ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ತಡರಾತ್ರಿ ಧಾರಾಕಾರ ಮಳೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 01 : ಬೆಂಗಳೂರು ನಗರದಲ್ಲಿ ಉಷ್ಣತೆ ಹೆಚ್ಚಾದ ಕಾರಣ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಒಟ್ಟು 72 ಮಿ.ಮೀ ಮಳೆಯಾಗಿದ್ದು, ಉಷ್ಣತೆ ಹೆಚ್ಚಾದರೆ ಇಂದು ಮಳೆಯಾಗುವ ಸಾಧ್ಯತೆ ಇದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ 11ಗಂಟೆ ಸಮಾರಿಗೆ ಸಣ್ಣಗೆ ಮಳೆ ಆರಂಭವಾಗಿತ್ತು. ನಂತರ ಗುಡುಗು, ಸಿಡಿಲು ಸಹಿತ ತಡರಾತ್ರಿ ತನಕ ಮಳೆ ಅಬ್ಬರಿಸಿದೆ. ರಸ್ತೆಗಳಲ್ಲಿ ತುಂಬಿದ್ದ ನೀರು ಮುಂಜಾನೆಯ ತನಕ ಹರಿದು ಹೋಗುತ್ತಿತ್ತು.

ಬೆಂಗಳೂರಿಗರಿಗಿದು ಮರೆಯಲಾಗದ ಆಗಸ್ಟ್ ತಿಂಗಳು!ಬೆಂಗಳೂರಿಗರಿಗಿದು ಮರೆಯಲಾಗದ ಆಗಸ್ಟ್ ತಿಂಗಳು!

 Bengaluru city receives 72 mm rainfall

ಶಿವಾನಂದ ಸರ್ಕಲ್ ಬಳಿಕ ಅಂಡರ್ ಪಾಸ್‌ನಲ್ಲಿ ಆಡಿ ಕಾರು ನೀರಿನಲ್ಲಿ ಮುಳುಗಡೆಯಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರುನ್ನು ತೆರವುಗೊಳಿಸಿದರು. ಶಾಂತಿ ನಗರ, ಜಯನಗರ, ಬಸವನಗುಡಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಭಾರೀ ಮಳೆ ಸುರಿದಿದೆ.

 Bengaluru city receives 72 mm rainfall

ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿ 40 ಮನೆಗಳನ್ನು ಹೊಂದಿದ್ದ ಅಪಾರ್ಟ್‌ಮೆಂಟ್‌ನ ಕೆಳಮಹಡಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನೀರು ಹೊರಹೋಗಲು ಅನುಕೂಲ ಮಾಡಿಕೊಟ್ಟು ಜನರ ಸಂಕಷ್ಟ ದೂರ ಮಾಡಿದರು.

ಕೊಡಗಿನಲ್ಲಿ ಕಳಪೆ ಕಾಮಗಾರಿ ಬಯಲು ಮಾಡಿದ ಮಳೆ!ಕೊಡಗಿನಲ್ಲಿ ಕಳಪೆ ಕಾಮಗಾರಿ ಬಯಲು ಮಾಡಿದ ಮಳೆ!

'ವಾತಾವರಣದಲ್ಲಿ ಉಷ್ಣತೆ ಹೆಚ್ಚಾದ ಪರಿಣಾಮ ನಗರದಲ್ಲಿ ಮಳೆಯಾಗಿದೆ. ನಗರದಲ್ಲಿ 72 ಮಿ.ಮೀ.ಮಳೆಯಾಗಿದೆ. ಉಷ್ಣಾಂಶ ಹೆಚ್ಚಾದರೆ ಮತ್ತೆ ಮಳೆಯಾಗಲಿದೆ' ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.

English summary
Bengaluru city received 72 mm rainfall on August 31, 2017. Heavy rains lashed several parts of the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X