ಗ್ರಾಮ ಪಂಚಾಯಿತಿ ಚುನಾವಣೆ : 202 ಮತಗಟ್ಟೆಗಳು ಅತಿಸೂಕ್ಷ್ಮ

ಬೆಂಗಳೂರು, ಜೂ. 01 : ಬೆಂಗಳೂರು ನಗರ ಜಿಲ್ಲೆಯ 93 ಗ್ರಾಮ ಪಂಚಾಯಿತಿಗಳಿಗೆ ಜೂನ್ 2ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

93 ಗ್ರಾಮ ಪಂಚಾಯಿತಿಗಳ 882 ಕ್ಷೇತ್ರಗಳ 2373 ಸ್ಥಾನಗಳಲ್ಲಿ 358 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಒಟ್ಟು 5464 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚಿಕ್ಕಬಿದರಕಲ್ಲು ಗ್ರಾಮ ಪಂಚಾಯಿತಿಯ 8 ಕ್ಷೇತ್ರಗಳ ಎಲ್ಲಾ 29 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಲ್ಲಿ ಮತದಾನ ನಡೆಯುತ್ತಿಲ್ಲ. ಆನೇಕಲ್ ತಾಲ್ಲೂಕಿನ ಗುಡ್ಡನಹಳ್ಳಿ ಮತ್ತು ಭೂತಾನಹಳ್ಳಿಯಲ್ಲಿ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದ ಕಾರಣ ಮತದಾನ ನಡೆಯುತ್ತಿಲ್ಲ.

ಮತದಾರರ ಸಂಖ್ಯೆ : ಜಿಲ್ಲೆಯಲ್ಲಿ ಒಟ್ಟು 736407 ಮತದಾರರಿದ್ದು, ಅವರಲ್ಲಿ 382877 ಪುರುಷರು, 353527 ಮಹಿಳೆಯರು ಹಾಗೂ ಮೂವರು ಇತರ ಮತದಾರರಿದ್ದಾರೆ.

Bengaluru City district gram panchayat election

ಡ್ರೈಡೇ ಘೋಷಣೆ : ಮುಕ್ತ, ನ್ಯಾಯ ಹಾಗೂ ಶಾಂತಿಯುತ ಚುನಾವಣೆಗಾಗಿ ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡದಂತೆ ಜಿಲ್ಲಾಧಿಕಾರಿಗಳು, ಜೂನ್ 1ರ ಬೆಳಿಗ್ಗೆ 6 ಗಂಟೆಯಿಂದ, ಜೂನ್ 3ರ ಬೆಳಿಗ್ಗೆ 6 ಗಂಟೆವರೆಗೆ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಜೂನ್ 4ರ ಸಂಜೆ 6 ಗಂಟೆಯಿಂದ ಜೂನ್ 6ರ ಸಂಜೆ 6 ಗಂಟೆವರೆಗೆ ಬೆಂಗಳೂರು ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣಾ ವ್ಯಾಪ್ತಿಗೊಳಪಡುವ ಪ್ರದೇಶಗಳು ಹಾಗೂ ಮತ ಎಣಿಕೆ ಕೇಂದ್ರಗಳಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮದ್ಯ ಮಾರಾಟ, ಮದ್ಯ ಸರಬರಾಜು ಹಾಗೂ ಅಕ್ರಮ ಅದ್ಯ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ : ನೀತಿ ಸಂಹಿತೆ ಪಾಲನೆಗೆ ಆಯಾ ತಾಲ್ಲೂಕು ಪಂಚಾಯಿತಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ರಚಿಸಲಾಗಿರುವ ನೀತಿ ಸಂಹಿತೆ ತಂಡಗಳು ಮುನ್ನೆಚ್ಚರಿಕೆಯಿಂದ ಕ್ರಮ ಕೈಗೊಳ್ಳುತ್ತಿವೆ. ಮತಗಟ್ಟೆಗಳಿಗೆ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ವಿಡಿಯೋಗ್ರಾಫರ್‍ಗಳನ್ನು ನಿಯೋಜಿಸಲಾಗಿದೆ. 2ಕ್ಕಿಂತ ಹೆಚ್ಚು ಮತಗಟ್ಟೆಗಳಿರುವ ಕೇಂದ್ರಗಳಿಗೆ ಹೆಚ್ಚುವರಿ ಪೊಲೀಸರನ್ನು ಸಹ ನಿಯೋಜಿಸಲಾಗಿದೆ. 4736 ಮತಗಟ್ಟೆ ಸಿಬ್ಬಂದಿ ಈ ಮತದಾನದ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮತದಾನ ಕಡ್ಡಾಯ : ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನವನ್ನು ಕಡ್ಡಾಯಗೊಳಿಸಲಾಗಿದ್ದು, ಮತದಾರರು ತಪ್ಪದೆ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಜೂನ್ 2ರಂದು ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ, ಬಿ.ಬಿ.ಎಂ.ಪಿ. ವ್ಯಾಪ್ತಿ ಹೊರತುಪಡಿಸಿ ಉಳಿದ ಗ್ರಾಮಾಂತರ ಪ್ರದೇಶಗಳನ್ನು ಸರ್ಕಾರಿ, ಖಾಸತಿ ಕಛೇರಿ ಹಾಗೂ ಕಾರ್ಖಾನೆಗಳಿಗೆ ಒಂದು ದಿನದ ರಜೆಯನ್ನು ಘೋಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+