ಬೆಂಗಳೂರಲ್ಲಿ 180 ನಕ್ಷತ್ರ ಆಮೆಗಳ ರಕ್ಷಣೆ; ಟ್ರಾಲಿ ಬ್ಯಾಗ್‌ನಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದವನ ಬಂಧನ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮಗಳು, ಅಪರಾಧಗಳು ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಇದೀಗ ಹಾಡಹಗಲೇ ಭಾರತೀಯ ನಕ್ಷತ್ರ ಆಮೆಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ರೆವೆನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯ (DRI) ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ 180 ಜೀವಂತ ಭಾರತೀಯ ನಕ್ಷತ್ರ ಆಮೆಗಳ್ನು ರಕ್ಷಿಸಲಾಗಿದೆ.
ಗುಪ್ತಚರ ಮಾಹಿತಿ ಮೇರೆಗೆ ಗಾಂಧಿನಗರದಲ್ಲಿ ಕಾರ್ಯಾಚರಣೆ ನಡೆಸಿದ ಡಿಆರ್ ಐ ಅಧಿಕಾರಿಗಳು ಗಾಂಧಿನಗರದಲ್ಲಿ ದಾಳಿ ಮಾಡಿದಾಗ ಹಸಿರು ಟ್ರಾಲಿ ಬ್ಯಾಗ್‌ನಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ಆಮೆಗಳನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

10,000 ರೂ.ಗೆ ಸಾಗಣೆಗೆ ಒಪ್ಪಿದ್ದ ವ್ಯಕ್ತಿ
ಬಂಧಿತ ಆಮೆ ಸಾಗಣೆ ವ್ಯಕ್ತಿಗೆ ಕಲ್ಯಾಸಿಪಾಳ್ಯದಲ್ಲಿ ಈ ಆಮೆಗಳಿರುವ ಟ್ರಾಲಿಯನ್ನು ಮೆಜೆಸ್ಟಿಕ್‌ಗೆ ಸೇಫ್ ಆಗಿ ತಲುಪಿಸಿದರೆ 10,000 ರೂಪಾಯಿ ಕೊಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅದನ್ನು ತಲುಪಿಲು ನಾನು ಹೋಗುತ್ತಿದ್ದೆ ಎಂದು ಆತ ಪೊಲೀಸ್ ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ. ಹಣದಾಸೆಗೆ ಈರೀತಿ ಮಾಡಿದ್ದಾಗಿ ತಿಳಿಸಿದ್ದಾನೆ.
ಗುಪ್ತಚರ ಮಾಹಿತಿ ಮೇರೆಗೆ ಗಾಂಧಿನಗರದಲ್ಲಿ ಕಾರ್ಯಾಚರಣೆ ನಡೆಸಿದಾಗ ಟ್ರಾಲಿಯಲ್ಲಿ ಆರು ಬಟ್ಟೆಗಳನ್ನು ಸುತ್ತಿ ಮುಚ್ಚಿಟ್ಟಿದ್ದ ಜೀವಂತ 180 ನಕ್ಷತ್ರ ಆಮೆಗಳು ಪತ್ತೆಯಾಗಿವೆ. ಸದ್ಯ ಆಮೆಗಳನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಅಡಿ ಜಪ್ತಿ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕಳ್ಳ ಸಾಗಣೆ ಹಿಂದೆ ಯಾರದ್ದೆಲ್ಲ ಕೈವಾಡ ಇದೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಮನೆಯಲ್ಲಿದ್ದರೆ ಆಮೆ ಒಳಿತು ನಂಬಿಕೆ! ಅಪರಾಧ ಏಕೆ?
ಅಪರೂಪದ ನಕ್ಷತ್ರ ಆಮೆಗಳು (ಇಂಡಿಯನ್ ಸ್ಟಾರ್ ಟಾರ್ಟಾಯ್ಸ್) ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಿತ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಇವುಗಳನ್ನು ಸಾಕುವುದು ಇಲ್ಲವೇ ಮಾರಾಟ ಮಾಡುವುದು, ಸಾಗಣೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ಆಮೆಗಳನ್ನು ಮನೆಯಲ್ಲಿಟ್ಟರೆ ಅದೃಷ್ಟ ಬರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಜನರ ನಂಬಿಕೆಯನ್ನೆ ಬಂಡವಾಳ ಮಾಡಿಕೊಳ್ಳುವ ಕೆಲವರು ಈ ರೀತಿ ಕಳ್ಳ ಸಾಗಣೆಗೆ ಇಳಿಯುತ್ತಾರೆ.


Click it and Unblock the Notifications
