ಇದು ಸಾಧ್ಯ! ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ
ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ ಸಾಧ್ಯ ಎಂದು ಯು.ಎಸ್ ಮೂಲದ ಸಂಸ್ಥೆಯೊಂದು ಪ್ರಸ್ತಾವನೆ ಹೊತ್ತು ತಂದಿದೆ. ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದೆ.
ಬೆಂಗಳೂರು, ಜನವರಿ 17: ಬೆಂಗಳೂರಿನಿಂದ ಚೆನ್ನೈಗೆ 30 ನಿಮಿಷ ಪ್ರಯಾಣ ಸಾಧ್ಯ ಎಂದು ಯು ಎಸ್ ಮೂಲದ ಸಂಸ್ಥೆಯೊಂದು ಪ್ರಸ್ತಾವನೆ ಹೊತ್ತು ತಂದಿದೆ. ಬುಲೆಟ್ ರೈಲಿಗಿಂತಲೂ ವೇಗವಾಗಿ, ಅತ್ಯಂತ ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ಯೋಜನೆ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿದೆ.
ಭಾರತದಲ್ಲಿ ಬಹುಕೋಟಿ ರೂ. ಮೊತ್ತದ ಬುಲೆಟ್ ರೈಲು ಯೋಜನೆ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಹೊಸ ಯೋಜನೆಗೆ ಮೋದಿ ಸರ್ಕಾರ ಮಣೆ ಹಾಕಿದರೂ ಅಚ್ಚರಿಪಡಬೇಕಾಗಿಲ್ಲ.

ಹೈಪರ್ಲೋಪ್ ಟ್ರಾನ್ಸ್ಪೋರ್ಟ್ ಸಿಸ್ಟಮ್ (ಎಚ್ಟಿಎಸ್) ಸಂಸ್ಥೆ ಈ ರೈಲನ್ನು ಅಭಿವೃದ್ಧಿ ಪಡಿಸುತ್ತಿದೆ. ಇದು ಗಂಟೆಗೆ 1,216 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಉದಾಹರಣೆಗೆ ಬೆಂಗಳೂರು ಹಾಗೂ ಚೆನ್ನೈ ನಡುವಿನ 345 ಕಿ.ಮೀ. ದೂರವನ್ನು ಈ ರೈಲು 30 ನಿಮಿಷದಲ್ಲಿ ಕ್ರಮಿಸಲಿದೆ ಎಂದು ಈ ಸೂಪರ್ ಸಾನಿಕ್ ರೈಲಿನ ನಿರ್ಮಾಣಗಾರ ಎಲಾನ್ ಹೇಳಿದ್ದಾರೆ.
ಇಂಧನ ರಹಿತ ರೈಲು: ಸೂಪರ್ ಸಾನಿಕ್ ರೈಲು ಹಳಿಗಳ ಮೇಲೆ ಚಲಿಸುವುದಿಲ್ಲ. ಕಾಂಕ್ರಿಟ್ ಪಿಲ್ಲರ್ ನಿರ್ಮಿಸಿ, ಅದರ ಮೇಲೆ ಕೊಳವೆಯ ಮಾದರಿಯಲ್ಲಿ ಮಾರ್ಗ ನಿರ್ವಿುಸಲಾಗುತ್ತದೆ. ಇದು ಅರೆನಿರ್ವಾತ ಪ್ರದೇಶವಾಗಿರಲಿದ್ದು, ಒತ್ತಡದ ಬಲದಿಂದ ರೈಲು ಸೂಪರ್ ಸಾನಿಕ್ ವೇಗ ಪಡೆಯಲಿದೆ.
ಟ್ಯೂಬ್ ರೈಲು: ಕೊಳವೆ ರೀತಿಯ ಮಾರ್ಗಗಳ ಮೇಲೆ ಸೋಲಾರ್ ಪ್ಯಾನಲ್ಗಳನ್ನು ಅಳವಡಿಸಿ, ಇದರಿಂದ ಉತ್ಪಾದಿಸಲಾದ ವಿದ್ಯುತ್ನಿಂದ ರೈಲು ಓಡುತ್ತದೆ. ರೈಲಿನ ತುದಿಯಲ್ಲಿ ಲೈನರ್ ಮೋಟಾರ್ ಅಳವಡಿಸಲಾಗುತ್ತಿದ್ದು, ಇದು ಇಂಜಿನ್ ರೀತಿಯಲ್ಲಿ ಕೆಲಸ ಮಾಡಲಿದೆ. ಈ ರೈಲಿಗೆ ಇಂಧನ ಅಗತ್ಯವಿಲ್ಲ, ಹೀಗಾಗಿ ಇಂಧನ ಉಳಿತಾಯ ಸಾಧ್ಯ.












Click it and Unblock the Notifications