ಬೆಂಗಳೂರು ತುಂಬಾ ಇಷ್ಟ; ಈ ವಿಷಯಗಳು ಕಷ್ಟ ಎಂದ ನಾರ್ಥಿ ಯುವತಿ: ನಿಮಗೆ ಸಂಬಳ ಸಾಕಾಗ್ತಿದ್ಯಾ ಪ್ರಶ್ನೆ; ನೆಟ್ಟಿಗರ ರಿಯಾಕ್ಷನ್
ಬೆಂಗಳೂರು ಭಾರತದ ಮನೆಯ ಮುದ್ದಿನ ಮಗನಂತೆ ಎಲ್ಲರಿಗೂ ಆಪ್ತವೇ. ದಕ್ಷಿಣ ಭಾರತದ ರಾಜ್ಯಗಳಲ್ಲಿ, ಉತ್ತರ ಭಾರತದಲ್ಲಿರುವವರು ಇಲ್ಲಿಗೆ ನಿರಂತರವಾಗಿ ವಲಸೆ ಬರುವುದು ಮುಂದುವರಿದಿದೆ. ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯದ ಕಾರಣಕ್ಕೆ ಇಲ್ಲಿಗೆ ಬರುವ ಜನರ ಸಂಖ್ಯೆ ಮುಂದುವರಿದಿದೆ. ಆದರೆ, ಬೆಂಗಳೂರು ನಿಧಾನವಾಗಿ ದುಬಾರಿ ಹಾಗೂ ಕೆಲವು ನಿರ್ದಿಷ್ಟ ವಿಷಯಗಳನ್ನು ಮ್ಯಾನೇಜ್ ಮಾಡುವುದು ದುಬಾರಿ ಹಾಗೂ ಕಷ್ಟವಾಗಿ ಬದಲಾಗುತ್ತಿದೆ ಅಂತ ಯುವತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಅಂದ್ರೆ ನಂಗೆ ಇಷ್ಟ ಆದರೆ ಇಲ್ಲಿನ ಖರ್ಚು ತುಂಬಾ ಕಷ್ಟ, ಉತ್ತಮ ಸಂಬಳವಿದ್ದರೂ, ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲ ಎಂದು ನಾರ್ಥಿಯುವತಿ ಹೇಳಿದ್ದಾರೆ.
ಬೆಂಗಳೂರು ನಗರದ ಜೀವನ ಶೈಲಿ, ಬಾಡಿಗೆ ಮನೆ ಹಾಗೂ ವೆಚ್ಚಕ್ಕೂ ಸಂಬಳಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಉತ್ತಮ ಮನೆ ಹುಡುಕುವುದೇ ದೊಡ್ಡ ಸವಾಲು ಅಂತ ನಾರ್ಥಿ ಯುವತಿ Aayushiii (@stfu_aayushiii) ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಯುಷಿ ಅವರ ಪ್ರಕಾರ, ಬೆಂಗಳೂರು ನಿಧಾನವಾಗಿ ಉತ್ತಮ ಉದ್ಯೋಗ ಸಿಕ್ಕರೂ ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲದ ನಗರವಾಗಿ ಬದಲಾಗುತ್ತಿದೆ. ಒಂದು ಒಳ್ಳೆಯ 2BHK ಬಾಡಿಗೆ 40,000 ದಿಂದ 50,000 ರೂ. ವರೆಗೆ ಖರ್ಚಾಗಬಹುದು. ಅದಲ್ಲದೆ ಮನೆಯ ನಿರ್ವಹಣೆ, ದಿನಸಿ, ವಿದ್ಯುತ್, ಪ್ರಯಾಣ ಬೆಲೆ ಇತ್ಯಾದಿಗಳನ್ನು ಸೇರಿಸಿ, ಇದ್ದಕ್ಕಿದ್ದಂತೆ ನಿಮ್ಮ ಸಂಬಳದ ದೊಡ್ಡ ಭಾಗವು ಮಾಯವಾಗುತ್ತದೆ. ಇದರ ಹೊರತಾಗಿಯೂ ನಿರಾಶಾದಾಯಕ ವಿಷಯವೇನು ಗೊತ್ತಾ, ಜನರು ಉತ್ತಮ ಅವಕಾಶಗಳಿಗಾಗಿ ಬೆಂಗಳೂರಿಗೆ ತೆರಳುತ್ತಾರೆ, ಆದರೆ ಅವರು ಗಳಿಸಿದ ಹಣದ ಬಹುಭಾಗವನ್ನು ಆ ಅವಕಾಶಗಳಿಗೆ ಇಲ್ಲಿ ವಾಸಿಸಲು ಮಾತ್ರ ಖರ್ಚು ಮಾಡುತ್ತಾರೆ.
ನನಗೆ ಈ ನಗರ ತುಂಬಾ ಇಷ್ಟ. ಹವಾಮಾನ, ಜನರು, ಅವಕಾಶಗಳು, ಸ್ವಾತಂತ್ರ್ಯ. ಆದರೆ ಎಲ್ಲೋ, ಇಲ್ಲಿ ಸರಳವಾಗಿ ಇರುವ ವೆಚ್ಚವು ಹಾಸ್ಯಾಸ್ಪದವಾಗಿದೆ. ಬೆಂಗಳೂರು ಯುವಕರು ತಮ್ಮ ಭವಿಷ್ಯವನ್ನು ನಿರ್ಮಿಸಲು ಬಂದ ನಗರವಾಗಬೇಕಿತ್ತು. ಅವರು ಈಗಾಗಲೇ ಅದನ್ನು ಮಾಡಿದ ನಂತರ ಮಾತ್ರ ಅವರು ಭರಿಸಬಹುದಾದ ನಗರವಾಗಬಾರದು. ನಿಜವಾಗಿಯೂ ಕುತೂಹಲವಿದೆ, ನಿಮ್ಮ ಮಾಸಿಕ ಸಂಬಳದಲ್ಲಿ ಎಷ್ಟು ಬೆಂಗಳೂರಿನಲ್ಲಿ ಬಾಡಿಗೆಗೆ ಹೋಗುತ್ತದೆ ಅಂತ ಕೇಳಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಏನು ?
ಇನ್ನು ಬೆಂಗಳೂರಿನ ಜೀವನ ಶೈಲಿಯ ಬಗ್ಗೆ ಯುವತಿಯ ಪ್ರಶ್ನೆಗೆ ನೆಟ್ಟಿಗರಿಂದ ಉತ್ತಮ ರೆಸ್ಪಾನ್ಸ್ ಬಂದಿದೆ. ಭಾರ್ಗವ್ ಎನ್ನುವವರು ನನ್ನ ಅಭಿಪ್ರಾಯ ಬೇರೆ. 6 ವರ್ಷಗಳ ಹಿಂದೆ ಸಾಲ ತೆಗೆದುಕೊಂಡು, ಅಪಾರ್ಟ್ಮೆಂಟ್ ಅನ್ನು ಗುತ್ತಿಗೆಗೆ ತೆಗೆದುಕೊಂಡು, ಬ್ಯಾಂಕಿಗೆ ಬಾಡಿಗೆಗಿಂತ ಕಡಿಮೆ ಪಾವತಿಸಿ, 3 ವರ್ಷಗಳಲ್ಲಿ ಸಾಲ ಮುಕ್ತನಾದೆ. ಈಗ ನಾನು ಅಪಾರ್ಟ್ಮೆಂಟ್ ಖಾಲಿ ಮಾಡಿದಾಗ, ನನಗೆ ಸಂಪೂರ್ಣ ಮೊತ್ತ ಹಿಂತಿರುಗುತ್ತಿದೆ.
ನಾನು ನಿರ್ವಹಣಾ ಶುಲ್ಕವಾಗಿ ತಿಂಗಳಿಗೆ 3 ಸಾವಿರ ಮಾತ್ರ ಪಾವತಿಸುತ್ತೇನೆ. ನಾನು ನಗರದ ದಕ್ಷಿಣ ಭಾಗದಲ್ಲಿದ್ದು, ಪ್ರಯಾಣಕ್ಕೆ ಹೆಚ್ಚು ಸಮಯ ಬೇಕು ಅಂತ ಹೇಳಿದ್ದಾರೆ. ನೀವು ಮುಂಬೈಗೆ ಬಂದು ಇಲ್ಲಿನ ಬಾಡಿಗೆಯನ್ನು ನೋಡಬೇಕು. ಅದೇ 2 BHK ಬೆಲೆ 70-80 ಸಾವಿರ ಆಗುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications
