ಬೆಂಗಳೂರಿನ ಈ ಅಂಡರ್‌ಪಾಸ್‌ ವಾಹನ ಸಂಚಾರಕ್ಕೆ ಯೋಗ್ಯವಲ್ಲ: ಪಾಲಿಕೆ ಅಲರ್ಟ್‌

ಬೆಂಗಳೂರು: ಮಳೆಗಾಲ ಶುರುವಾಗಿದ್ದು, ಪ್ರತಿ ಭಾರಿಯ ಜೋರು ಮಳೆಗೆ ಬೆಂಗಳೂರು ಅಕ್ಷರಶಃ ನಲುಗುತ್ತದೆ. ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವರ್ಷಗಳ ಹಿಂದೆ ರಸ್ತೆ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಕೆಲವರು ಜೀವ ಕಳೆದುಕೊಂಡಿದ್ದರು. ಈ ನಿಟ್ಟಿನಲ್ಲಿ ಎಚ್ಚೆತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೈಗೊಂಡ 'ಎಚ್ಚರಿಕೆ ಬೋರ್ಡ್' ಕ್ರಮಕ್ಕೆ ಸಾರ್ವಜನಿಕರಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಮಳೆ ಬಂದರೆ ರಸ್ತೆಗಳ ಮೇಲೆ ನಿಲ್ಲುವ ನೀರು ಮೊದಲು ಒಳಚರಂಡಿ ಅಥವಾ ರಸ್ತೆ ಅಂಡರ್‌ಪಾಸ್ ಸೇರುತ್ತದೆ. ಸರಾಗವಾಗಿ ಹರಿಯದೇ ನೀರು ನಿಂತಲ್ಲಿ ವಾಹನ ಸವಾರರು ಸಂಚರಿಸುವಾಗ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ಉತ್ತರ ನಗರ ಪಾಲಿಕೆಯು ಪ್ರಮುಖ ರಸ್ತೆ ಅಂಡರ್‌ಪಾಸ್‌ನಲ್ಲಿ ಎಚ್ಚರಿಕೆ ಕ್ರಮ ವಹಿಸಿದೆ. ವಾಹನ ಸವಾರರಿಗೆ ಸೂಕ್ತ ಮಾರ್ಗದರ್ಶನ ಮಾಡಿದೆ.

Bengaluru Civic Body

ಈ ಪಾದಾಚಾರಿ ಕೆಳಸೇತುವೆ ಸಂಚಾರಕ್ಕೆ ಯೋಗ್ಯವಲ್ಲ

ಬೆಂಗಳೂರು ನ್ಯಾಯಾಂಗ ಬಡಾವಣೆಯಲ್ಲಿರುವ ರೈಲ್ವೆ ಅಂಡರ್‌ಪಾಸ್ ನಲ್ಲಿ ಈ ಮಾರ್ಗದರ್ಶನ ನಾಮಫಲಕ ಹಾಕಲಾಗಿದೆ. ಇದರಿಂದ ಪ್ರಯಾಣಿಕರು, ವಾಹನ ಸವಾರರಿಗೆ ಸಂಭಾವ್ಯ ಸಮಸ್ಯೆ ತಪ್ಪಲಿದೆ.

Bengaluru Rain: ಬೆಂಗಳೂರು ಹವಾಮಾನ ಮುನ್ಸೂಚನೆ ಹೀಗಿದೆ
Bengaluru Rain: ಬೆಂಗಳೂರು ಹವಾಮಾನ ಮುನ್ಸೂಚನೆ ಹೀಗಿದೆ

'ವಿಶೇಷ ಸೂಚನೆ, ನೀರಿನಮಟ್ಟವು ನಿಗದಿತ ಅಪಾಯ ಮಟ್ಟವನ್ನು ತಲುಪಿದಾಗ, ಈ ಕೆಳಸೇತುವೆಯು ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಯೋಗ್ಯವಲ್ಲ' ಎಂದು ಪಾಲಿಕೆ ಆಯುಕ್ತ ಸೂಚನೆ ಮೇರೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಬರೆಯಲಾಗಿದೆ. ಇದರೊಂದಿಗೆ ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಲಾಗಿದೆ.

ಅಷ್ಟು ಮಾತ್ರವಲ್ಲದೇ ಅಂಡರ್‌ಪಾಸ್‌ನಲ್ಲಿ ಎಷ್ಟು ಅಡಿ ನೀರು ನಿಂತಿದೆ ಎಂದು ಸಾರ್ವಜನಿಕರಿಗೆ ತಿಳಿಯಲು ಒಟ್ಟು 4 ಅಡಿಯವರೆಗೆ ಗುರುತು ಹಾಕಲಾಗಿದೆ. ಇದರಿಂದ ಈ ಅಂಡರ್‌ಪಾಸ್ ಮಾರ್ಗವಾಗಿ ಸಂಚರಿಸಬೇಕೋ, ಬೇಡವೋ ಎಂದು ಜನರಿಗೆ ತಿಳಿಯುತ್ತದೆ.

ಪಾಲಿಕೆ ಕೆಲಸಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ

ಪಾಲಿಕೆ ಹಾಕಿದ ಬೋರ್ಡ್‌ನಲ್ಲಿ ಆದ ಸಣ್ಣಪುಟ್ಟ ತಪ್ಪುಗಳನ್ನು ಕಂಡು ಹಿಡಿದು ನೆಟ್ಟಿಗರು ಸಲಹೆ ನಿಡಿದ್ದಾರೆ. 'ಅಪಾಯದ (ಡೇಂಜರ್) ಚಿಹ್ನೆಯನ್ನು 3 ಅಡಿ ಸುತ್ತಲೂ ಬರೆಯಬೇಕು. ಆದರೆ ಇಲ್ಲಿ ಬಾಣದ ಗುರುತು 2 ಅಡಿ ಕಡೆಗೆ ಬರೆಯಲಾಗಿದೆ. ಏಕೆಂದರೆ ಸ್ವಲ್ಪ ಮಳೆ ಬಂದರೂ ಅಂಡರ್‌ಪಾಸ್ ಮುಳುಗಿಸಿದರೆ ಚಿಹ್ನೆ ಜನರಿಗೆ ಕಾಣುವುದಿಲ್ಲ' ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.

'ಪ್ರವಾಹ ಸಂದರ್ಭದಲ್ಲಿ ಸುರಕ್ಷತೆಗಾಗಿ ಕೊನೆಗೂ ಪರಿಹಾರ ಕಂಡು ಹಿಡಿಯಲಾಗಿದೆ. ಆದರೆ ಅಂಡರ್‌ಪಾಸ್ ನೀರಿನಲ್ಲಿ ಮುಳುಗಿದಾಗ ಜನರು ಇದನ್ನು ಓದಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ ಎಂದು ಪಾಲಿಕೆ ನಿರೀಕ್ಷಿಸುತ್ತದೆ' ಎಂದು ಎರಡನೇ ಬಳಕೆದಾರರು ತಿಳಿಸಿದ್ದಾರೆ. 'ಬೋರ್ಡ್‌ನಲ್ಲಿ ತುರ್ತು ಸಹಾಯವಾಣಿ ಸಂಖ್ಯೆಗಳು ತೀರಾ ಕೆಳಗಿವೆ. ಕಡಿಮೆ ನೀರಿನಲ್ಲಿ ಈ ಸಂಖ್ಯೆಗಳು ಮುಳುಗಿ ಕಾಣದಂತಾದರೆ, ಸಂಚರಿಸುವಾಗ ಅಡಚಣೆ ಉಂಟಾಗುತ್ತದೆ. ಅದನ್ನು ಮೇಲೆ ಹಾಕಬಹುದಿತ್ತು. ಇದು ನಿಜವಾದ ಸುರಕ್ಷತೆ ಅಲ್ಲ' ಅಂತಲೂ ಇನ್ನೊಬ್ಬರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+