆಯಲ್ಲಿ 2,81,159 ಅರ್ಜಿಗಳಲ್ಲಿ 2,79,008 ಅರ್ಜಿಗಳು ಇತ್ಯರ್ಥಗೊಂಡಿವೆ ಎಂದು ಮಾಹಿತಿ ಹಂಚಿಕೊಂಡಿದೆ.
ಪ್ರಸ್ತುತ ಎಲ್ಲ ಪಾಲಿಕೆಗಳಲ್ಲಿಯೂ 24 ಗಂಟೆಗಳ ಒಳಗೆ ಸಲ್ಲಿಸಲಾದ ಅರ್ಜಿಗಳ ಸಂಖ್ಯೆ 1,213 ಆಗಿದ್ದು, ಕಾರ್ಯವೈಖರಿಯ ವೇಗವನ್ನು ಇದು ತೋರಿಸುತ್ತದೆ. ಇನ್ನೂ 1,131 ಅರ್ಜಿಗಳು ಸಂಬಂಧಪಟ್ಟ ಅಧಿಕಾರಿಗಳ ಬಳಿ ಬಾಕಿ ಉಳಿದಿದ್ದು, 7 ದಿನಗಳಿಗಿಂತ ಹೆಚ್ಚು ಕಾಲ ಮ್ಯೂಟೇಶನ್ ಬಾಕಿಯಿರುವ ಅರ್ಜಿಗಳ ಸಂಖ್ಯೆ 2,092 ಆಗಿದೆ. ಅರ್ಜಿ ಬಾಕಿ ದಿನಗಳ ಅಂಶದಲ್ಲಿಯೂ ಗಮನಾರ್ಹ ಸಾಧನೆ ಕಂಡುಬಂದಿದ್ದು, ಬಹುತೇಕ ಅರ್ಜಿಗಳು 3-5 ದಿನಗಳ ಒಳಗೆ ವಿಲೇವಾರಿಯಾಗುತ್ತಿವೆ. ನಗರ ಪಾಲಿಕೆ ಆಡಳಿತದ ಈ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದೆ.
-
Swachh Survey: ಬೆಂಗಳೂರು ಸ್ವಚ್ಛ ಸರ್ವೇಕ್ಷಣ 2025-26: 38 ಉದ್ಯಾನವನ, 11 ಮೈದಾನಗಳ ಸ್ವಚ್ಛತೆ: ರಾಜೇಂದ್ರ ಚೋಳನ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications