Bengaluru Crime: ನಗರದಲ್ಲಿ ಒಂದೇ ರಾತ್ರಿ ಸರಣಿ ಕೊಲೆ: ಬೆಚ್ಚಿ ಬಿದ್ದ ಬೆಂಗಳೂರು

Bengaluru Crime: ನಗರದಲ್ಲಿ ಒಂದೇ ರಾತ್ರಿ ಮೂರು ಕೊಲೆ ನಡೆದಿದ್ದು ಬೆಂಗಳೂರು ಬೆಚ್ಚಿಬಿದ್ದಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಪ್ರತ್ಯೇಕ ಭಾಗಗಳಲ್ಲಿ ಮೇ 24ರ ಭಾನುವಾರ ರಾತ್ರಿ ಒಂದೇ ದಿನ ಮೂರು ಕೊಲೆಗಳಾಗಿದ್ದು, ಆಟೋ ಚಾಲಕರಿಬ್ಬರು ಹಾಗೂ ವೃದ್ಧರೊಬ್ಬರನ್ನು ಕೊಲೆ ಮಾಡಲಾಗಿದೆ. ಮದ್ಯದ ಅಮಲಿನ ಜಗಳದಲ್ಲಿ ಪರಿಚಯಸ್ಥರಿಂದಲೇ ವೃದ್ಧನ ಮೇಲೆ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ಭಾನುವಾರ ರಾತ್ರಿ ಕುಂದಲಹಳ್ಳಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಹಬೂಬ್ ಬಾಷಾ (59) ಕೊಲೆಯಾದವರು, ಕೊಲೆ ಆರೋಪಿ ಸುಂದರ ಮೂರ್ತಿ (26) ಎನ್ನುವ ಆರೋಪಿಯನ್ನು ಬಂಧಿಸಿರುವ ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿದ್ದಾರೆ.

ಬೆಂಗಳೂರಿನ ಕುಂದಲಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಮೆಹಬೂಬ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಮದ್ಯವ್ಯಸನಿಯಾಗಿದ್ದ ಮೆಹಬೂಬ್ ಗಾರೆ ಕೆಲಸ ಮಾಡಿಕೊಂಡಿದ್ದರು. ಭಾನುವಾರ ರಾತ್ರಿ ಮನೆ ಸಮೀಪ ಬಿದ್ದು ಮೃತಪಟ್ಟಿದ್ದಾರೆ ಎಂದೇ ಮೊದಲು ಹೇಳಲಾಗಿತ್ತು. ಯಾರೂ ಸಹ ಇವರನ್ನು ಕೊಲೆ ಮಾಡಲಾಗಿದೆ ಎಂದುಕೊಂಡಿರಲಿಲ್ಲ. ರಾಮಮೂರ್ತಿನಗರದಲ್ಲಿ ನೆಲೆಸಿರುವ ಅವರ ಮಗಳು ಸಹ ತಂದೆಯ ಮದ್ಯವ್ಯಸನದ ಬಗ್ಗೆ ಉಲ್ಲೇಖಿಸಿ ದೂರು ಕೊಟ್ಟಿದ್ದರು. ಅಲ್ಲದೆ ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಾರಂಭಿಕವಾಗಿ ಬೆಂಗಳೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದರು.

Bengaluru Crime

ತನಿಖೆಯಲ್ಲಿ ಸತ್ಯಾಂಶ ಬೆಳಕಿಗೆ

ಪೊಲೀಸರು ಮೆಹಬೂಬ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ಘಟನಾ ಸ್ಥಳದ ಸಮೀಪದಲ್ಲಿದ್ದ ಇಬ್ಬರು ಕಾರ್ಮಿಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಮೆಹಬೂಬ್ ತಲೆಗೆ ಕಟ್ಟಿಗೆಯಿಂದ ಹಲ್ಲೆ ಮಾಡಿ ಸುಂದರ ಮೂರ್ತಿ ಎನ್ನುವ ವ್ಯಕ್ತಿ ಕೊಲೆ ಮಾಡಿದ್ದಾನೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ರಸ್ತೆ ಬದಿ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ; ಸಿಸಿಟಿವಿಯಲ್ಲಿ ವಿಕೃತನ ಕೃತ್ಯ ಸೆರೆ
ಬೆಂಗಳೂರಿನಲ್ಲಿ ರಸ್ತೆ ಬದಿ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ; ಸಿಸಿಟಿವಿಯಲ್ಲಿ ವಿಕೃತನ ಕೃತ್ಯ ಸೆರೆ

ಸಿಗರೇಟ್ ಹೊಗೆ ಕಾರಣಕ್ಕೆ ಆಟೋ ಚಾಲಕನ ಹತ್ಯೆ

ಸಿಗರೇಟ್ ಹೊಗೆ ಬಿಟ್ಟಿದ್ದನ್ನು ಪ್ರಶ್ನೆ ಮಾಡಿದ ಒಂದೇ ಕಾರಣಕ್ಕೆ ದುಷ್ಕರ್ಮಿಯೊಬ್ಬ ಆಟೋ ಚಾಲಕನಿಗೆ ಹ್ಯಾಗರ್‌ನಿಂದ ಇರಿದು ಕೊಲೆಗೈದಿರುವ ಘಟನೆ ಚಿಕ್ಕಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ರಜಾಕ್‌ ಪಾಳ್ಯದ ಸೈಯದ್ ಶಫಿ (36) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ದರ್ಶನ್ ಎಂಬುವನನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಪ್ರತ್ಯೇಕವಾಗಿದ್ದ ಶಫಿ, ಯಶವಂತಪುರದ ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದು ಗ್ಯಾರೇಜ್‌ನಲ್ಲಿ ಟಿಂಕರಿಂಗ್ ಕೆಲಸ ಮಾಡಿಕೊಂಡಿದ್ದ.

ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ, ಲಾಕಪ್ ಡೆತ್ ಪ್ರಕರಣಗಳಿಗೆ ಬ್ರೇಕ್: ಕರ್ನಾಟಕದಲ್ಲಿ ಖಡಕ್‌ ನಿಯಮ ಜಾರಿ
ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ, ಲಾಕಪ್ ಡೆತ್ ಪ್ರಕರಣಗಳಿಗೆ ಬ್ರೇಕ್: ಕರ್ನಾಟಕದಲ್ಲಿ ಖಡಕ್‌ ನಿಯಮ ಜಾರಿ

ಬಿಡುವಿನ ಸಮಯದಲ್ಲಿ ಕೆಲಸ ಆಟೋ ಚಾಲನೆ ಮಾಡುತ್ತಿದ್ದ ಭಾನುವಾರ ರಾತ್ರಿ ಅಬ್ಬಿಗೆರೆ ಮುಖ್ಯರಸ್ತೆಯಲ್ಲಿನ ಬಾರ್‌ನಲ್ಲಿ ಮದ್ಯ ಖರೀದಿಸಿ ಮುಂಭಾಗವೇ ಆಟೊನಿಲ್ಲಿಸಿಕೊಂಡು ಕುಡಿಯುತ್ತಿದ್ದ, ಇದೇ ಸಮಯದಲ್ಲಿ ಬಾರ್‌ನಿಂದ ಹೊರಗೆ ಬಂದಿದ್ದ ಶಫಿ ಆಟೋ ಪಕ್ಕವೇ ಮೂತ್ರ ವಿಸರ್ಜನೆ ಮಾಡಿ ಸಿಗರೇಟ್ ಹೊಗೆ ಬಿಟ್ಟಿದ್ದು ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಅಮಲಿನಲ್ಲಿದ್ದ ದರ್ಶನ್ ಡ್ಯಾಗರ್ ಹಲವು ಬಾರಿ ಶಫಿ ಎದೆ ಹಾಗೂ ಕುತ್ತಿಗೆಗೆ ಇರಿದು ಪರಾರಿಯಾಗಿದ್ದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಫಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+