Bengaluru Roads: ಬೆಂಗಳೂರು ನಗರ 389 ಕಿ. ಮೀ. ರಸ್ತೆ 694 ಕೋಟಿಯಲ್ಲಿ ಅಭಿವೃದ್ಧಿ

ಬೆಂಗಳೂರು, ನವೆಂಬರ್ 25: ಉದ್ಯಾನ ನಗರಿ ಬೆಂಗಳೂರಿನ ರಸ್ತೆಗಳ ಬಗ್ಗೆ ಸದಾ ಕಂಪ್ಲೇಟ್ ಇದ್ದೇ ಇರುತ್ತದೆ. ರಸ್ತೆಗುಂಡಿ, ಸಂಚಾರ ದಟ್ಟಣೆ ಸೇರಿದಂತೆ ರಸ್ತೆಯಲ್ಲಿ ಹಲವು ಸಮಸ್ಯೆ ಇದೆ. ನಗರದಲ್ಲಿ ವೈಟ್ ಟಾಪಿಂಗ್ ಮೂಲಕ ಹಲವು ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗ 389.68 ಕಿ. ಮೀ. ರಸ್ತೆಯನ್ನು ಪುನರ್ ಅಭಿವೃದ್ಧಿಗೊಳಿಸಲು ಸರ್ಕಾರ ಒಪ್ಪಿಗೆಯನ್ನು ನೀಡಿದೆ.

ನಗರಾಭಿವೃದ್ಧಿ ಇಲಾಖೆ ಬೆಂಗಳೂರು ನಗರದ 389.68 ಕಿ. ಮೀ. ರಸ್ತೆಯನ್ನು 694 ಕೋಟಿ ರೂ. ವೆಚ್ಚದಲ್ಲಿ ಪುನರ್ ಅಭಿವೃದ್ಧಿಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆಯನ್ನು ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎರಡು ಆರ್ಥಿಕ ವರ್ಷದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ.

Bengaluru City 389 KM Roads Resurface At Rs 694 Crore

ಬೆಂಗಳೂರು ನಗರದ ಅದರಲ್ಲೂ ಹೊರ ವಲಯದ ರಸ್ತೆಗಳ ಬಗ್ಗೆ ಸದಾ ದೂರುಗಳು ಕೇಳಿ ಬರುತ್ತವೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಹಲವು ಪೋಸ್ಟ್‌ಗಳನ್ನು ಹಾಕಲಾಗುತ್ತದೆ. ಆದ್ದರಿಂದ ಹೊರ ವಲಯದ ರಸ್ತೆಗಳನ್ನು ಆದ್ಯತೆಯ ಮೇಲೆ ಪುನರ್ ಅಭಿವೃದ್ಧಿಗೊಳಿಸಲಾಗುತ್ತದೆ.

694 ಕೋಟಿ ರೂ. ವೆಚ್ಚ: ಬೆಂಗಳೂರು ನಗರವನ್ನು ವಿಭಾಗವಾಗವಾರು ಮಾಡಿ 694 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕೇಂದ್ರ ಬೆಂಗಳೂರು ವಿಭಾಗಕ್ಕೆ ಹೆಚ್ಚು ಎಂದರೆ 429.5 ಕೋಟಿ ರೂ. ಅನುದಾನ ಲಭ್ಯವಾಗಿದೆ. ಯಲಹಂಕ, ಬೊಮ್ಮನಹಳ್ಳಿ, ಆರ್‌ಆರ್ ನಗರ ಸೇರಿದಂತೆ 9 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆಗಳ ಪುನರ್ ಅಭಿವೃದ್ಧಿ ನಡೆಯಲಿದೆ.

ನಗರದ ಟೆಕ್ ಹಬ್ ಆಗಿರುವ ಮಹದೇವಪುರ ವಿಭಾಗ ವ್ಯಾಪ್ತಿಗೆ 140 ಕೋಟಿ ರೂ. ಮತ್ತು ದಾಸರಹಳ್ಳಿ ವ್ಯಾಪ್ತಿಗೆ 20 ಕೋಟಿ ರೂ. ಅನುದಾನ ಸಿಕ್ಕಿದೆ. 264 ಕೋಟಿ ರೂ. ಅನುದಾನವನ್ನು ನಗರದ ಹೃದಯ ಭಾಗದ ರಸ್ತೆಗೆ ಮೀಸಲಿಡಲಾಗಿದೆ.

ನಗರದ ವಿವಿಧ ಶಾಸಕರ ಬೇಡಿಕೆ, ಒತ್ತಾಯದಂತೆ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ನಗರದ 197 ರಸ್ತೆಗಳನ್ನು ರಿಪೇರಿ ಮಾಡುವ ಯೋಜನೆ ರೂಪಿಸಿತು. ಇದಕ್ಕೆ ಸುಮಾರು 659.71 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ತುರ್ತಾಗಿ ರಿಪೇರಿ ಆಗಬೇಕಾದ ರಸ್ತೆಗಳ ಪಟ್ಟಿಗೆ ಆದ್ಯತೆ ನೀಡಿ ರಸ್ತೆಗಳನ್ನು ಅಂತಿಮಗೊಳಿಸಲಾಯಿತು.

ನವೆಂಬರ್‌ನಲ್ಲಿ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಈ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿತು. ಆಗ 218 ರಸ್ತೆಗಳ ಪಟ್ಟಿ ಸಿದ್ಧವಾಯಿತು. ಈಗ ಇಲಾಖೆಯ ಒಪ್ಪಿಗೆಯೂ ಸಿಕ್ಕಿರುವ ಕಾರಣ ಬಿಬಿಎಂಪಿ ಯೋಜನೆಯ ಕಾಮಗಾರಿ ಆರಂಭಿಸಲಿದೆ. 2025ರ ಜನವರಿಯಲ್ಲಿ ಈ ಕಾಮಗಾರಿ ಆರಂಭವಾಗಲಿದೆ.

ಬಿಬಿಎಂಪಿ ರಸ್ತೆಗಳ ಪುನರ್ ಅಭಿವೃದ್ಧಿಯನ್ನು ತಾಂತ್ರಿಕವಾಗಿ ಸಹ ಉತ್ತಮವಾಗಿರುವಂತೆ ಮಾಡುತ್ತಿದೆ. ಇದಕ್ಕಾಗಿ 11 ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿಯಲ್ಲಿ ಐಐಎಸ್‌ಸಿ, ಡಬ್ಲ್ಯುಆರ್‌ಐನ ತಜ್ಞರು ಇದ್ದಾರೆ. ಯಾವ ಮಾದರಿಯಲ್ಲಿ ಈ ಕಾಮಗಾರಿ ನಡೆಸಬೇಕು ಎಂದು ಮಾರ್ಗಸೂಚಿಯನ್ನು ಸಮಿತಿ ರಚನೆ ಮಾಡಲಿದೆ.

ಬೆಂಗಳೂರು ನಗರದ ರಸ್ತೆಯನ್ನು ಮಾತ್ರ ಪುನರ್ ಅಭಿವೃದ್ಧಿ ಮಾಡುವುದಿಲ್ಲ. ಪಾದಚಾರಿ ಮಾರ್ಗವನ್ನು ಸಹ ಅಭಿವೃದ್ಧಿಗೊಳಿಸಲಾಗುತ್ತದೆ. ಡಿಸೆಂಬರ್‌ 15ರ ಬಳಿಕ ಈ ಕುರಿತು ಅಂತಿಮ ಮಾರ್ಗಸೂಚಿ ತಯಾರಾಗಲಿದ್ದು, ಬಳಿಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+