ರಾಹು ಸಂಕ್ರಮಣದಿಂದ ಈ ರಾಶಿಯವರಿಗೆ ಸೋಲು : ಹೆಚ್ಚುವುದು ಮಾನಸಿಕ ಒತ್ತಡ, ದುಡ್ಡಿಗೆ ಕಷ್ಟ

ಹಠಾತ್ ಬದಲಾವಣೆಗೆ ಕಾರಣವಾದ ರಾಹು ತನ್ನ ಪಥವನ್ನು ಬದಲಾಯಿಸುವ ಹಂತದಲ್ಲಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ರಾಹು ಮೇ 31, 2026 ರಂದು ಶತಭಿಷ ನಕ್ಷತ್ರದ ಮೊದಲ ಪಾದಕ್ಕೆ ಸಂಚರಿಸುತ್ತಾನೆ. ಆಗಸ್ಟ್ 1 ರವರೆಗೆ ಇದೇ ಸ್ಥಾನದಲ್ಲಿರುತ್ತಾನೆ. ಮರುದಿನ, ಧನಿಷ್ಠ ನಕ್ಷತ್ರದ ನಾಲ್ಕನೇ ಪಾದಕ್ಕೆ ಪ್ರವೇಶಿಸುತ್ತಾನೆ. ರಾಹು ಸ್ವತಃ ಧನಿಷ್ಠ ನಕ್ಷತ್ರದ ಅಧಿಪತಿ. ಹಾಗಾಗಿ ಈ ಬದಲಾವಣೆಯನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ. ರಾಹುವಿನ ಈ ಸಂಚಾರವು ಎಲ್ಲಾ ರಾಶಿಯವರ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ. ಆದರೂ, ಮೇಷ ರಾಶಿ ಸೇರಿದಂತೆ ನಾಲ್ಕು ರಾಶಿಸ್ವಲ್ಪ ಹೆಚ್ಚೇ ಹಾನಿಕಾರಕವಾಗಿರಲಿದೆ. ರಾಹುವಿನ ನಕ್ಷತ್ರದ ಈ ಬದಲಾವಣೆಯು ಈ ರಾಶಿಯವರಿಗೆ ವಿವಿಧ ನಷ್ಟಗಳನ್ನು ಉಂಟುಮಾಡಬಹುದು.

ಈ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು:

ಮೇಷ ರಾಶಿ:

ರಾಹುವಿನ ಈ ನಕ್ಷತ್ರ ಸಂಕ್ರಮಣ ಮೇಷ ರಾಶಿಯವರಿಗೆ ಒಳ್ಳೆಯದಲ್ಲ. ಈ ಸಂಚಾರದ ಸಮಯದಲ್ಲಿ ಕೌಟುಂಬಿಕ ಒತ್ತಡವನ್ನು ಅನುಭವಿಸುವಿರಿ. ವಿವಾಹಿತರಾಗಿದ್ದರೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಮೂಡಬಹುದು. ಉದ್ಯಮಿಗಳು ಆರ್ಥಿಕ ತೊಂದರೆಗಳನ್ನು ಎದುರಿಸಬಹುದು. ರಾಹುವಿನ ನಕ್ಷತ್ರ ಬದಲಾವಣೆ ಸಮಯದಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

Rahu Transit 2026

ಕರ್ಕಾಟಕ ರಾಶಿ:

ಉದ್ಯೋಗದಲ್ಲಿರುವವರಿಗೆ ರಾಹುವಿನ ಈ ಸಂಚಾರವು ಹಾನಿಕಾರಕವಾಗಬಹುದು. ಈ ಸಮಯದಲ್ಲಿ ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ವಿವಾದಗಳು ಉಂಟಾಗಬಹುದು. ಆಸ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ಅಡಚಣೆ ಉಂಟಾಗಬಹುದು. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಅಪಘಾತ ಸಂಭವಿಸುವ ಸಾಧ್ಯತೆಯಿರುವುದರಿಂದ ಎಚ್ಚರಿಕೆಯಿಂದ ಪ್ರಯಾಣ ಮಾಡುವುದು ಸೂಕ್ತ. ಉದ್ಯಮಿಗಳ ದೈನಂದಿನ ಆದಾಯದಲ್ಲಿ ತೊಡಕು ಉಂಟಾಗಬಹುದು.

ಸೂರ್ಯನ ನಕ್ಷತ್ರಕ್ಕೆ ಚಂದ್ರನ ಸಂಕ್ರಮಣ: ಇಂದಿನಿಂದ ಈ ರಾಶಿಯವರಿಗೆ ಧನ ಲಾಭ, ಹೆಚ್ಚುವುದು ಸಿರಿ ಸಂಪತ್ತು
ಸೂರ್ಯನ ನಕ್ಷತ್ರಕ್ಕೆ ಚಂದ್ರನ ಸಂಕ್ರಮಣ: ಇಂದಿನಿಂದ ಈ ರಾಶಿಯವರಿಗೆ ಧನ ಲಾಭ, ಹೆಚ್ಚುವುದು ಸಿರಿ ಸಂಪತ್ತು

ಸಿಂಹ ರಾಶಿ:

ರಾಹುವಿನ ನಕ್ಷತ್ರ ಸಂಕ್ರಮಣದ ಸಮಯದಲ್ಲಿ ಸಿಂಹ ರಾಶಿಯವರು ವಿಶೇಷವಾಗಿ ಜಾಗರೂಕರಾಗಿರಬೇಕು. ವ್ಯವಹಾರದಲ್ಲಿ ಆರ್ಥಿಕ ನಷ್ಟದ ಸೂಚನೆ ಇದೆ. ತಂದೆಯೊಂದಿಗಿನ ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ವೃತ್ತಿ ಬದಲಾವಣೆಗೆ ಇದು ಅನುಕೂಲಕರ ಸಮಯವಲ್ಲ. ತಮ್ಮ ಮಕ್ಕಳ ವಿಚಾರದಲ್ಲಿ ಆತಂಕ ಹೆಚ್ಚಾಗಬಹುದು.

ಎಷ್ಟೇ ದುಡಿದರೂ ಹಣ ಉಳಿಯುತ್ತಿಲ್ಲವೇ? ಈ 6 ವಾಸ್ತು ನಿಯಮಗಳನ್ನು ಪಾಲಿಸಿದರೆ ಧನಸಂಪತ್ತು ಹೆಚ್ಚುತ್ತದೆ
ಎಷ್ಟೇ ದುಡಿದರೂ ಹಣ ಉಳಿಯುತ್ತಿಲ್ಲವೇ? ಈ 6 ವಾಸ್ತು ನಿಯಮಗಳನ್ನು ಪಾಲಿಸಿದರೆ ಧನಸಂಪತ್ತು ಹೆಚ್ಚುತ್ತದೆ

ವೃಶ್ಚಿಕ ರಾಶಿ:

ರಾಹುವಿನ ನಕ್ಷತ್ರ ಪರಿವರ್ತನೆ ನಿಮ್ಮ ವೃತ್ತಿಜೀವನಕ್ಕೆ ಒಳ್ಳೆಯದಲ್ಲ. ಈ ಸಮಯದಲ್ಲಿ ಪ್ರಮುಖ ಬದಲಾವಣೆಗಳಾಗುವುದು. ಇದು ಹಾನಿಕಾರಕವಾಗಿರಬಹುದು. ಕೆಲಸದ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಒತ್ತಡ ಹೆಚ್ಚಾಗಬಹುದು. ನಿಮ್ಮ ಸ್ಥಾನಕ್ಕೆ ಕುತ್ತು ಬರಬಹುದು. ವ್ಯವಹಾರದಲ್ಲಿ ಆರ್ಥಿಕ ನಷ್ಟ ಎದುರಾಗುವುದು.ಯಾವುದೇ ಪ್ರಮುಖ ಹೂಡಿಕೆಗಳನ್ನು ಮುಂದೂಡುವುದು ಜಾಣತನ. ಈ ಸಮಯದಲ್ಲಿ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+