E-Khata: ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್; ಜಂಟಿ ಆಸ್ತಿ, ಪ್ರತ್ಯೇಕ ಇ-ಖಾತಾ ಪಡೆಯುವುದು ಹೇಗೆ, ಇಲ್ಲಿದೆ ವಿವರ
Bengaluru E-Khata: ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೊಸದೊಂದು ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಹೊಸ ಯೋಜನೆಯಿಂದ ಲಾಭವಾಗಲಿದೆ. ಇ-ಖಾತಾ ಉಪವಿಭಜನೆ ಆನ್‌ಲೈನ್‌ನಲ್ಲಿ ಸಿಗಲಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಬೆಂಗಳೂರು ನಗರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಇ-ಆಸ್ತಿ 2.0 ತಂತ್ರಾಂಶದಲ್ಲಿ 'ನಿವೇಶನ ಉಪವಿಭಜನೆ' ಸೇವೆಯನ್ನು ಆರಂಭಿಸಿವೆ. ಇದರಿಂದ ಒಂದೇ ಎ-ಇ-ಖಾತಾದಡಿ ಜಂಟಿ ಮಾಲೀಕತ್ವ ಹೊಂದಿರುವವರು ತಮ್ಮ ಪಾಲಿಗೆ ಅನುಗುಣವಾಗಿ ನಿವೇಶನವನ್ನು ವಿಭಜಿಸಿಕೊಂಡು ಪ್ರತ್ಯೇಕ ಎ-ಇ-ಖಾತಾ ಪಡೆಯಬಹುದಾಗಿದೆ.
ಎ-ಇ-ಖಾತಾದ ಜಂಟಿ ಮಾಲೀಕರು ಜಂಟಿ ಆಸ್ತಿಯಲ್ಲಿನ ತಮ್ಮ ಪಾಲಿಗೆ ಅನುಗುಣವಾಗಿ ಉಪ-ವಿಭಜನೆ ಮಾಡಿಕೊಂಡು, ಪ್ರತ್ಯೇಕ ಇ-ಖಾತಾಗಳನ್ನು ಆನ್ ಲೈನ್ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇ-ಆಸ್ತಿ 2.0 ತಂತ್ರಾಂಶದಲ್ಲಿ "ನಿವೇಶನ ಉಪ-ವಿಭಜನೆ' ಸೇವೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ಬೆಂಗಳೂರು ನಗರ ಪಾಲಿಕೆಗಳಿಂದ ಚಾಲನೆ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವತಿಯಿಂದ ಇ-ಆಸ್ತಿ 2.0 ತಂತ್ರಾಂಶದಲ್ಲಿ ನಿವೇಶನ ಉಪ-ವಿಭಜನೆ ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಸೇವೆಗಾಗಿ ಸಾರ್ವಜನಿಕರಿಂದ ಬಹುದಿನಗಳಿಂದ ಬೇಡಿಕೆ ಇತ್ತು.

ಒಂದೇ ಎ-ಇ-ಖಾತಾದಡಿ ಜಂಟಿ ಮಾಲೀಕತ್ವದಲ್ಲಿರುವ ಆಸ್ತಿಗಳಿಗೆ ಈ ಸೇವಯು ಅನ್ವಯವಾಗುತ್ತದ (ಜಂಟಿ ಮಾಲೀಕರು ಕುಟುಂಬದ ಸದಸ್ಯರಾಗಿರಬಹುದು ಅಥವಾ ಅಲ್ಲದಿರಬಹುದು). ಜಂಟಿ ಆಸ್ತಿಯಲ್ಲಿ ಸ್ಪಷ್ಟ ಪಾಲು ಹೊಂದಿರುವ ಜಂಟಿ ಮಾಲೀಕರು ಇನ್ನು ಮುಂದೆ ನಿವೇಶನವನ್ನು ತಮ್ಮ ನಡುವೆ ವಿಭಜಿಸಿಕೊಳ್ಳಬಹುದಾಗಿದೆ.
ಈ ಪ್ರಕ್ರಿಯೆಯ ನಂತರ ಪ್ರತಿಯೊಬ್ಬ ಮಾಲೀಕರಿಗೆ ಅವರವರ ಪಾಲಿಗೆ ಅನುಗುಣವಾಗಿ, ಅವರ ಹಸರಿನಲ್ಲಿ ಪ್ರತ್ಯೇಕ ಎ-ಇ-ಖಾತಾ ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಹಲವು ಆಸ್ತಿದಾರರು ಒಂದೇ ಎ-ಇ-ಖಾತಾದಡಿ ಆಸ್ತಿಯನ್ನು ಜಂಟಿಯಾಗಿ ಹೊಂದಿದ್ದಾರೆ. ಇಂತಹ ಮಾಲೀಕರು ಸಹೋದರ-ಸಹೋದರಿಯರು, ವಾರಸುದಾರರು, ಸಂಬಂಧಿಕರು ಅಥವಾ ಕುಟುಂಬೇತರ ಜಂಟಿ ಮಾಲೀಕರಾಗಿರಬಹುದು. ಜಂಟಿ ಮಾಲೀಕರು ಪ್ರತ್ಯೇಕ ಎ-ಇ-ಖಾತಾ ಹೊಂದುವುದು ಸೇರಿದಂತೆ ಆಸ್ತಿಯ ವಿಚಾರದಲ್ಲಿ ಹಲವು ಅನುಕೂಲಗಳು ಆಗಲಿವೆ.
1. ತಮ್ಮ ಪಾಲಿನ ಆಸ್ತಿಯನ್ನು ಮಾರಾಟ, ದಾನ ಅಥವಾ ಅಡಮಾನ ಇರಿಸುವುದು.
2. ತಮ್ಮ ಪಾಲಿನ ಆಸ್ತಿಗೆ ಕಟ್ಟಡ ನಕ್ಷೆ ಮಂಜೂರಾತಿ ಪಡೆಯುವುದು.
3. ಸ್ವತಂತ್ರವಾಗಿ ಆಸ್ತಿ ತೆರಿಗೆ ಪಾವತಿಸುವುದು.
ಈ ಹೊಸ ಸೇವೆಯ ಮೂಲಕ ಜಂಟಿ ಆಸ್ತಿ ಮಾಲೀಕರು ಸರಳ ಹಾಗೂ ಸುಗಮ ಪ್ರಕ್ರಿಯೆಯಲ್ಲಿ ಆನ್ ಲೈನ್ ಮೂಲಕವೇ ಉಪ-ವಿಭಜನೆಯನ್ನು ಪೂರ್ಣಗೊಳಿಸಬಹುದಾಗಿದೆ.
ಆನ್‌ಲೈನ್ ಅರ್ಜಿ ಸಲ್ಲಿಕೆ: https://GBAeAasthikarnataka.gov.in
ಅರ್ಜಿ ಸಲ್ಲಿಸಲು ಯಾರು ಅರ್ಹರು
ಎ-ಇ-ಖಾತಾದಲ್ಲಿ ವೈಯಕ್ತಿಕ ಪಾಲು ದಾಖಲಾಗಿರುವ ಎಲ್ಲಾ ಜಂಟಿ ಎ- ಇ-ಖಾತಾ ಮಾಲೀಕರ ಆಸ್ತಿಗಳಿಗೆ ಈ ಸೇವೆಯು ಲಭ್ಯವಿರುತ್ತದೆ. ಜಂಟಿ ಮಾಲೀಕರು ಒಂದೇ ಕುಟುಂಬಕ್ಕೆ ಸೇರಿದವರಾಗಿರಬಹುದು ಅಥವಾ ಅಲ್ಲದಿರಬಹುದು.
1. ಎ - ಇ ಖಾತಾ ಹೊಂದಿರುವ ಆಸ್ತಿಗಳನ್ನು ಮಾತ್ರ ಉಪ-ವಿಭಜಿಸಲು ಅವಕಾಶವಿರುತ್ತದೆ.
2. 2,000 ಚ.ಮೀ. (ಸುಮಾರು 21,500 ಚ.ಅಡಿ) ವರೆಗಿನ ನಿವೇಶನಗಳನ್ನು ಜಂಟಿ ಮಾಲೀಕರ ನಡುವೆ ಉಪ-ವಿಭಜಿಸಲು ಸುಗಮ ಹಾಗೂ ತ್ವರಿತ ಆಯ್ಕೆಯನ್ನು ಕಲ್ಪಿಸಲಾಗಿದೆ.
3. ಆಸ್ತಿಯು "ಖಾಲಿ ನಿವೇಶನ' ಅಥವಾ "ಕಟ್ಟಡ ಸಹಿತ ನಿವೇಶನ ಮಾದರಿಯಾಗಿರಬೇಕು, ಬಹುಮಹಡಿ ಕಟ್ಟಡಗಳ ಫ್ಯಾಟ್ ಯೂನಿಟ್‌ಗಳ ಎ-ಇ-ಬಾಹುಗಳನ್ನು ಈ ಆಯ್ಕೆಯಡಿ ಉಪ- ವಿಭಜಿಸಲು ಅವಕಾಶವಿರುವುದಿಲ್ಲ.
4. ಪ್ರತಿಯೊಬ್ಬ ಜಂಟಿ ಮಾಲೀಕರ ಪಾಲು ಎ-ಇ-ಖಾದಲ್ಲಿ ಸ್ಪಷ್ಟವಾಗಿ ದಾಖಲಾಗಿರಬೇಕು.
5. 2,000 ಚ.ಮೀ.ಗಿಂತ ಹೆಚ್ಚು ವಿಸ್ತೀರ್ಣದ ನಿವೇಶನಗಳಿಗೆ ನಿಯಮಾನುಸಾರ ಸಾಮಾನ ಕಾರ್ಯವಿಧಾನದಂತೆ ನಗರ ಯೋಜನಾ ವಿಭಾಗದಿಂದ ಉಪ-ವಿಭಜನೆ ಅನುಮೋದನೆ ಪಡೆಯಬಹುದು.
ಉಪ - ವಿಭಜನೆಯಿಂದ ರಚನೆಯಾಗುವ ಪ್ರತಿ ನಿವೇಶನಕ್ಕೆ ಅನ್ವಯವಾಗುವ ಷರತ್ತುಗಳು
ಜಂಟಿ ಮಾಲೀಕತ್ವದ ಆಸ್ತಿಯನ್ನು ಉಪ-ವಿಭಜಿಸಿ ರಚಿಸಲಾಗುವ ಪ್ರತಿಯೊಂದು ನಿವೇಶನವು ಈ ಕೆಳಕಂಡ ಮೂರು ಸರಗಳನ್ನು ಪೂರೈಸಬೇಕು.
• ವಿಸ್ತೀರ್ಣ: 50 ಚ.ಮೀ. (ಸುಮಾರು 538 ಚ.ಅಡಿ)ಗಿಂತ ಹೆಚ್ಚು
• ರಸ್ತೆ ಮುಂಭಾಗ: ಕವಿ 6 ಮೀಟರ್ (ಸುಮಾರು 20 ಅಡಿ)
• ಸಂಪರ್ಕ: ಸಾರ್ವಜನಿಕ ರಸ್ತೆಗೆ ನೇರ ಸ್ವತಂತ್ರ ಸಂಪರ್ಕ ಅಥವಾ ಸಾರ್ವಜನಿಕ ರಸ್ತೆಗೆ ಸಂಪರ್ಕ ಹೊಂದಿರುವ ಆಂತರಿಕ ರಸ್ತೆಯ ಮೂಲಕ ಸಂಪರ್ಕ.
ಆಂತರಿಕ ರಸ್ತೆಗಳು: ಕೆಲವು ಉಪ-ವಿಭಜಿತ ನಿವೇಶನಗಳು ಸಾರ್ವಜನಿಕ ರಸ್ತೆಗೆ ನೇರವಾಗಿ ಮುಖ ಮಾಡಿರದಿರಬಹುದು. ಅಂತಹ ನಿವೇಶನಗಳ ಸಂಪರ್ಕಕ್ಕಾಗಿ ಅಂತರಿಕ ರಸ್ತೆ ಅವಶ್ಯವಿರುತ್ತದೆ. ಪ್ರತಿಯೊಂದು ಅಂತರಿಕ ರಸ್ತೆಯು ಕನಿಷ್ಠ 3.5 ಮೀಟರ್ (ಸುಮಾರು 11.5 ಅಡಿ) ಅಗಲ ಹೊಂದಿರಬೇಕು. ಈ ಷರತ್ತುಗಳಿಂದ ಪ್ರತಿಯೊಬ್ಬ ಒಂಟಿ ಮಾಲೀಕರ ಉಪ-ವಿಭಜಿತ ನಿವೇಶನಕ್ಕೆ ಸಾರ್ವಜನಿಕ ರಸ್ತೆಯ ಸಂಪರ್ಕ ಲಭ್ಯವಾಗುವುದು ಹಾಗೂ ಇತರ ನಿಯಮಾವಳಿಗಳ ಪಾಲನೆ ಖಾತರಿಯಾಗುತ್ತದೆ.
ಸಲ್ಲಿಸಬೇಕಾದ ದಾಖಲೆಗಳು
ಅರ್ಜಿದಾರರು ನೋಂದಾಯಿತ ವಾಸ್ತುಶಿಲ್ಪಿಯಿಂದ ಸಿದ್ಧಪಡಿಸಲಾದ ನಿವೇಶನ ಉಪ ವಿಭಜನೆ ನಕ್ಷೆಯನ್ನು ಅಪ್‌ಲೋಡ್ ಮಾಡಬೇಕು. ಅಲ್ಲದೆ ನಕ್ಷೆಯಲ್ಲಿ ಈ 4 ಅಂಶಗಳು ಇರಬೇಕು.
1. ಮೂಲ ಜಂಟಿ ಮಾಲೀಕತ್ವದ ನಿವೇಶನದ ಗಡಿಗಳು.
2. ಪ್ರತಿಯೊಬ್ಬ ಜಂಟಿ ಮಾಲೀಕರಿಗೆ ಪ್ರಸ್ತಾವಿತ ಉಪ-ವಿಭಜಿತ ನಿವೇಶನ.
3. ಸಾರ್ವಜನಿಕ ರಸ್ತೆಗೆ ಸಂಪರ್ಕ.
4. ಉಪ-ವಿಭಜಿತ ನಿವೇಶನಗಳನ್ನು ತಲುಪಲು ಅಗತ್ಯವಿರುವ ಅಂತರಿಕ ರಸ್ತೆ ಹಾಗೂ ಅದರ ಅಗಲ (ಕವಿಷ್ಯ 3.5 ಮೀಟರ್) ಇರಬೇಕು.
ಶುಲ್ಕ ವಿವರ: ಆಸ್ತಿಯ ಮಾರ್ಗಸೂಚಿ ಮೌಲ್ಯದ (Guidance Value) ಶೇಕಡಾವಾರು ಅಧಾರದಲ್ಲಿ ಶುಲ್ಕವನ್ನು ವಿಧಿಸಲಾಗುವುದು, ನಿವೇಶನದ ಬಳಕೆಗೆ ಅನುಗುಣವಾಗಿ ಶುಲ್ಕದ ದರಗಳು ಈ ರೀತಿ ಇವೆ.

ನಿದರ್ಶನ: 11 ಕೋಟಿ ಮಾರ್ಗಸೂಚಿ ಮೌಲ್ಯದ ವಸತಿ ನಿವೇಶನಕ್ಕೆ 20,000 ರೂ. ಪಾವತಿಸಬೇಕು.
ಅರ್ಜಿ ನಲ್ಲಿಸುವ ವಿಧಾನ
1. https://GBAeAasthi.karnataka.gov.in. ಗೆ ಭೇಟಿ ನೀಡಿ.
2. "Sub-Division or Bifurcation of Existing A-Khata" (ಅಸ್ತಿತ್ವದಲ್ಲಿರುವ ಎ-ಖಾತಾದ ಉಪ- ವಿಭಜನೆ / ವಿಭಜನೆ) ಸೇವೆಯನ್ನ ಆಯ್ಕೆ ಮಾಡಿ.
3. ಆಸ್ತಿಯ ಜಂಟಿ ಮಾಲೀಕದ ವಿವರಗಳನ್ನು ನಮೂದಿಸಿ ವಾಸ್ತುಶಿಲ್ಪಿಯಿಂದ ಸಿದ್ಧಪಡಿಸಲಾದ ನಕ್ಷೆಯನ್ನ ಅಪ್‌ಲೋಡ್ ಮಾಡಿ.
4. ಪ್ರತಿಯೊಂದು ಉಪ-ವಿಭಜಿತ ನಿವೇಶನದ ವಿಸ್ತೀರ್ಣ ಹಾಗೂ ಇತರ ವಿವರಗಳನ್ನು ನಮೂದಿಸಿ.
5. ಅನುಮೋದನೆಯ ನಂತರ ಅನ್ವಯವಾಗುವ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಆಸ್ತಿದಾರರು ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಇ-ಖಾತಾ ಸಾರ್ವತ್ರಿಕ ಸಹಾಯವಾಣಿ ಸಂಖ್ಯೆ 9480683695 ಅಮ್ಮ ಸಂಪರ್ಕಿಸಬಹುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications
