Cubbon Park Rules : ಆಹಾರ, ಕ್ರೀಡೆ, ಪ್ರೇಮಿಗಳ ಸಲ್ಲಾಪ ನಿಷೇಧ, ಭದ್ರತಾ ಸಿಬ್ಬಂದಿ ಗಸ್ತು, ಏನಿದು?
ಬೆಂಗಳೂರು, ಏಪ್ರಿಲ್ 13: ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಉದ್ಯಾನದಲ್ಲಿ ನೀವು ಇನ್ನು ಮುಂದೆ ಆಟವಾಡವುದು, ಪ್ರೇಮಿಗಳು ಪರಸ್ಪರ ಹತ್ತಿರ ಸೇರುವುದು, ಮಕ್ಕಳು ಮರ ಏರುವುದಷ್ಟೇ ಅಲ್ಲದೇ ವಿಡಿಯೋ-ಫೋಟೊ ತೆಗೆಯುವಂತಿಲ್ಲ.
ಬೆಂಗಳೂರಿನವರ ಪಾಲಿಗೆ ಕಬ್ಬನ್ ಉದ್ಯಾನವನ ಅತ್ಯಂತ ಅಚ್ಚುಮೆಚ್ಚು. ನಿತ್ಯ ಬೆಳಗ್ಗೆ ವಾಯು ವಿಹಾರಕ್ಕೆ, ಕುಟಂಬದವರೊಂದಿಗೆ ಮಕ್ಕಳು ಇಲ್ಲಿಗೆ ಬಂದು ಆಟವಾಡಿ ಕೆಲ ಹೊತ್ತು ಇದ್ದು ತೆರಳುತ್ತಾರೆ. ಮಕ್ಕಳಿಗೆಂದೆ ಇಲ್ಲಿ ಸಾಕಷ್ಟು ಚಟುವಟಿಕೆಗಳು ಇವೆ. ಆದರೆ ಇದೆಲ್ಲವು ಇಂದು ದುರುಪಯೋಗ ಆಗುತ್ತಿದೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಒಂದಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದಾರೆ.

ಚಿಕ್ಕಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಸಾವಿರಾರು ಮಂದಿ ನಿತ್ಯ ಈ ಉದ್ಯಾನಕ್ಕೆ ಆಗಮಿಸುತ್ತಾರೆ. ಆದರೆ ಇಲ್ಲಿ ಪ್ರೇಮಿಗಳ ಸರಸ ಸಲ್ಲಾಪ, ಅನೈತಿಕ ಚಟುವಟಿಕೆಗಳು ಸೇರಿದಂತೆ ಹಲವು ಕಾರಣಗಳಿಂದಾಗಿ ತೋಟಗಾರಿಕೆ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿವೆ. ಹೀಗಾಗಿ ಮಕ್ಕಳಿಗೆ ಈ ಉದ್ಯಾನದಲ್ಲಿ ಸೂಕ್ತ ವಾತಾವರಣ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ನಗರದ ಪ್ರಮುಖ ಉದ್ಯಾನಗಳಲ್ಲಿ ಒಂದಾಗಿರುವ ಈ ಕಬ್ಬನ್ ಉದ್ಯಾನ ಬರೊಬ್ಬರಿ 300ಎಕರೆ ಪ್ರದೇಶದಲ್ಲಿ ವಿಸ್ತರಣೆ ಆಗಿದೆ. ಉದ್ಯಾನ ಮತ್ತು ಮಕ್ಕಳ ಹಿತದೃಷ್ಟಿಯಿಂದ ಕೆಲ ಕುಟುಂಬಗಳ ದೂರು ನೀಡಿದ್ದು, ಅದರ ಆಧಾರದಲ್ಲಿ ಇಲಾಖೆಯ ಸೂಚನೆ ಮೇರೆಗೆ ಕಳೆದ ಒಂದು ತಿಂಗಳಿನಿಂದ ಭದ್ರತಾ ಸಿಬ್ಬಂದಿ ಉದ್ಯಾನದಲ್ಲಿ ಗಸ್ತು ತಿರುಗುತ್ತಿದ್ದಾರೆ.
ಈ ಸಿಬ್ಬಂದಿ ಜಾರಿಗೆ ತಂದ ನಿಯಮಗಳನ್ನು ಸಾರ್ವಜನಿಕರು ಮಕ್ಕಳು ಉಲ್ಲಂಘಿಸುತ್ತಿದ್ದರೆ ಅವರನ್ನು ಎಚ್ಚರಿಸುತ್ತಾರೆ. ಮೊಬೈಲ್‌ನಲ್ಲಿ ಫೋಟೋ, ವಿಡಿಯೋ ತೆಗೆಯುತ್ತಿದ್ದರೆ, ಉದ್ಯಾನದ ಹುಲ್ಲಿನ ಮೇಲೆ ಮಲಗುವುದು, ಮರ ಏರುವುದು, ಪ್ರೇಮಿಗಳು/ದಂಪತಿಗಳ ಸಲ್ಲಾಪವೇನಾದರೂ ಕಂಡು ಬಂದಲ್ಲಿ ಧ್ವನಿವರ್ಧಕಗಳ ಮೂಲಕ ಸೂಚನೆ ನೀಡುತ್ತಾರೆ. ಇಲಾಖೆ ಜಾರಿಗೆ ತಂದ ನಿಯಮಗಳ ಬಗ್ಗೆ ತಿಳಿ ಹೇಳುತ್ತಿದ್ದಾರೆ.

ಉದ್ಯಾನದಲ್ಲಿ ಆಹಾರಕ್ಕು ಅನುಮತಿ ಇಲ್ಲ
ಉದ್ಯಾನಕ್ಕೆ ಬರುವವರು ಆಹಾರ ಪ್ಯಾಕೇಟ್ ತರುತ್ತಾರೆ. ತಿಂದ ಬಳಿಕ ಎಲ್ಲೆಂದರಲ್ಲಿ ಬಿಸಾಡುವುದು ಜೊತೆಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಉದ್ಯಾನದ ಒಳಗೆ ಆಹಾರವನ್ನು ಅನುಮತಿಸಲಾಗುತ್ತಿಲ್ಲ. ಫೋಟೋಗಳು ಮತ್ತು ವೀಡಿಯೊ ಮಾಡುವುದು ಹಾಗೂ ಕ್ರೀಡೆಗಳನ್ನು ನಿಷೇಧಿಸಲಾಗಿದೆ.
ಈ ಮೊದಲು ಉದ್ಯಾನಕ್ಕೆ ಹಾಕಿದ್ದ ತಂತಿ ಬೇಲಿ ದಾಟಿಕೊಂಡು ಎಲ್ಲಿಂದ ಬೇಕೋ ಅಲ್ಲಿಂದ ಒಳಗೆ ಜನ ನುಗ್ಗುತ್ತಿದ್ದರು. ಕೆಲವು ದಿನಗಳ ಹಿಂದೆ ಸೂಕ್ತ ಬೇಲಿ ಹಾಕಲಾಗಿದೆ. ಅಲ್ಲದೇ ಈ ಹೊಸ ನಿಯಮಗಳ ಜಾರಿ, ನಿಷೇಧದಿಂದಾಗಿ ವಾಯು ವಿಹಾರಕ್ಕೆ ಸೂಕ್ತ ತಾವರಣ ಲಭ್ಯವಾಗಲಿದೆ. ಮಕ್ಕಳ ಸ್ನೇಹಿ ವಾತಾವರಣ ಇಲ್ಲಿ ಕಂಡು ಬರುತ್ತದೆ. ಉದ್ಯಾನವನ ಹಾಳಾಗದಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ.
ಅಧಿಕಾರಿಗಳು ಹೇಳಿದ್ದೇನು?
ಈ ಕುರಿತು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಪ್ರತಿಕ್ರಿಯಿಸಿ, ಇಲಾಖೆ ಹಲವು ಕುಟುಂಬಗಳಿಂದ ದೂರುಗಳನ್ನು ಸ್ವೀಕರಿಸಿದೆ. ದಂಪತಿ/ಪ್ರೇಮಿಗಳು ಪೊದೆಗಳ ಹಿಂದೆ ಅಡಗಿಕೊಳ್ಳುವುದುದ ಅಸಭ್ಯ ವರ್ತನೆ ಎಂಬುದರ ಜೊತೆಗೆ ಅದು ಅವರಿಗೆ ಅಸುರಕ್ಷಿತ ಎನ್ನಬಹುದು. ಪೊದೆಗಳ ಹಿಂದೆ ಹಾವುಗಳು, ಚೇಳು ಇನ್ನಿತರ ಕೀಟಗಳಿಂದ ಅವರಿಗೇ ತೊಂದರೆ ಆಗುತ್ತದೆ. ಕೆಲವೊಮ್ಮೆ ಜೀವಕ್ಕೆ ಕುತ್ತು ಬರಬಹುದು.
ಇದೆಲ್ಲ ಕಾರಣಗಳಿಂದ ಜನರು ಹಾಗೂ ಉದ್ಯಾನದ ಹಿತಾಸಕ್ತಿ ಸಲುವಾಗಿ ಈ ನಿಯಮ ಜಾರಿಗೆ ತಂದಿದ್ದೇವೆ. ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿ ಧ್ವನಿ ವರ್ಧಕ ಬಳಸಿ ಎಚ್ಚರಿಸುವುದು ಯಾರಿಗೂ ತೊಂದರೆ ಮಾಡಲು ಅಲ್ಲ. ಕೇವಲ ಪ್ರೇಮಿಗಳ ಸುರಕ್ಷತೆಗೆ ಮಾತ್ರವಲ್ಲ. ಸಾರ್ವಜನಿಕರು ಮತ್ತು ಉದ್ಯಾನದ ಮೇಲಿನ ಕಾಳಜಿಯಿಂದ ಎಂದು ಅವರು ಹೇಳಿದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications